Composer : Shri Vadirajaru
ನಾರಾಯಣನ ನೆನೆ ಮನವೆ |
ನಾರಾಯಣನ ವರ್ಣಿಸು ಮನ್ನಿಸು
ಆರಾಧನೆಗಳ ಮಾಡುತ ಪಾಡುತ
ನೀರಾಜನದಿಂದ ಅರ್ಚಿಸು ಮೆಚ್ಚಿಸು
ಪಾರಾಯಣ ಪ್ರಿಯನಾ,
ವೇದ ಪಾರಾಯಣ ಪ್ರಿಯನಾ || ಪ.||
ಅವನ ಶ್ರವಣ ಮನನ ನಿಧಿಧ್ಯಾಸನ
ಆ ವಿಷ್ಣುವಿನ ಭಕ್ತಿ ಮಹಾ ಪ್ರಸಾದಂಗಳು
ಕೈವಲ್ಯ ಪದಕ್ಕೆ ನಿಚ್ಚಣಿಕೆ ಎಂದು
ಭಾವಜ್ಞರು ಪೇಳ್ವರು |ದೇವ ಭಾವಜ್ಞರು ಪೇಳ್ವರು ||
ಜೀವಕೆ ಜವನ ಬಾಧೆಗಳನು ತಪ್ಪಿಸಿ
ಪಾವನ ಪುರದೊಳಗ್ ಎಂದೆಂದು
ಆವಾಸವ ಮಾಡಿ ಸುಖಿಸ ಬೇಕಾದರೆ
ಸೇವಿಸು ವೈಷ್ಣವರ [೧] ನೀನು
ದ್ವಾರಾವತಿಯ ಗೋಪಿಚಂದನದಿಂದ
ಶ್ರೀರಮಣನ ವರ ನಾಮವ ನೆನೆ-ದೆರಡಾರು
ಊಧ್ರ್ವ ಪುಂಡ್ರಂಗಳ ಧರಿಸುತ
ವೀರವೈಷ್ಣವ ಗುರುವ |ನೀ ವೀರವೈಷ್ಣವ ಗುರುವ ||
ಸೇರಿ ಸಂತಪ್ತ ಸುದರುಶನ ಶಂಖವ
ಧಾರಣವನು ಭುಜಯುಗದೊಳು ಮಾಡಿ
ಮುರಾರಿಯ ಮಂತ್ರಗಳವರಿಂದಲಿ
ಕೇಳಿ ಓರಂತೆ ಜಪಿಸುತಿರು | ೨| ಮನವೆ
ಕಂದ ಬಾರೆಂದರೆ ನಂದನಿಗೊಲಿದಿಹ
ಕುಂದುಕೊರತೆ ಬಂದರೆ ನೊಂದುಕೊಳ್ಳನು
ಇಂದಿರೆಯರಸ ಮುಕುಂದನೆ ಮುಕುತಿಯಾ
ನಂದನವನೀವ ದೇವ | ಆನಂದನವನೀವ ದೇವ
ಸಂದೇಹವಿಲ್ಲದೆ ಒಂದೆಮನದಿ ಗೋವಿಂದನ
ನೆನೆದ ಗಜೇಂದ್ರನಿಗೊಲಿದ ಉಪೇಂದ್ರನ
ಶುಭಗುಣ ಸಾಂದ್ರನ, ಯದುಕುಲ
ಚಂದ್ರನ ವಂದಿಸಿರೊ [೩]
ತುಷ್ಟನಹುದೊ ಎಳ್ಳಷ್ಟು ಮುಂದಿಟ್ಟರೆ
ಅಷ್ಟಿಷ್ಟೆನ್ನದೆ ಸಕಲೇಷ್ಟಂಗಳ
ಕೊಟ್ಟು ಕಾವನು ಶಕ್ರನಿಗೆ
ತ್ರಿವಿಷ್ಟಪ ಪಟ್ಟವ ಗಟ್ಟಿದವ ||
ನಿಷ್ಟುರನಲ್ಲ ವಿಶಿಷ್ಟರಿಗೊಲಿದಿಹ
ದುಷ್ಟರ ತರಿದಟ್ಟಿದ ಜಗಜಟ್ಟಿ
ಅರಿಷ್ಟ ಮುಷ್ಟಿ ಕಾದ್ಯರ ಹುಡಿಗುಟ್ಟಿದ
ವಿಠ್ಠಲ ಬಲು ದಿಟ್ಟ [೪] ನಮ್ಮ
ಲೋಕದಿ ವರಂ ವರಯ ಭದ್ರಂತೆ ಋತೆ
ಕೈವಲ್ಯ ಮಾತ್ಮನಃ
ಏಕ ಏವೇಶ್ವರಸ್ತಸ್ಯ
ಭಗವಾನ್ ವಿಷ್ಣುರವ್ಯಯ ||
ಎಂಬಾ ಈ ಕಲಿಯುಗದಲ್ಲಿ ಬೇಕಾದ ಪುರಾಣ
ವಾಕು ವಿವೇಕದಿ ಮನದಿ ವಿಚಾರಿಸಿ ಸ್ವೀಕರಿಸು
ವೈಷ್ಣವರ ಮತವ ,
ನಿರಾಕರಿಸನ್ಯಮತವ [೫]
ಆವನ ಪಕ್ಷ ಬಲಕ್ಕಿದಿರಿಲ್ಲ ಕೇಳಾವನ
ಕುಕ್ಷಿಯೊಳಕ್ಕು ಜಗತ್ರಯ
ಆವನು ರಕ್ಷಿಪ ಶಿಕ್ಷಿಪನು
ಮತ್ತಾವನು ಪಾವನನು, ಮತ್ತಾವನು ಪಾವನನು ||
ಆವನ ಶಿಕ್ಷೆಗೆ ಮಿಕ್ಕವರಿಲ್ಲ
ಕೇಳಾವನುಪೇಕ್ಷೆಗೆ ಕುಲಕ್ಷಯವೆನಿಪುದು
ಆವನುರುಕ್ರಮ ತ್ರಿವಿಕ್ರಮನೆನಿಸಿದ
ದೇವನಿಗಾವಗೆಣೆ [೬] ನಮ್ಮ
ಓಡ್ಯಾಡುವ ದೇವತೆಗಳು ಬಲ್ಲರು
ಕೂಡುವ ನೊಡುವ ಮುಕುತರೆ ಬಲ್ಲರು
