Composer : Shri Harapanahalli Bheemavva
ಕಂದನೆಂದೆನಿಸಿದ ಕೌಸಲ್ಯ ದೇವಿಗೆ ರಾಮ ಎನಬಾರದೆ
ಇಂದಿರಾಪತಿ ರಾಮಚಂದ್ರಗೆ ಶ್ರೀರಘುರಾಮ ಎನಬಾರದೆ |೧|
ಶಿಶುವಾಗಿ ಅವತಾರ ಮಾಡಿ ದಶರಥನಲಿ ರಾಮ ಎನಬಾರದೆ
ಋಷಿಯಜ್ಞ ಸಲಹಿ ರಕ್ಕಸರನೆ ಕೊಂದ ಶ್ರೀರಾಮ ಎನಬಾರದೆ |೨|
ಶ್ರೀರಾಮ ಎನಬಾರದೆ
ನೀಟಾಗಿ ನೆನೆ ಭಾನು ಕೋಟಿ ತೇಜ ಶ್ರೀರಾಮ ಎನಬಾರದೆ
ಸಾತ್ವಿಕ ದೈವವೆ ತಾಟಕಾಂತಕ ಶ್ರೀರಾಮ ಎನಬಾರದೆ |೩|
ಪಾದ ನಖವು ಸೋಕಿ ಪಾಪ ನಾಶನವಾಗೆ ರಾಮ ಎನಬಾರದೆ
ಶ್ರೀಪತಿ ಕರುಣದಿ ಶಿಲೆಯು ಸ್ತ್ರೀಯಾಗಲು ರಾಮ ಎನಬಾರದೆ |೪|
ಶ್ರೀರಾಮ ಎನಬಾರದೆ
ಸಕಲ ಸದ್ಗುಣ ಪೋಗಿ ಮಿಥಿಲಾ ಪಟ್ಟಣದಲ್ಲಿ ರಾಮ ಎನಬಾರದೆ
ತ್ರಿಪುರ ಸಂಹಾರ ತ್ರಿನೇತ್ರನ ಧನುವೆತ್ತಿ ರಾಮ ಎನಬಾರದೆ |೫|
ಚೆಲ್ವ ಜಾನಕಿ ಮಲ್ಲಿಗೆಯ ವನಮಾಲೆಯು ರಾಮ ಎನಬಾರದೆ
ವಲ್ಲಭಗ್ ಹಾಕಲು ಪುಲ್ಲಲೋಚನೆ ಸೀತಾರಾಮ ಎನಬಾರದೆ |೬|
ಶೀತಾರಾಮ ಎನಬಾರದೆ
ಮಂಗಳ ಮಹಿಮೆ ಸೀತಾಂಗನೆ ಕೊರಳಿಗೆ ರಾಮ ಎನಬಾರದೆ
ಮಾಂಗಲ್ಯ ಬಂಧನ ಮಾಡಿದ ಮಹಾತ್ಮನು ರಾಮ ಎನಬಾರದೆ |೭|
ಜಗದೇಕ ಸುಂದರಿ ಜಾನಕಿಯನೆ ಗೆದ್ದ ರಾಮ ಎನಬಾರದೆ
ಜಗದೀಶ ಜನಕಗೆ ಜಾಮಾತನೆನಿಸಿದೆ ರಾಮ ಎನಬಾರದೆ |೮|
ಮುದ್ದು ಜಾನಕಿ ಕೂಡಿ ಅಯೋಧ್ಯಕೆ ಬರುತಿರೆ ರಾಮ ಎನಬಾರದೆ
ಮಧ್ಯ ಮಾರ್ಗದಿ ಬಂದಿದ್ದನು ಭಾರ್ಗವ ರಾಮ ಎನಬಾರದೆ |೯|
ತನ್ನ ತಾನೇ ಗೆದ್ದು ಧನ್ಯನೆಂದೆನಿಸಿದ ರಾಮ ಎನಬಾರದೆ
ಬ್ರಹ್ಮ ಶಂಕರರಿಂದಿನ್ನು ಉತ್ತಮನಾದ ರಾಮ ಎನಬಾರದೆ |೧೦|
ಶ್ರೀರಾಮ ಎನಬಾರದೆ
ಪಟ್ಟಗಟ್ಟಲು ಪರಮೋತ್ಸವ ಕಾಲಕ್ಕೆ ರಾಮ ಎನಬಾರದೆ
ದುಷ್ಟ ಕೈಕೆಯಿ ನಿಷ್ಠೂರ್ವೊಚನವ ಕೇಳಿದ ರಾಮ ಎನಬಾರದೆ |೧೧|
ಆ ಲಕುಮಿ ಮಾತಲಕ್ಷ್ಯವ ಮಾಡದೆ ಶ್ರೀ ರಾಮ ಎನಬಾರದೆ
ಲಕ್ಷ್ಮಣ ಲಕ್ಷ್ಮಿ ಕೂಡಿ ವನವಾಸ ತಿರುಗಿದ ರಾಮ ಎನಬಾರದೆ |೧೨|
ಸೀತಾರಾಮ ಎನಬಾರದೆ
ಸೋಸಿಲಿಂದಲಿ ಸತಿ ಆದೇನೆಂದಸುರೆಯ ರಾಮ ಎನಬಾರದೆ
ನಾಶರಹಿತ ಕಿವಿ ನಾಸಿಕನಳಿದ ಶ್ರೀ ರಾಮ ಎನಬಾರದೆ |೧೩|
ದಂಡಕಾರಣ್ಯದಿ ಕಂಡು ಮಾರೀಚನ್ನ ರಾಮ ಎನಬಾರದೆ
ಹಿಂದ್ ಹೋಗೆ ರಾಘವ ಬಂದು ರಾವಣನಲ್ಲಿ ರಾಮ ಎನಬಾರದೆ |೧೪|
ಘಾತಕ ರಾವಣ ಜಗನ್ ಮಾತೆನೊಯ್ಯಲು ರಾಮ ಎನಬಾರದೆ
ಸೋತು ಜಟಾಯು ಯುದ್ಧವ ಮಾಡಿ ತಾ ಬೀಳಲು ರಾಮ ಎನಬಾರದೆ |೧೫|
ಒಲಿದು ಸುಗ್ರೀವಗೆ ವಾಲಿ ವಧೆ ಮಾಡಿ ರಾಮ ಎನಬಾರದೆ
ವಾನರಗಳ ಕೂಡಿ ವಾರಿಧಿ ಕಟ್ಟಿದ ರಾಮ ಎನಬಾರದೆ |೧೬|
ಶ್ರೀರಾಮ ಎನಬಾರದೆ
ಲೋಕ ಮಾತೆಯ ಲಂಕಾ ನಾಥ ತಾ ಒಯ್ದಾಗ ರಾಮ ಎನಬಾರದೆ
ಸೀತಾಕೃತಿಯನಿಟ್ಟಶೋಕ ವನದೊಳು ರಾಮ ಎನಬಾರದೆ |೧೭|
ಮಂಡೋದರಿಯ ಗಂಡನ್ನ ದಶ ಶಿರಗಳ ರಾಮ ಎನಬಾರದೆ
