Jaya Jaya Rama – Sita Rama Urutani pada

Composer : Shri Mohana dasaru

By Smt.Shubhalakshmi Rao

ಸೀತ ರಾಮ ಉರುಟಾಣಿ ಪದ – ಶ್ರೀ ಮೋಹನ ದಾಸರು

ಜಯ ಜಯ ರಾಮ ಜಯ ಜಯ ಜಯ
ನಮ್ಮ ಜಾನಕೀ ರಮಣಗೇ [ಪ]

ಇಂದಿರಾದೇವಿ ರಮಣಿ ಶರಣ್ಯ
ಮಂದರ ಗಿರಿಧರ ಶರಣ್ಯ
ಕಂದನ ನುಡಿ ಕೇಳಿ ಕಂಬದಿಂದಲಿ ಬಂದ
ಸಿಂಧು ಶಯನ ಸಲಹುವಾದೆನ್ನ (೧)

ಗುರು ವಿಜಯದಾಸರ ಚರಣಾಸರಸಿರುಹವ
ಮನದೊಳಾಗಿರಿಸಿ
ಹರಿ ಸರ್ವೋತ್ತಮ ಮಂಗಳ ಚರಿತೆಯ
ವಿರಚಿಸುವೆನು ಸುಜನರು ಕೇಳಿ (೨)

ಮುತ್ತೈದೆರೆಲ್ಲಾ ಬೇಗಾದಿ ಬಂದು
ಅರ್ತಿಯಿಂದಲಿ ಶೃಂಗಾರವಾಗಿ
ಚಿತ್ತಜನಯ್ಯನ ಉರುಟಣೆ ಎನುತಾಲಿ
ಮತ್ತ ಗಮನೇರು ಬಂದರಾಗಾ (೩)

ಸರಸ್ವತಿ ಭಾರತಿ ಮೊದಲಾದ
ಸರಸಿಜ ಮುಖಿಯರೆಲ್ಲಾರು ನೆರೆದು
ಸರಸ ಉರುಟಣಿಯ ಮೊಡಬೇಕೆನುತಾಲಿ
ಕರೆಸಿದರಾಗ ಮುತ್ತೈದೆರಾಗ (೪)

ಹೇಮಮಯದ ಮಂಟಪದೊಳಗೆ
ಪ್ರೇಮದಿಂದಲಿ ಹಾಸಿಕೆ ಹಾಕಿ
ಸೋಮವದನನ ಗುಣವ ಕೊಂಡಾಡುತ
ಕಾಮಿನಿಯರು ಕರೆದಾರು ಹಸೆಗೇ (೫)

ಕೌಸಲ್ಯಾದೇವಿ ತನಯಾನೆ ಕೇಳು
ಹರ್ಷ ದಾಯಕ ರಕ್ಷಕನೇಳು
ಹಂಸವಾಹನನಯ್ಯನೆ ಹಸೆಗೆ ಏಳೇಳೆಂದು
ಹಂಸ ಗಮನೆಯರು ಕರೆದರು ಹಸೆಗೆ (೬)

ನಿಗಮವ ತಂದಾ ಮಚ್ಚ್ಯಾನೇಳು
ನಗವ ಬೆನ್ನಿಲಿ ಪೊತ್ತ ಕೂರ್ಮನೇಳು
ಜಗವನುದ್ಧರಿಸಿದ ವರಹ ಮೂರುತಿ ಏಳು
ಮೃಗ ನರ ರೂಪ ಹರಿಗೇಳೆಂದಾರು (೭)

ಸುರನದಿಯ ಪಡೆದ ವಾಮನನೇಳು
ಪರಶುರಾಮ ಮೂರುತಿ ಏಳು
ಶರಧಿಯ ದಾಟಿ ಸೀತೆಯ ತಂದ
ಶಿರಿ ರಾಮಕೃಷ್ಣ ಹಸೆಗೇಳೆಂದರು (೮)

ವ್ರತವನಳಿದ ಬೌದ್ಧನೇಳು
ಅತಿಬಲ ರಾಹುತನೇಳು
ಪೃಥಿವಿಗೊಡೆಯ ರಾಮನೇಳೆಂದು
ಅತಿ ಚಮತ್ಕಾರದಿ ಕರೆದರಾಗ (೯)

ಇಂತು ಬಗೆಯಾಲಿ ತುತಿಸಿ ಕರೆಯೇಕಂತು
ಜನಕನು ಹರುಷದಾಲೆದ್ದು
ಕಾಂತೆ ಕೈ ಪಿಡಿದು ನಡೆ ತರಲಾಗಲು
ನಿಂತಾರು ನಾರಿಯರೆಲ್ಲರಾಗ (೧೦)

