Composer : Shri Gopala dasaru
ಜಯತು ಜಗದಾಧಾರ ಜಯತು ದೋಷವಿದೂರ
ಜಯತು ಶ್ರೀರಂಗ ಎನ್ನಂತರಂಗ ||ಪ||
ಸುಂದರ ಮುಕುಟ ಮುತ್ತಿನ ಝೆಲ್ಲಿ ತುರುಬು ಅರ-
ವಿಂದ ಮುಖನಯನ ಕಸ್ತೂರಿತಿಲಕಾ
ಕುಂದ ಕುಟ್ಮಲದಂತೆ ಮಂದಹಾಸ ವದನ
ಚಂದದ ಕರ್ಣಕುಂಡಲ ಪ್ರಭೆಯ ||೧||
ಇಂದಿರಾಲಯ ವಕ್ಷ ತುಲಸಿ ಮಾಲಾ ಸಿರಿ
ಗಂಧ ಕೌಸ್ತುಭಾಭರಣ ಭೂಷಿತಾ
ಕಂದರವು ಕಂಬುಗ್ರೀವ ಭುಜ ಕೀರ್ತಿ ತೋ-
ಳ್ಬಂದಿ ಹಸ್ತದ ಕರಿಯ ಕಂಕಣಾ ||೨||
ಗುಂಭ ಸುಳಿ ಪೊಕ್ಕಳು ಉದರತ್ರಿವಳಿಯು ಪೀ-
ತಾಂಬರ ಕಟಿಯ ವಡ್ಯಾಣ ಚಲುವಾ
ಸ್ತಂಭ ಉರುಟು ಕದಳಿ ಊರು ಜಾನುಜಂಘೆ
ಗಂಭೀರ ಚರಣದಂದಿಗೆಯನ್ನ ||೩||
ಗೋಪಿಯರ ಪೂರ್ವದಾನೋಂಪಿ ಪುಣ್ಯದ ಫಲವೋ
ತಾ ಪ್ರೇಮದಿಂದ ಪೂರೈಪೆನೆಂದು
ಶ್ರೀಪತಿ ಅನೇಕ ರೂಪನಾಗಿ ನಿಂದು
ಗೋಪತಿ ರಾಸಕ್ರೀಡೆಗೆ ತೊಡಕಿದ್ದು ||೪||
ಮಧು ಕುಂಜವನದಲ್ಲಿ ಚದುರಿಯರ ಬೆರೆದಿನ್ನು
ಮದನನಯ್ಯನು ನಿಂದ ಮಂಡಲದಂತೆ
ಮದಿರಾಕ್ಷಿಯರ ಮನದ ಹದನವರಿತಾ ಕೊಳಲ
ವಿಧಿಸಿ ಊದಿದನಾಗ ವಿಧಿಯ ಜನಕಾ ||೫||
ಕೆಳದಿಯರ ಮುಖ ವಿಕಸಿತವುಕ್ಕಿ ಕೃಷ್ಣ ತ-
ಮ್ಮೊಳಗಾದನೆಂದು ತಿಳಿದರು ಹರುಷದಿ
ಬಳಿಯಲೊಬ್ಬಳನು ನಿಲಿಸಿ ಹೆಗಲಲಿ ಕರವ
ತಳುಕು ಹಾಕಿ ಕುಣಿಯ ಕುಳಿತ ಕೃಷ್ಣಾ ||೬||
ಲಲನೆಯರು ಕರತಳದಲ್ಲಿ ಕರವೆನೆಯಿಟ್ಟು
ನಿಲಿಸಿ ಪಾಡುತಲಿ ಸರಿಗಮದಿಂದಲಿ
ತುಳಿದಲ್ಲೆ ಕೃಷ್ಣನಾ ಸ್ಥಳದಲ್ಲೇ ಹೆಜ್ಜೆ-
ಯೊಳ್ನಿಲಿಸಿ ಕೃಷ್ಣನೊಳು ಆಡೋರು ||೭||
ಬಳಲಿಸದೆ ಬೆವರನೆಲೆಗಳ ನಳನಳಿಸುತ
ಸುಳಿಸಿ ಮಂದವಾಯು ಕೆಳದಿಯರಿಗೆ
ಮಲಕು ಬಿಡಿಸಿ ಹಾರ ತುಳುಕುವನು ಕುಚಗಳ
ಸಲಿಸುವನು ಅವರವರ ಚೆಂದುಟಿಗಳ ||೮||
ಘಿಲುಕು ಘಿಲುಕು ತಾಳಗತಿಗಳಿಂದಲಿಸುತ್ತ
ತಾಳ ಹಾಕಿ ಅಂಗನಾಮಾಂಗನೆಂದು
ನಿಲಿಸದೆ ಆಡುವಾ ಕಳೆವುಕ್ಕಿ ಅಂಬರದಿ
ನಿಲಿಸಿ ಅಜ ಭವ ಸುರರುಗಳು ನೋಳ್ಪರು ||೯||
ದುಂದುಭಿವಾದ್ಯ ತನ್ನಿಂದ ತಾ ಬಾರಿಪವು
ಗಂಧರ್ವರು ಗಾಯನಗಳ ಮಾಡೆ
ಮಂದಾರ ಮಲ್ಲಿಗೆಯ ತಂದು ಪುಷ್ಪವು ಸುರರು
ಚಂದದಿಂದಲಿ ವೃಷ್ಟಿಯ ಕೆರೆದರು ||೧೦||
ಒಂದು ಒಂದಶದಿಂದಲಿ ಅಜಭವರೆಲ್ಲಾ
ತಂದು ಇಟ್ಟರು ಉಡುಗೊರೆಗಳನೆಲ್ಲಾ
ಇಂದುಮುಖಿಯರ ಮನದಾನಂದ ಪೂರ್ತಿಸಿದನು
ಚಂದ ಚಂದದಲಿನ್ನು ಇಂದಿರೇಶಾ ||೧೧||
ಶರಣು ಕರುಣಾನಿಧಿಯೇ ಶರಣು ಗುಣವಾರಿಧಿಯೇ
ಶರಣು ಶರಣರ ಹೊರವಾ ಸುರರ ಮಣಿಯೇ
ಶರಣು ನಾ ನಿನ್ನವರ ಚರಣ ಸೇವಕ ನಾನು
ಶರಣು ಗೋವಳಾ ಗೋಪಿಯರ ಪಾಲಕಾ ||೧೨||
ರಾಸಕ್ರೀಡೆಯಲಿ ಸೋಲಿಸಿ ಗೋಪಿಯರ ಅಭಿ-
ಲಾಷೆ ಪೂರ್ತಿಸಿದಾ ಭಾಸುರ ಮೂರುತಿ
ಪೋಷಿಸುಯೆನ್ನ ಗೋಪಾಲವಿಠ್ಠಲ ವಿಜಯ
ದಾಸರ ಆಸರದಿ ಇಟ್ಟುಯೆನ್ನಾ ||೧೩||
jayatu jagadAdhAra jayatu dOShavidUra
jayatu SrIraMga ennaMtaraMga ||pa||
suMdara mukuTa muttina Jelli turubu ara-
viMda muKanayana kastUritilakA
