Guruvara dakshina murti

Composer : Shri Prasanna Srinivasa dasaru

By Smt.Shubhalakshmi Rao

ಗುರುವರ ದಕ್ಷಿಣಾ ಮೂರ್ತಿಗೆ ಎರಗುವೆ
ಪುರಂದರ ಮುಖ ಸುರ ವೃಂದ ವಂದಿತರು
ಪರಮಾತ್ಮನು ಶ್ರೀ ರಾಘವ ಸಿಂಹನ
ಪರಮ ಭಕ್ತಾಗ್ರಣಿ ಶರಣರ ಸುರತರು [ಪ]

ಮೌತಿಕಾಕ್ಷಮಾಲ ಅಮೃತ ಕಲಶ ಅಭಯ
ವಿದ್ಯಾಮುದ್ರಾ ದರ್ಶಕ ಕೈ ಪದ್ಮಗಳ್
ಸುಂದರ ತರ ಶುದ್ಧ ಸ್ಫಟಿಕಾಮಲವರ್ಣ
ಇಂಥ ದಕ್ಷಿಣ ಮೂರ್ತಿಗೆ ಆನಮಿಸುವೆ (೧)

ಉರಗ ಭೂಷಣ ದಿವ್ಯ ಹೊಳೆವ ಆಭರಣಗಳ್
ಚಂದ್ರ ಚೂಡ ತ್ರಿನೇತ್ರ ಕೃಪಾಕರ
ದಕ್ಷ ಪ್ರಜೇಶ್ವರಾದ್ಯ-ಮರರಿಂದೀಡ್ಯ ಈ
ದಕ್ಷಿಣ ಮೂರ್ತಿಯ ಸ್ಮರಿಸೆ ಸಂತೈಪರು (೨)

ಶ್ರೀಪತಿ ಜ್ಞಾನ ಪ್ರದರ್ಶಿಸಿ ತೇಜಸ್ ಐಶ್ವರ್ಯ ಈವೋರು
ಅಪಮೃತ್ಯು ವಿಷರೋಗ ಪರಿಹರಿಸುವರು
ಅಬ್ಜಜ ಪಿತ ಶ್ರೀ ಪ್ರಸನ್ನ ಶ್ರೀನಿವಾಸ
ಹೃತ್ಪದ್ಮದಿ ಕಾಂಬ ಮೇಧಾ ಕೊಡುವರು |
ಗುರುವರ ದಕ್ಷಣಾ ಮೂರ್ತಿಗೆ ಎರಗುವೆ (೩)


guruvara dakShiNA mUrtige eraguve
puraMdara muKa sura vRuMda vaMditaru
paramAtmanu SrI rAGava siMhana
parama BaktAgraNi SaraNara surataru [pa]

mautikAkShamAla amRuta kalaSa aBaya
vidyAmudrA darSaka kai padmagaL
suMdara tara Suddha sPaTikAmalavarNa
iMtha dakShiNa mUrtige Anamisuve (1)

uraga BUShaNa divya hoLeva ABaraNagaL
caMdra cUDa trinEtra kRupAkara
dakSha prajESvarAdya-marariMdIDya I
dakShiNa mUrtiya smarise saMtaiparu (2)

SrIpati j~jAna pradarshisi tEjas aiSvarya IvOru
apamRutyu viSharOga pariharisuvaru
abjaja pita SrI prasanna SrInivAsa
hRutpadmadi kAMba mEdhA koDuvaru |
guruvara dakShaNA mUrtige eraguve (3)

Leave a Reply

You might also like

error: Content is protected !!