ಎತ್ತಿಕೊಂಬುವದು ರಾಘವ ನಿಮ್ಮ ಪತ್ನಿಯ
ನಡೆಸಲಾಗದು ಕೇಳಿನೀ
ಪೃಥ್ವೀಶನಾದರೆ ನಮಗೇನೆ ನುತಾಲಿ
ಸುತ್ತು ಕಟ್ಟಿದರು ವಾಮಾಕ್ಷಿಯರು (೧೧)

ಮಂಗಳಾಂಗಿಯನು ಎತ್ತಿಕೊಂಡು
ರಾಮಹಿಂಗಾದೆ ದ್ವಾರದಲ್ಲಿಗೆ ಬರಲು
ಮಂಗಳದೇವಿಯ ಹೆಸರು ಹೇಳೆನುತಾಲಿ
ಅಂಗನೆಯರು ಅಡ್ಡಗಟ್ಟಿದರಾಗಾ (೧೨)

ನಾಳೆ ಹೇಳುವೆನು ಇವಳ ಹೆಸರು
ತಾಳಲಾರೆನು ಭಾರವು ಎನಲು
ಶ್ರೀ ಲಕ್ಷ್ಮೀದೇವಿಯ ಹೆಸರು ಹೇಳಿದೆ ಬಿಡೆವೆಂದು
ಬಾಲೆಯರೆಲ್ಲಾರು ಇಟ್ಟರು ಕದವಾ (೧೩)

ಸತತ ಶ್ರೀರಾಮನು ನಸುನಗುತಾ
ಸೀತೆಯೆನುತಾ ಹೇಳಿದನು
ರಾಮಾಸೀತೆ ಪುತ್ಥಳಿ ಗೊಂಬೆ ಹೆಸರು
ಹೇಳೆನೆ ರಘು-ನಾಥಾನು ಎಂದಾಳು ಜಾನಕೀ (೧೪)

ಅಂಗಜನಯ್ಯಾ ಸತಿಯು ಸೀತೆಯ ಸಹಿತ
ರಂಗು ಮಾಣಿಕದ ಹಾಸಿಕೆಯ ಮೇಲೆ
ಶೃಂಗಾರದಿಂದಾಲಿ ಬಂದು ಕುಳ್ಳಿರಲಾಗ
ಸುರರೆಲ್ಲಾ ಹಿಗ್ಗಿ ಕರೆದರು ಪೂ ಮಳೆಯಾ (೧೫)

ಸಾಸಿರ ನಾಮದ ಒಡೆಯ ಬಂದಾ
ಶೇಷಶಯನಾ ಮೂರುತಿ ಬಂದಾ
ಭಾಸುರಾಂಗನೆ ಸೀತೆ ಆಳಿದಾ ರವಿಕುಲಾ-ಧೀಶ
ಬಂದಾನು ಎಂದಾರು ಕೇಳೆ (೧೬)

ವಾನರಾಧೀಶನೊಡೆಯಾ ಬಂದಾ
ದಾನವಾಂತಕ ರಾಘವ ಬಂದಾ
ಶ್ರೀ-ಜಾನಕೀದೇವಿ ಪ್ರಾಣದೊಲ್ಲಭ ಜಗ-ತ್ರಾಣ
ಬಂದಾನು ಎಂದಾರು ಕೇಳೆ (೧೭)

ಸತ್ಯ ಸಂಕಲ್ಪ ಶ್ರೀ ಹರಿಯು ಬಂದಾ
ಭೃತ್ಯ ಪಾಲಕ ದೊರೆಯು ಬಂದಾ
ಮಿತ್ರೆ ಜಾನಕಿದೇವಿ ಪ್ರಾಣದೊಲ್ಲಭ
ಸ-ರ್ವೋತ್ತಮ ಬಂದನೆಂದಾರು ಕೇಳೇ (೧೮)

ಸುಗ್ರೀವನ ಪರಿಪಾಲಕ ಬಂದಾ
ಕ-ರಿಗ್ರಾಹ ಸಂಹಾರಿಕ ಬಂದಾ
ವ್ಯಾಘ್ರ ಚರ್ಮಾಂಬರ ಸಖ ಸುಂದರ
ವಿಗ್ರಹ ಬಂದಾ ಎಂದಾರು ಕೇಳೇ (೧೯)

ಇಂದ್ರನ್ನ ಪರಿಪಾಲಕ ಬಂದಾ
ಚಂದ್ರನ್ನ ಪ್ರಭೆಯಾ ಸೋಲಿಪ ಬಂದಾ
ಇಂದುವದನೆ ಸೀತೆ ಪ್ರಾಣದೊಲ್ಲಭ
ರಾಮ-ಚಂದ್ರ ಬಂದನೆಂದಾರು ಕೇಳೇ (೨೦)

ಚಂದನ ಗಂಧೆಯರು ಎಲ್ಲಾರು ಕೂಡಿ
ಗಂಧ ಕುಂಕುಮ ಅರಿಷಿಣ ಕಲಿಸಿ
ಇಂದುವದನೆ ಸೀತೆಯ ಕೈ ಒಳಗಿಟ್ಟು
ಶ್ರೀರಾಮ-ಚಂದ್ರಗೆ ಹಚ್ಚಿಸಿರೆಂದರಾಗ (೨೧)

