Composer: Shri Vyasarajaru
ಜಾಣ ನೀನಹುದೋ ಮುಖ್ಯಪ್ರಾಣ ನೀನಹುದೊ ||ಪ||
ರಾಣಿ ಭಾರತೀ ರಮಣ ನಿನಗೆಣೆಗಾಣೆ
ತ್ರಿಭುವನದೊಳಗೆ
ಸರ್ವ ಪ್ರಾಣಿಗಳ ಹೃದಯದಲಿ
ಮುಖ್ಯಪ್ರಾಣ-ನೆಂದೆನಿಸಿದೆಯೊ ಸ್ವಾಮೀ ||ಅ.ಪ||
ಧೀರ ನೀನಹುದೋ ವಾಯುಕುಮಾರ ನೀನಹುದೊ
ಸಾರಿದವರ ಮನೋರಥಂಗಳ
ಬಾರಿ ಬಾರಿಗೆ ಕೊಡುವೆನೆನುತಲಿ
ಕ್ಷೀರನದಿ ತೀರದಲಿ ನೆಲೆಸಿಹ
ಮಾರುತಾವತಾರ ಹನುಮ ||೧||
ಧಿಟ್ಟ ನೀನಹುದೊ ಬೆಟ್ಟವ ತಂದಿಟ್ಟವ ನೀನಹುದೊ
ರೆಟ್ಟೆ ಹಿಡಿದಕ್ಷಯ ಕುಮಾರನ
ಕುಟ್ಟಿ ದೈತ್ಯರ ಕೆಡಹಿ ಬೇಗದಿ
ಸುಟ್ಟುಲಂಕೆಯ ಸೀತೆಗುಂಗುರ ಕೊಟ್ಟು
ಜಗಜ್ಜಟ್ಟಿ ಹನುಮ||೨||
ಚಂಡ ನೀನಹುದೊ ದುರಿತವ ಮಾರ್ತಾಂಡ ನೀನಹುದೊ
ಕುಂಡಲ ಗಿರಿಘಂಟೆ ಉಡಿಯಲಿ
ಪೆಂಡು ನೂಪುರ ಕಾಲಲಂದುಗೆ
ತಂಡ ತಂಡದಿ ಕೃಷ್ಣನಂಘ್ರಿ
ಪುಂಡರೀಕಗೆ ಕೈಯ ಮುಗಿದು ||೩||
jANa nInahudO muKyaprANa nInahudo ||pa||
rANi BAratI ramaNa ninageNegANe
triBuvanadoLage
sarva prANigaLa hRudayadali
muKyaprANa-neMdenisideyo swAmI ||a.pa||
dhIra nInahudO vAyukumAra nInahudo
sAridavara manOrathaMgaLa
bAri bArige koDuvenenutali
kShIranadi tIradali nelesiha
mArutAvatAra hanuma ||1||
dhiTTa nInahudo beTTava taMdiTTava nInahudo
reTTe hiDidakShaya kumArana
kuTTi daityara keDahi bEgadi
suTTulaMkeya sIteguMgura koTTu
jagajjaTTi hanuma||2||
caMDa nInahudo duritava mArtAMDa nInahudo
kuMDala giriGaMTe uDiyali
peMDu nUpura kAlalaMduge
taMDa taMDadi kRuShNanaMGri
puMDarIkage kaiya mugidu ||3||
Leave a Reply