kuMda kuTmaladaMte maMdahAsa vadana
caMdada karNakuMDala praBeya ||1||
iMdirAlaya vakSha tulasi mAlA siri
gaMdha kaustuBABaraNa BUShitA
kaMdaravu kaMbugrIva Buja kIrti tO-
LbaMdi hastada kariya kaMkaNA ||2||
guMBa suLi pokkaLu udaratrivaLiyu pI-
tAMbara kaTiya vaDyANa caluvA
staMBa uruTu kadaLi Uru jAnujaMGe
gaMBIra caraNadaMdigeyanna ||3||
gOpiyara pUrvadAnOMpi puNyada PalavO
tA prEmadiMda pUraipeneMdu
SrIpati anEka rUpanAgi niMdu
gOpati rAsakrIDege toDakiddu ||4||
madhu kuMjavanadalli caduriyara beredinnu
madananayyanu niMda maMDaladaMte
madirAkShiyara manada hadanavaritA koLala
vidhisi UdidanAga vidhiya janakA ||5||
keLadiyara muKa vikasitavukki kRuShNa ta-
mmoLagAdaneMdu tiLidaru haruShadi
baLiyalobbaLanu nilisi hegalali karava
taLuku hAki kuNiya kuLita kRuShNA ||6||
lalaneyaru karataLadalli karaveneyiTTu
nilisi pADutali sarigamadiMdali
tuLidalle kRuShNanA sthaLadallE hejje-
yoLnilisi kRuShNanoLu ADOru ||7||
baLalisade bevaranelegaLa naLanaLisuta
suLisi maMdavAyu keLadiyarige
malaku biDisi hAra tuLukuvanu kucagaLa
salisuvanu avaravara ceMduTigaLa ||8||
Giluku Giluku tALagatigaLiMdalisutta
tALa hAki aMganAmAMganeMdu
nilisade ADuvA kaLevukki aMbaradi
nilisi aja Bava surarugaLu nOLparu ||9||
duMduBivAdya tanniMda tA bAripavu
gaMdharvaru gAyanagaLa mADe
maMdAra malligeya taMdu puShpavu suraru
caMdadiMdali vRuShTiya keredaru ||10||
oMdu oMdaSadiMdali ajaBavarellA
taMdu iTTaru uDugoregaLanellA
iMdumuKiyara manadAnaMda pUrtisidanu
caMda caMdadalinnu iMdirESA ||11||
SaraNu karuNAnidhiyE SaraNu guNavAridhiyE
SaraNu SaraNara horavA surara maNiyE
SaraNu nA ninnavara caraNa sEvaka nAnu
SaraNu gOvaLA gOpiyara pAlakA ||12||
rAsakrIDeyali sOlisi gOpiyara aBi-
lAShe pUrtisidA BAsura mUruti
pOShisuyenna gOpAlaviThThala vijaya
dAsara Asaradi iTTuyennA ||13||
Leave a Reply