ಬೇಡುವ ಮುನಿಗಳು ಬಲ್ಲರು
ಅವನೊಡನಾಡುವ ರಮೆ ತಾ ಬಲ್ಲಳು ||
ಆಡುವ ಪಾಡುವ ಯಶೋದೆ ಬಲ್ಲಳು
ಕಾಡುವ ಖೂಳರ ಆಡುತ ಕೆಡೆಹಿದ |
ನಾಡೊಳು ಶರಣರ ಕೇಡು ಕಳೆದ
ಕೃಷ್ಣ-ಗೀಡೆನ್ನದಿರು ಮೂಢ [೭]
ಹರಿ ನಿರ್ಮಾಲ್ಯವ ಶಿರದಿ ಧರಿಸು
ಶ್ರೀ ಹರಿ ನೈವೇದ್ಯವನೆ ಭುಂಜಿಸುತಿರು
ನಿತ್ಯ ಇರುಳು ಹಗಲು ಹರಿ ಸ್ಮರಣೆಯ
ಬಿಡದಿರು ದುರುಳರ ಕೂಡದಿರೊ || ನೀನು
ಹರಿಪದ ತೀರಥ ನೇಮವ ಬಿಡದಿರು
ಹರಿ ಪರದೇವತೆ ಎಂದರುಪುತಲಿರು
ಗುರುಮುಖದಿಂದ ಸಚ್ಛಾಸ್ತ್ರ ಪುರಾಣವ
ನಿರುತದಿ ಕೇಳುತಿರು [೮] ನೀನು
ಸಿರಿದೇವಿಯು ಯಾವನಿಗರಸಿ ಸುರ- ಗುರು
ವಿರಿಂಚಿ ಪವನರು ಆವನ ಕುವರರು
ಉರಗಾಧಿಪನಾವನ ಮಂಚ
ವಿಹಗೇಶ್ವರನಾವನ ವಾಹನ |
ಪುರಹರನಾವನುಂಗುಟ ನೀರಪೊತ್ತ
ನಿರ್ಜರ ಪತಿ ಆವನ ಚರಣ ಸೇವಕನಾದ
ಸುರರೊಳಗಾ ಹಯವದನ-ಗಿನ್ನಾರು
ಸರಿಯೆಂದುಸುರುವೆನಯ್ಯ [೯]
nArAyaNana nene manave |
nArAyaNana varNisu mannisu
ArAdhanegaLa mADuta pADuta
nIrAjanadiMda arcisu meccisu
pArAyaNa priyanA,
vEda pArAyaNa priyanA || pa.||
avana SravaNa manana nidhidhyAsana
A viShNuvina Bakti mahA prasAdaMgaLu
kaivalya padakke niccaNike eMdu
BAvaj~jaru pELvaru |dEva BAvaj~jaru pELvaru ||
jIvake javana bAdhegaLanu tappisi
pAvana puradoLag eMdeMdu
AvAsava mADi sukhisa bEkAdare
sEvisu vaiShNavara [1] neenu
dvArAvatiya gOpicaMdanadiMda
SrIramaNana vara nAmava nene-deraDAru
Udhrva puMDraMgaLa dharisuta
vIravaiShNava guruva |nee vIravaiShNava guruva ||
sEri saMtapta sudaruSana SaMKava
dhAraNavanu BujayugadoLu mADi
murAriya maMtragaLavariMdali
kELi OraMte japisutiru | 2| manave
kaMda bAreMdare naMdanigolidiha
kuMdukorate baMdare noMdukoLLanu
iMdireyarasa mukuMdane mukutiyA
naMdanavanIva dEva | AnaMdanavanIva dEva
saMdEhavillade oMdemanadi gOviMdana
neneda gajEMdranigolida upEMdrana
SuBaguNa sAMdrana, yadukula