ವಾರಿಜೋದ್ಭವ ಮೊದಲಾದವರು
ತಾರತಮ್ಯದಿಂದಾಲಿ ಕುಳಿತು
ವಾರಿಜಾಮುಖಿ ಸೀತೆ ನುಡಿಯೆಂದೆನುತಾಲಿ
ಸಾರಿದರಾಗ ಸಂದಣಿಯರೆಲ್ಲಾ (೨೨)

ನಿಲ್ಲಾದೆ ನಿಮ್ಮ ಬಾಯಿಗಳಾಲಿನ್ನು
ಗಲಬಲೆ ಮಾಡಲಾಗದು ಜನರು
ಚೆಲ್ವಾ ಸೀತೆಯಾ ಗಿರಿ ವಾಕು ಕೇಳಬೇಕೆಂದು
ಜಲಜ ಸಂಭವನು ನುಡಿದಾನು ನಗುತಾ (೨೩)

ಕಂಜವದನೆ ಜಾನಕೀದೇವಿ ಅಂಜಲಾಗ
ನಿಮ್ಮ ಪುರುಷಾರಿಗೆ ಕುಂಜರ ವರದಾ
ದಾಕ್ಷಿಣ್ಯ ಬ್ಯಾಡೆಂದು ಅಂಜಾದೆ
ನುಡಿದಾರು ನಸುನಗುತಾ (೨೪)

ದೋಷ ವರ್ಜಿತನೇ ಹರಿ ನಿಮ್ಮ ದೂಷಣೆ
ಮಾಡಿದಳೆನ ಬ್ಯಾಡಿ ಮೋಸದಿಂದಲಿ
ಬಲು ದೈತ್ಯರ ಕೊಂದ ಜಗ-ದೀಶ
ನಿಮ್ಮ ಮುಖವಾ ತೋರೆಂದಾಳು (೨೫)

ದೇವಿ ಹಸ್ತದೊಳು ಅರಿಶಿನವ ಪಿಡಿದು
ಭಾವಜ ನಯ್ಯನ ನುಡಿದಾರಾಗ
ದೇವರ ದೇವೋತ್ತಮ ಶಿಖಾಮಣಿ ದೇವಾ
ನಿಮ್ಮಯ ಮುಖವಾ ತೋರೆಂದಾಳು (೨೬)

ಭಸ್ಮಾಸುರನ ಕೊಂದಾ ಬಹು ಶೂರ
ನಾರಿಕಂಸನಳಿದಾ ಧೀರ
ಅಸುರ ಹಿರಣ್ಯಕನ ಅಸುವ ಹೀರಿದ ದೊಡ್ಡ
ಅಸುರಾಂತಕ ಮುಖವಾ ತೋರೆಂದಾಳು (೨೭)

ವಾಲಿಯ ಸಿಟ್ಟಿನಿಂದಾಲಿ ಕೊಂದು
ಕಾಲ ಯಮನಾನಸುವ ಯುಕ್ತಿಯಿಂದಾ
ಭಳಿರೆ ಮಧು ಕೈಟಭರ ಕೊಂದಾ
ಕಾಲಾಂತಕ ಮುಖವ ತೋರೆಂದಾಳು (೨೮)

ಶ್ರೀನಾಥ ದ್ವಾರಕಾಪುರ ಮಾಡಿ
ಆ ನಂದಿ ಗೋಮಂತಾ ಗಿರಿಗೊಲಿದೆ
ವಾನರಾಧೀಶನಾ ಬಲು ಕೊಂಡಾಡುತ್ತ
ದಾನವಾಂತಕಾ ಮುಖವಾ ತೋರೆಂದಾಳು (೨೯)

ಅರಿಶಿನವಾನು ಹಚ್ಚಿದಳು ಸೀತೆ
ಅರಸನ ಫಣೆಗೆ ಕುಂಕುಮವಾ ಹಚ್ಚಿ
ಸರಸದಿ ವದನಕ್ಕೆ ಗಂಧವಾ ಹಚ್ಚಲು
ಸುರರೆಲ್ಲಾ ನಕ್ಕಾರು ಕೈ ಹೊಡೆದು (೩೦)

ಸರಸ್ವತಿ ಪತಿ ಮೊದಲಾಗಿ ಚಪ್ಪಾಳೆನಿಟ್ಟು
ಹರಸಿದರಾಗ ಜಾನಕಿ ದೇವಿ
ಶಿರಿಯು ಗೆದ್ದಳು ಅಯೋಧ್ಯದ ಅರಸು
ಸೋತನೆಂದು ನಗುತೆ (೩೧)