ಚೆಂಡನಾಡಿದ ಕೋದಂಡ ಪಾಣಿಯ ಶ್ರೀರಾಮ ಎನಬಾರದೆ |೧೮|
ಕೋದಂಡರಾಮ ಎನಬಾರದೆ
ಪ್ರೀತಿಯಿಂ ವಿಭೀಷಣಗೆ ಪಟ್ಟವ ಗಟ್ಟಿದ ರಾಮ ಎನಬಾರದೆ
ಸೀತಾ ಸಮೇತನಾಗಿ ಸಿಂಧು ದಾಟಿದ ರಾಮ ಎನಬಾರದೆ |೧೯|
ಆದಿ ಲಕ್ಷುಮಿ ಕೂಡಿ ಅಯೋಧ್ಯಕ್ಕೆ ಬರುತಿರೆ ರಾಮ ಎನಬಾರದೆ
ಶ್ರೀದೇವಿ ಸಹಿತ ಪಟ್ಟಣ ಹೊಕ್ಕ ಪಟ್ಟಾಭಿರಾಮ ಎನಬಾರದೆ |೨೦|
ಭರತ ಸುಮಿತ್ರ ಕೌಸಲ್ಯಗೆ ಸುಖವಿಟ್ಟ ರಾಮ ಎನಬಾರದೆ
ಮುಕ್ತಿ ದಾಯಕ ಮುಂದೆ ಬಿಡದೆ ಕಾಪಾಡುವ ರಾಮ ಎನಬಾರದೆ |೨೧|
ಪತ್ನಿ ವಾರ್ತೆಯ ತಂದ ಪವನ ಸುತಗೆ ಒಲಿದ ರಾಮ ಎನಬಾರದೆ
ಸತ್ಯ ಲೋಕದ ಆಧಿಪತ್ಯವ ಕೊಟ್ಟ ಶ್ರೀ ರಾಮ ಎನಬಾರದೆ |೨೨|
ಶ್ರೀ ರಾಮ ಎನಬಾರದೆ
ರಾಮ ರಾಮನು ಎಂದು ಕರೆಯೇ ಭಕ್ತಿಯ ರಾಮ ಎನಬಾರದೆ
ಪ್ರೇಮದಿ ತನ್ನ ನಿಜಧಾಮವ ಕೊಡುವೋನು ರಾಮ ಎನಬಾರದೆ |೨೩|
ಅರಸನಾಗಯೋಧ್ಯೆಯನಾಳಿ ಯದುಕುಲದಲ್ಲಿ ರಾಮ ಎನಬಾರದೆ
ಹರುಷದಿ ಭೀಮೇಶ ಕೃಷ್ಣನಾಗ್ಯುದಿಸಿದ ರಾಮ ಎನಬಾರದೆ |೨೪|
ಶ್ರೀ ರಾಮ ಎನಬಾರದೆ
kaMdaneMdenisida kausalya dEvige rAma enabArade
iMdirApati rAmacaMdrage SrIraGurAma enabArade |1|
SiSuvAgi avatAra mADi daSarathanali rAma enabArade
RuShiyaj~ja salahi rakkasarane koMda SrIrAma enabArade |2|
SrIrAma enabArade
nITAgi nene BAnu kOTi tEja SrIrAma enabArade
sAtvika daivave tATakAMtaka SrIrAma enabArade |3|
pAda naKavu sOki pApa nASanavAge rAma enabArade
SrIpati karuNadi Sileyu strIyAgalu rAma enabArade |4|
SrIrAma enabArade
sakala sadguNa pOgi mithilA paTTaNadalli rAma enabArade
tripura saMhAra trinEtrana dhanuvetti rAma enabArade |5|
celva jAnaki malligeya vanamAleyu rAma enabArade
vallaBag hAkalu pullalOcane sItArAma enabArade |6|
SItArAma enabArade
maMgaLa mahime sItAMgane koraLige rAma enabArade
mAMgalya baMdhana mADida mahAtmanu rAma enabArade |7|
jagadEka suMdari jAnakiyane gedda rAma enabArade
jagadISa janakage jAmAtaneniside rAma enabArade |8|
muddu jAnaki kUDi ayOdhyake barutire rAma enabArade
madhya mArgadi baMdiddanu BArgava rAma enabArade |9|
tanna tAnE geddu dhanyaneMdenisida rAma enabArade
