Saari Bandane

Composer : Shri Purandara dasaru

Shri Anantharam & grp

ಸಾರಿ ಬಂದನೆ ಪ್ರಾಣೇಶ ಬಂದನೆ
ಸಾರಿ ಬಂದು ಲಂಕಾಪುರವ ಮೀರಿದ ರಾವಣನ
ಕಂಡು ಧೀರನು ವಯ್ಯಾರದಿಂದ |ಅ.ಪ|

ವಾಯುಪುತ್ರನೇ ಶ್ರೀರಾಮನ ದೂತನೇ
ಪ್ರೀತಿಯಿಂದ ಸೀತಾಂಗನೆಗೆ
ಮುದ್ರಿಕೆಯ ತಂದಿತ್ತವನೆ ||೧||

ಭೀಮಸೇನನೇ ಕುಂತಿ ತನಯನೇ
ವಿರಾಟನ ಮನೆಯಲಿ ನಿಂತು ತಾ
ಕೀಚಕನನ್ನು ಸಂಹರಿಸಿದವನೆ ||೨||

ಮಧ್ವರಾಯನೇ ಸರ್ವಜ್ಞ ಶ್ರೇಷ್ಠನೆ
ಅದ್ವೈತವ ಗೆದ್ದು ಪುರಂದರ ವಿಠಲನ
ಮುಂದೆ ನಿಂತವನೆ ||೩||


sAri baMdane prANEsha baMdane
sAri baMdu laMkApurava mIrida rAvaNana
kaMDu dhIranu vayyAradiMda |a.pa|

vAyuputranE SrIrAmana dUtanE
prItiyiMda sItAMganege
mudrikeya taMdittavane ||1||

bhImasEnanE kuMti tanayanE
virATana maneyali niMtu tA
kIcakanannu saMharisidavane ||2||

madhvarAyanE sarvaj~ja SrEShThane
advaitava geddu puraMdara viThalana
muMde niMtavane ||3||

Leave a Reply

Your email address will not be published. Required fields are marked *

You might also like

error: Content is protected !!