ಬಾಹುಗಳಿಗೆ ಗಂಧವಾ ಹಚ್ಚಿಸಿ
ಮ್ಯಾಲೆ ಪರಿಮಳಾ ಪೂಸಿದಳು
ಶ್ರೀ ಹರಿಯ ಚರಣಾವ ಪಾಲಿಸಬೇಕೆನುತಲಿ
ಸರಸಾದಿಂದಾಲಿ ನುಡಿದಾಳು ಜಾನಕೀ (೩೨)

ಪಾಷಾಣ ಪೆಣ್ಣಾ ಮಾಡಿದಾ ಚರಣ
ಶೇಷನಾ ಮ್ಯಾಲೆ ಮಲಗಿದ ಚರಣ
ಭಾಸುರಾಂಗಿ ನಿನ್ನ ಲೀಲೆಯಾ ತೋರಿದಾ
ಶೇಷಶಯನ ಚರಣಾ ಪಾಲಿಸೆಂದಾಳು (೩೩)

ಆಕಾಶ ಗಂಗೆಯ ಪಡೆದಾ ಚರಣಾ
ಶಕಟನ ಮುರಿದೊಟ್ಟಿದ ಚರಣಾ
ಭಕುತ ಜನರ ಸೇವೆ ಕೊಂಬ ಚರಣ
ರಕ್ಕಸ ದಲ್ಲಣ ಚರಣಾವ ಪಾಲಿಸೆಂದಾಳು (೩೪)

ಅಂಕುಶದೊಜ್ರ ರೇಖೆಯ ಚರಣಾ
ಕುಂಕುಮಾಂಕಿತ ರಾಶಿಯ ಚರಣಾ
ಬಿಂಕದಿಂದ ಕುರುಪತಿಯ ಕೆಡಹಿದ ಬಿರು-ದಾಂಕ
ನಿನ್ನಯ ಚರಣಾ ಪಾಲಿಸೆಂದಾಳು (೩೬)

ನಸುನಗುತ ಹರಿ ಚರಣ ವೀಕ್ಷಿಸಿ
ಶಶಿಮುಖಿ ಸೀತೆ ಆನಂದದಿಂದಾ
ಮಿಸಣಿಯಂತೊಪ್ಪುವ ಅರಿಶಿನೆಣ್ಣೆಯಾ
ಎಸೆವ ಪಾದಕ್ಕೆ ಹಚ್ಚಿದಳಾಗ (೩೭)

ಕೊರಳಿಗೆ ಪರಿಮಳ ಗಂಧವು ಹಚ್ಚಿ
ಪರಿಪರಿ ಪೂಮಾಲೆ ಕೊರಳಿಗೆ ಹಾಕಿ
ನೀಲವರ್ಣನ ಪಾದ ಪದ್ಮಕ್ಕೆ ಎರಗಿ
ಪಾಲಿಸ ಬೇಕೆಂದಾಳು ಅಂಗನೆ (೩೮)

ಕರಗಳ ಪಿಡಿದೆತ್ತಿದನು ರಾಮಾ
ಹರಸಿದ ಮುತ್ತೈದಾಗೆಂದು
ಪರಮ ಪತಿವ್ರತೆಯೆನಿಸು ಎನುತಾಲಿಹರಿ
ಹರಸೀದಾನು ಹರುಷದಲ್ಲಾಗ (೩೯)

ಅಂಡಜವಾಹ ಭಗವಂತನು
ಹೆಂಡತಿಯ ಮುಖವ ನೋಡೆನುತಲಿ
ಗಂಡು ಮಕ್ಕಳ ಘನವಾಗಿ ಪಡೆಯೆಂದು
ಪುಂಡರೀಕಾಕ್ಷ ಹರಸಿದನಾಗ (೪೦)

ಮಂದಗಮನಿಯ ಕುಳ್ಳಿರಿಸಿ
ಇಂದಿರೇಶ ಮುಂಗುರಳಾ ತಿದ್ದಿ
ಎಂದೆಂದಿಗೆ ಅಗಲದಿರೆಂದು
ರಾಮ-ಚಂದ್ರಾನು ಹರಸಿದನಾಗ (೪೧)

ಭೂಲೋಕದೊಡೆಯ ರಾಘವ ರಾಯನ
ಶ್ರೀಲತಾಂಗಿಯ ಕುಳ್ಳಿರಿಸಿ ದನು
ಬಾಲಕಿಯರೆಲ್ಲಾರು ಗಲಿಬಿಲಿ ಮಾಡಾದಿರೆಂದು
ಫಾಲಾಲೋಚಾನು ನುಡಿದನು ನಗುತ (೪೨)

ಕಂತುಜನಕ ರಾಘವಾ ನಿಮ್ಮಾಪಂಥ
ಸಲ್ಲಾದು ಜಾನಕಿ ಯೊಡನೆ
ಯಂತ್ರವಾಹಕ ಶ್ರೀರಾಮ ಏಳೇಳೆಂದು
ಕಾಂತೆಯರೆಲ್ಲರು ನುಡಿದಾರು ನಗುತಾ (೪೩)