brahma SaMkarariMdinnu uttamanAda rAma enabArade |10|
SrIrAma enabArade
paTTagaTTalu paramOtsava kAlakke rAma enabArade
duShTa kaikeyi niShThUrvocanava kELida rAma enabArade |11|
A lakumi mAtalakShyava mADade shrI rAma enabArade
lakShmaNa lakShmi kUDi vanavAsa tirugida rAma enabArade |12|
sItArAma enabArade
sOsiliMdali sati AdEneMdasureya rAma enabArade
nASarahita kivi nAsikanaLida SrI rAma enabArade |13|
daMDakAraNyadi kaMDu mArIcanna rAma enabArade
hiMd hOge rAGava baMdu rAvaNanalli rAma enabArade |14|
GAtaka rAvaNa jagan mAtenoyyalu rAma enabArade
sOtu jaTAyu yuddhava mADi tA bILalu rAma enabArade |15|
olidu sugrIvage vAli vadhe mADi rAma enabArade
vAnaragaLa kUDi vAridhi kaTTida rAma enabArade |16|
SrIrAma enabArade
lOka mAteya laMkA nAtha tA oydAga rAma enabArade
sItAkRutiyaniTTaSOka vanadoLu rAma enabArade |17|
maMDOdariya gaMDanna daSa SiragaLa rAma enabArade
ceMDanADida kOdaMDa pANiya SrIrAma enabArade |18|
kOdaMDarAma enabArade
prItiyiM viBIShaNage paTTava gaTTida rAma enabArade
sItA samEtanAgi siMdhu dATida rAma enabArade |19|
Adi lakShumi kUDi ayOdhyakke barutire rAma enabArade
SrIdEvi sahita paTTaNa hokka paTTABirAma enabArade |20|
Barata sumitra kausalyage suKaviTTa rAma enabArade
mukti dAyaka muMde biDade kApADuva rAma enabArade |21|
patni vArteya taMda pavana sutage olida rAma enabArade
satya lOkada Adhipatyava koTTa SrI rAma enabArade |22|
SrI rAma enabArade
rAma rAmanu eMdu kareyE Baktiya rAma enabArade
prEmadi tanna nijadhAmava koDuvOnu rAma enabArade |23|
arasanAgayOdhyeyanALi yadukuladalli rAma enabArade
haruShadi BImESa kRuShNanAgyudisida rAma enabArade |24|
SrI rAma enabArade
Leave a Reply