caMdrana vaMdisiro [3]
tuShTanahudo eLLaShTu muMdiTTare
aShTiShTennade sakalEShTaMgaLa
koTTu kAvanu Sakranige
triviShTapa paTTava gaTTidava ||
niShTuranalla viSiShTarigolidiha
duShTara taridaTTida jagajaTTi
ariShTa muShTi kAdyara huDiguTTida
viThThala balu diTTa [4] namma
lOkadi varaM varaya BadraMte Rute
kaivalya mAtmanaH
Eka EvESvarastasya
BagavAn viShNuravyaya ||
eMbA I kaliyugadalli bEkAda purANa
vAku vivEkadi manadi vicArisi svIkarisu
vaiShNavara matava ,
nirAkarisanyamatava [5]
Avana pakSha balakkidirilla kELAvana
kukShiyoLakku jagatraya
Avanu rakShipa SikShipanu
mattAvanu pAvananu, mattAvanu pAvananu ||
Avana SikShege mikkavarilla
kELAvanupEkShege kulakShayavenipudu
Avanurukrama trivikramanenisida
dEvanigAvageNe [6] namma
ODyaaDuva dEvategaLu ballaru
kooDuva noDuva mukutare ballaru
bEDuva munigaLu ballaru
avanoDanADuva rame tA ballaLu ||
ADuva pADuva yaSOde ballaLu
kADuva khULara ADuta keDehida |
nADoLu sharaNara kEDu kaLeda
kRuShNa-gIDennadiru mooDha [7]
hari nirmAlyava Siradi dharisu
shree hari naivEdyavane BuMjisutiru
nitya iruLu hagalu hari smaraNeya
biDadiru duruLara kUDadiro || neenu
haripada tIratha nEmava biDadiru
hari paradEvate eMdaruputaliru
gurumuKadiMda sacCAstra purANava
nirutadi kELutiru [8] neenu
siridEviyu yAvanigarasi sura- guru
viriMci pavanaru Avana kuvararu
uragAdhipanAvana maMca
vihagESvaranAvana vAhana |
puraharanAvanuMguTa nIrapotta
nirjara pati Avana caraNa sEvakanAda
suraroLagA hayavadana-ginnAru
sariyeMdusuruvenayya [9]
Leave a Reply