ಭಾಗೀರಥಿ ಪಾರ್ವತಿದೇವಿ ಬೇಗದಿ
ಅರಿಷಿನ ಕೈಲಿ ಕಲಿಸಿ ಸಾಗರ
ಶಯ್ಯನ ಕೈಯೊಳಗಿಟ್ಟು ಬಾಗಿ
ಸೀತೆಯ ಮುಖಕೆ ಹಚ್ಚೆಂದಾರು (೪೪)

ನಿಂದಲ್ಲಿ ನಿಲ್ಲಾದೆ ಚಂಚಳೆ ಲಕ್ಷ್ಮೀ
ಬಂಧು ಬಳಗವ ನಗಲಿಸುವ ತರಳೆ
ತಂದೆ ಮಕ್ಕಳೊಳಗೆ ಕದನವ ನಿಡುವಂಥ
ಮಂದಹಾಸೆ ಮುಖವ ತೋರೆಂದಾನು ರಾಮಾ (೪೫)

ಅಣ್ಣನ ವಂಚಿಸಿ ಬೇಡಿದವಳೇ
ಮನ್ನೆ ಮನ್ನೆಯರಾ ಕಳಿಸಿದವಳೇ
ಚೆನ್ನಾಗಿ ಮನೆಯೋಳಿದ್ದು ಪೋಗುತ
ಚೆನ್ನಾಯಿತೆ ಮುಖವ ತೋರೆಂದಾನು (೪೬)

ಭಾಷೆಯನು ಕೊಟ್ಟು ತಪ್ಪಿಸುವಳೆ
ಕಾಸುವೀಸಾಕೆ ವತ್ತಿ ಬೀಳುವಳೆ
ಹೇಸಿಕಿಲ್ಲದೆ ಕುಲಹೀನನ ಮನೆಯೊಳು
ವಾಸವಾಗಿರುವಾ ಮುಖವ ತೋರೆಂದಾನು (೪೭)

ರಾಮಚಂದ್ರಾನು ಅರಿಶಿನ ಗಂಧವ
ಭೂಮಿಜಳಿಗೆ ಹಚ್ಚಿದನಾಗಾ
ಸಾಮಜಗಮನೆಯ ಹಣೆಗೆ ಕುಂಕುಮ ಹಚ್ಚಿ
ಪ್ರೇಮದಿ ಪರಿಮಳ ಪೂಸಿದಾನು (೪೮)

ಕುಸುಮ ದಂಡೆಯ ಮಾಡಿದರು
ಬಾಸಿಂಗವನು ಕಟ್ಟಿದಾರು
ಭೂಸುರರೆಲ್ಲರು ಮಂತ್ರಾಕ್ಷತೆ ತಳಿದು
ನಿ-ರ್ದೋಷನಾಗೆಂದು ಹರಸಿದರು (೪೯)

ಇಂದುಮುಖಿಯರೆಲ್ಲಾರು ಕೂಡಿನಂದದಿ
ಜಾನಕಿಗೆ ವೀಳ್ಯವನಿತ್ತು
ಅಂದಮಾಣಿಕದ ಅಕ್ಷತೆಗಳ ತಳಿದು
ಮಂದರೋದ್ಧರನ ಹರಿಸಿದರು (೫೦)

ದೇವಿಯನ್ನೆತ್ತಿ ಕೊಂಡು ರಾಮದೇವರ
ಮನೆಗೆ ಬಾಹೋದು ಕಂಡು
ಭಾವುಕರೆಲ್ಲಾ ಹೆಸರು ಪೇಳೆಂದೆನುತ
ದೇವಿ ರಘುನಾಥನೆಂದು ಪೇಳಿದಳಾಗ (೫೧)

ಇಂದುಮುಖಿಯರೆಲ್ಲಾರು ಕೂಡಿ
ಇಂದಿರೇಶಾನೆ ಹೆಸರು ಪೇಳೆನಲು
ಎಂದಾ ಮೇಲೆ ಜಾನಕಿಯೆಂತೆಂದು
ಮಂದರ ಧರನು ನುಡಿದನಾಗ (೫೨)

ಸತಿಪತಿಯರಿಬ್ಬರು ಕೂಡಿ ಅತಿಶಯದಲಿ
ನಮಸ್ಕರಿಸಿದಾರು ಕ್ಷಿತಿಯ ಸುರರಿಗೆ
ಲೀಲೆಯ ತೋರಿದ ದೇವಾಪತಿತ ಪಾವನ್ನ
ಎನ್ನ ಸಲಹು ಎಂದಾನು (೫೩)

ಈ ಕಥೆಯನು ಆದರದಿಂದಾ ಬರೆದು
ಹೇ-ಳಿ ಕೇಳುವ ಜನರಾ ಶ್ರೀಕಾಂತನೊಲಿದು
ಕರುಣಿಸುವ ತಾ ಸಿದ್ಧ ನೇಮದಿಂದಾ
ಪಾಡಿರಿ ಜನರು (೫೪)

ಕುರುಡಾನು ಈ ಕಥೆಯಾನು ಕೇಳಿದರೆ
ಕರುಣದಿಂದಾಲಿ ಕಂಗಳ ಬರಿಸುವ
ಶರಣ ವತ್ಸಲ ತನ್ನ ಶರಣರೊಳಿಟ್ಟು
ಪರಿಪಾಲಿಸುವನು ಶತಸಿದ್ಧ (೫೫)

ದಾರಿದ್ರನಾದವನು ಕೇಳಿದರೆ
ಮೇರೆಯಿಲ್ಲದಾ ಸಿರಿ ಒದಗುವದು ದಾರ
ಇಲ್ಲದ ಬ್ರಹ್ಮಚಾರಿ ತಾ ಕೇಳಲು
ನಾರಿಯ ಸಹಿತೆ ವಾಸಿಸುವನು (೫೬)

ಉದ್ಯೋಗ ಇಲ್ಲದವನು ಕೇಳಿದರೆ
ಸದ್ಯ ಐಶ್ವರ್ಯ ಒದಗುವದು ಸಿದ್ಧ
ಮುದ್ದು ಸುತರಿಲ್ಲದ ಸ್ತ್ರೀಯು ಕೇಳಲು
ಬುದ್ಧಿವಂತ ಸುತರಾಗುವರು ಸಿದ್ಧ (೫೭)

ವಿಭವ ಸಂವತ್ಸರ ಫಾಲ್ಗುಣ ಶುದ್ಧದಿ
ದ್ವಿಜನಾಭಾ ದಿನದಾ ಗುರುವಾರಾ
ಶುಭವಾರಾ ಈ ಕಥೆ ಕೇಳಿದ ಜನರಿಗೆ
ಅಭಯ ಕೊಡುವ ಆನಂದ ಮೂರ್ತಿ (೫೮)

ತಾವರೆ ಕಮಲ ಧರಿಸಿಪ್ಪಪಾವನ
ಮೂರುತಿ ಹೃದಯಾದಲ್ಲಿ
ದೇವಿ ಸಹಿತವಾಗಿ ಕಾವನು ಕರುಣಾದಿ
ನೀವೆಲ್ಲಾರು ತಿಳಿರಿ ಜನರು (೫೯)

ಜಯಜಯ ಲೋಕಪಾಲಕ ದೇವಾ
ಜಯ ಜಯ ಮೋಹನ್ನ ವಿಠ್ಠಲರಾಯಾ
ಜಯ ಜಯ ಪ್ರದ ಜಾಹ್ನವಿ ಜನಕನು
ಜಯ ಜಯವೆಂದು ಮಂಗಳವ ಪಾಡೇ (೬೦)


sIta rAma uruTANi pada – SrI mOhana dAsaru

jaya jaya rAma jaya jaya jaya
namma jAnakI ramaNagE [pa]

iMdirAdEvi ramaNi SaraNya
maMdara giridhara SaraNya
kaMdana nuDi kELi kaMbadiMdali baMda
siMdhu Sayana salahuvAdenna (1)

guru vijayadAsara caraNAsarasiruhava
manadoLAgirisi
hari sarvOttama maMgaLa cariteya
viracisuvenu sujanaru kELi (2)

muttaiderellA bEgAdi baMdu
artiyiMdali SRuMgAravAgi
cittajanayyana uruTaNe enutAli
matta gamanEru baMdarAgA (3)

sarasvati BArati modalAda
sarasija muKiyarellAru neredu
sarasa uruTaNiya moDabEkenutAli
karesidarAga muttaiderAga (4)

hEmamayada maMTapadoLage
prEmadiMdali hAsike hAki
sOmavadanana guNava koMDADuta
kAminiyaru karedAru hasegE (5)

kausalyAdEvi tanayAne kELu
harSha dAyaka rakShakanELu
haMsavAhananayyane hasege ELELeMdu
haMsa gamaneyaru karedaru hasege (6)

nigamava taMdA maccyAnELu
nagava bennili potta kUrmanELu
jagavanuddharisida varaha mUruti ELu
mRuga nara rUpa harigELeMdAru (7)

suranadiya paDeda vAmananELu
paraSurAma mUruti ELu
Saradhiya dATi sIteya taMda
Siri rAmakRuShNa hasegELeMdaru (8)

vratavanaLida bauddhanELu
atibala rAhutanELu
pRuthivigoDeya rAmanELeMdu
ati camatkAradi karedarAga (9)

iMtu bageyAli tutisi kareyEkaMtu
janakanu haruShadAleddu
kAMte kai piDidu naDe taralAgalu
niMtAru nAriyarellarAga (10)

ettikoMbuvadu rAGava nimma patniya
naDesalAgadu kELinI
pRuthvISanAdare namagEne nutAli
suttu kaTTidaru vAmAkShiyaru (11)

maMgaLAMgiyanu ettikoMDu
rAmahiMgAde dvAradallige baralu
maMgaLadEviya hesaru hELenutAli
aMganeyaru aDDagaTTidarAgA (12)

nALe hELuvenu ivaLa hesaru
tALalArenu BAravu enalu
SrI lakShmIdEviya hesaru hELide biDeveMdu
bAleyarellAru iTTaru kadavA (13)

satata SrIrAmanu nasunagutA
sIteyenutA hELidanu
rAmAsIte putthaLi goMbe hesaru
hELene raGu-nAthAnu eMdALu jAnakI (14)

aMgajanayyA satiyu sIteya sahita
raMgu mANikada hAsikeya mEle
SRuMgAradiMdAli baMdu kuLLiralAga
surarellA higgi karedaru pU maLeyA (15)

sAsira nAmada oDeya baMdA
SEShaSayanA mUruti baMdA
BAsurAMgane sIte ALidA ravikulA-dhISa
baMdAnu eMdAru kELe (16)

vAnarAdhISanoDeyA baMdA
dAnavAMtaka rAGava baMdA
SrI-jAnakIdEvi prANadollaBa jaga-trANa
baMdAnu eMdAru kELe (17)

satya saMkalpa SrI hariyu baMdA
BRutya pAlaka doreyu baMdA
mitre jAnakidEvi prANadollaBa
sa-rvOttama baMdaneMdAru kELE (18)

sugrIvana paripAlaka baMdA
ka-rigrAha saMhArika baMdA
vyAGra carmAMbara saKa suMdara
vigraha baMdA eMdAru kELE (19)

iMdranna paripAlaka baMdA
caMdranna praBeyA sOlipa baMdA
iMduvadane sIte prANadollaBa
rAma-caMdra baMdaneMdAru kELE (20)

caMdana gaMdheyaru ellAru kUDi
gaMdha kuMkuma ariShiNa kalisi
iMduvadane sIteya kai oLagiTTu
SrIrAma-caMdrage haccisireMdarAga (21)

vArijOdBava modalAdavaru
tAratamyadiMdAli kuLitu
vArijAmuKi sIte nuDiyeMdenutAli
sAridarAga saMdaNiyarellA (22)

nillAde nimma bAyigaLAlinnu
galabale mADalAgadu janaru
celvA sIteyA giri vAku kELabEkeMdu
jalaja saMBavanu nuDidAnu nagutA (23)

kaMjavadane jAnakIdEvi aMjalAga
nimma puruShArige kuMjara varadA
dAkShiNya byADeMdu aMjAde
nuDidAru nasunagutA (24)

dOSha varjitanE hari nimma dUShaNe
mADidaLena byADi mOsadiMdali
balu daityara koMda jaga-dISa
nimma muKavA tOreMdALu (25)

dEvi hastadoLu ariSinava piDidu
BAvaja nayyana nuDidArAga
dEvara dEvOttama SiKAmaNi dEvA
nimmaya muKavA tOreMdALu (26)

BasmAsurana koMdA bahu SUra
nArikaMsanaLidA dhIra
asura hiraNyakana asuva hIrida doDDa
asurAMtaka muKavA tOreMdALu (27)

vAliya siTTiniMdAli koMdu
kAla yamanAnasuva yuktiyiMdA
BaLire madhu kaiTaBara koMdA
kAlAMtaka muKava tOreMdALu (28)

SrInAtha dvArakApura mADi
A naMdi gOmaMtA girigolide
vAnarAdhISanA balu koMDADutta
dAnavAMtakA muKavA tOreMdALu (29)

ariSinavAnu haccidaLu sIte
arasana PaNege kuMkumavA hacci
sarasadi vadanakke gaMdhavA haccalu
surarellA nakkAru kai hoDedu (30)

sarasvati pati modalAgi cappALeniTTu
harasidarAga jAnaki dEvi
Siriyu geddaLu ayOdhyada arasu
sOtaneMdu nagute (31)

bAhugaLige gaMdhavA haccisi
myAle parimaLA pUsidaLu
SrI hariya caraNAva pAlisabEkenutali
sarasAdiMdAli nuDidALu jAnakI (32)

pAShANa peNNA mADidA caraNa
SEShanA myAle malagida caraNa
BAsurAMgi ninna lIleyA tOridA
SEShaSayana caraNA pAliseMdALu (33)

AkASa gaMgeya paDedA caraNA
SakaTana muridoTTida caraNA
Bakuta janara sEve koMba caraNa
rakkasa dallaNa caraNAva pAliseMdALu (34)

aMkuSadojra rEKeya caraNA
kuMkumAMkita rASiya caraNA
biMkadiMda kurupatiya keDahida biru-dAMka
ninnaya caraNA pAliseMdALu (36)

nasunaguta hari caraNa vIkShisi
SaSimuKi sIte AnaMdadiMdA
misaNiyaMtoppuva ariSineNNeyA
eseva pAdakke haccidaLAga (37)

koraLige parimaLa gaMdhavu hacci
paripari pUmAle koraLige hAki
nIlavarNana pAda padmakke eragi
pAlisa bEkeMdALu aMgane (38)

karagaLa piDidettidanu rAmA
harasida muttaidAgeMdu
parama pativrateyenisu enutAlihari
harasIdAnu haruShadallAga (39)

aMDajavAha BagavaMtanu
heMDatiya muKava nODenutali
gaMDu makkaLa GanavAgi paDeyeMdu
puMDarIkAkSha harasidanAga (40)

maMdagamaniya kuLLirisi
iMdirESa muMguraLA tiddi
eMdeMdige agaladireMdu
rAma-caMdrAnu harasidanAga (41)

BUlOkadoDeya rAGava rAyana
SrIlatAMgiya kuLLirisi danu
bAlakiyarellAru galibili mADAdireMdu
PAlAlOcAnu nuDidanu naguta (42)

kaMtujanaka rAGavA nimmApaMtha
sallAdu jAnaki yoDane
yaMtravAhaka SrIrAma ELELeMdu
kAMteyarellaru nuDidAru nagutA (43)

BAgIrathi pArvatidEvi bEgadi
ariShina kaili kalisi sAgara
Sayyana kaiyoLagiTTu bAgi
sIteya muKake hacceMdAru (44)

niMdalli nillAde caMcaLe lakShmI
baMdhu baLagava nagalisuva taraLe
taMde makkaLoLage kadanava niDuvaMtha
maMdahAse muKava tOreMdAnu rAmA (45)

aNNana vaMcisi bEDidavaLE
manne manneyarA kaLisidavaLE
cennAgi maneyOLiddu pOguta
cennAyite muKava tOreMdAnu (46)

BASheyanu koTTu tappisuvaLe
kAsuvIsAke vatti bILuvaLe
hEsikillade kulahInana maneyoLu
vAsavAgiruvA muKava tOreMdAnu (47)

rAmacaMdrAnu ariSina gaMdhava
BUmijaLige haccidanAgA
sAmajagamaneya haNege kuMkuma hacci
prEmadi parimaLa pUsidAnu (48)

kusuma daMDeya mADidaru
bAsiMgavanu kaTTidAru
BUsurarellaru maMtrAkShate taLidu
ni-rdOShanAgeMdu harasidaru (49)

iMdumuKiyarellAru kUDinaMdadi
jAnakige vILyavanittu
aMdamANikada akShategaLa taLidu
maMdarOddharana harisidaru (50)

dEviyannetti koMDu rAmadEvara
manege bAhOdu kaMDu
BAvukarellA hesaru pELeMdenuta
dEvi raGunAthaneMdu pELidaLAga (51)

iMdumuKiyarellAru kUDi
iMdirESAne hesaru pELenalu
eMdA mEle jAnakiyeMteMdu
maMdara dharanu nuDidanAga (52)

satipatiyaribbaru kUDi atiSayadali
namaskarisidAru kShitiya surarige
lIleya tOrida dEvApatita pAvanna
enna salahu eMdAnu (53)

I katheyanu AdaradiMdA baredu
hE-Li kELuva janarA SrIkAMtanolidu
karuNisuva tA siddha nEmadiMdA
pADiri janaru (54)

kuruDAnu I katheyAnu kELidare
karuNadiMdAli kaMgaLa barisuva
SaraNa vatsala tanna SaraNaroLiTTu
paripAlisuvanu Satasiddha (55)

dAridranAdavanu kELidare
mEreyilladA siri odaguvadu dAra
illada brahmacAri tA kELalu
nAriya sahite vAsisuvanu (56)

udyOga illadavanu kELidare
sadya aiSvarya odaguvadu siddha
muddu sutarillada strIyu kELalu
buddhivaMta sutarAguvaru siddha (57)

viBava saMvatsara PAlguNa Suddhadi
dvijanABA dinadA guruvArA
SuBavArA I kathe kELida janarige
aBaya koDuva AnaMda mUrti (58)

tAvare kamala dharisippapAvana
mUruti hRudayAdalli
dEvi sahitavAgi kAvanu karuNAdi
nIvellAru tiLiri janaru (59)

jayajaya lOkapAlaka dEvA
jaya jaya mOhanna viThThalarAyA
jaya jaya prada jAhnavi janakanu
jaya jayaveMdu maMgaLava pADE (60)

Leave a Reply

Your email address will not be published. Required fields are marked *

You might also like

error: Content is protected !!