Composer : Shri Vadirajaru
ಸುವ್ವಿ ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ
ಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿ
ಸುವ್ವಿ ಎಂದು ಪಾಡಿ ಸಜ್ಜನರೆಲ್ಲ ಕೇಳಿ |ಪ|
ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ
ವರ ವಾಣಿರಮಣಗೆ ಶರಣೆಂಬೆ ಸುವ್ವಿ
ವರ ವಾಣಿರಮಣಗೆ ಶರಣೆಂದು ಪೇಳಿದ
ಗುರುವಾದಿರಾಜೇಂದ್ರನ ಕೃತಿಯೆಂದು ಸುವ್ವಿ |೧|
ಪಕ್ಷಿ ವಾಹನ್ನ ಜಗಕ್ಕೆ ಮೋಹನ್ನ
ರಕ್ಕಸದಾಹನ್ನನಿವ ಸುವ್ವಿ
ರಕ್ಕಸದಾಹನ್ನನಿವ ತನ್ನ ಮೊರೆ-
ಹೊಕ್ಕರ ಕಾಯ್ವ ಪ್ರಸನ್ನನಿವ ಸುವ್ವಿ ||೨||
ಯಶೋದೆಯ ಕಂದ ತನ್ನ ವಿಷವನುಣ್ಣೆಂದ
ಕರ್ಕಶದ ಪೂತನಿಯ ಶಿಶುವಾಗಿ ಸುವ್ವಿ
ಕರ್ಕಶದ ಪೂತನಿಯ ಶಿಶುವಾಗಿ ಕೊಂದ ನಮ್ಮ
ಎಸೆವ ಗೋವಿಂದ ಪಾಲಿಸ ಬಂದ ಸುವ್ವಿ ||೩||
ಶಕಟಾಸುರನ್ನ ಮೆಟ್ಟಿ ಕೊಂದ ಬಲು
ವಿಕಟ ದೈತ್ಯನ್ನ ಕೊರಲೆತ್ತಿ ಸುವ್ವಿ
ವಿಕಟದೈತ್ಯನ್ನ ಕೊರಲೆತ್ತಿ ಕೊಂದು ಸರ್ಪನ ಮ-
ಸ್ತಕದಮೇಲೆ ನಲಿವುತ ನಿಂದ ಸುವ್ವಿ||೪||
ಕರುಗಳ ಕಣ್ಣಿಯ ಬಿಡುವಾಗ ನಾರಿಯರೆಲ್ಲರು
ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುವ್ವಿ
ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುರಿದು
ಅವರ್ಬರಲು ಬೆಣ್ಣೆಯ ಕೊಂಡೋಡುವ ಸುವ್ವಿ ||೫||
ಮತ್ತಿಯ ಮರಗಳ ಕಿತ್ತುವಾಗ ಅಲ್ಲಿ
ಭೃತ್ಯರಿಗೊಲಿದು ವರವಿತ್ತ ಸುವ್ವಿ
ಭೃತ್ಯರಿಗೊಲಿದು ವರವಿತ್ತ ತನ್ನ
ಮಿತ್ರಜನಕಾಗಿ ಗಿರಿಯೆತ್ತಿದನೆ ಸುವ್ವಿ ||೬||
ಮಧುರೆಗೆ ಪೋಗಿ ಮಲ್ಲರಸುವ ನೀಗಿ
ಮದಾಂಧ ಮಾವನ್ನ ಮಡುಹಿದ ಸುವ್ವಿ
ಮದಾಂಧ ಮಾವನ್ನ ಮಡುಹಿದ ಶ್ರೀಕೃಷ್ಣ
ಮುದದಿ ತನ್ನವರ ಮುದ್ದಿಸಿದ ಸುವ್ವಿ ||೭||
ಅನಂತಾಸನವೆಂದು ಮತ್ತೊಂದು ನಗರ ಕೃಷ್ಣಗೆ
ಘನೋದಕದ ಮೇಲೆ ಮಿಂಚುತಿಪ್ಪುದು ಸುವ್ವಿ
ಘನೋದಕದ ಮೇಲೆ ಮಿಂಚುತಿಪ್ಪುದು ಅಲ್ಲಿ
ಮನೆ ಮನೆಯಲಿ ಮುಕ್ತರ ಸಂದಣಿ ಸುವ್ವಿ||೮||
ಇಂತು ಹಯವದನ ನಿಶ್ಚಿಂತ ಜಗತ್ಕಾಂತ
ಸಂತರನು ಸದಾ ಸಲಹುವ ಸುವ್ವಿ
ಸಂತರನು ಸದಾ ಸಲಹುವ ಮಾರಾಂತರ ಕೃ-
ತಾಂತನ ಬಳಿಗೆ ಕಳುಹುವ ಸುವ್ವಿ ||೯||
suvvi suvvi suvvi namma SrIramaNage suvvi
suvvi suvvi namma BUramaNage suvvi
suvvi eMdu pADi sajjanarella kELi |pa|
harige SaraNeMbe sirige SaraNeMbe
vara vANiramaNage SaraNeMbe suvvi
vara vANiramaNage SaraNeMdu pELida
guruvAdirAjEMdrana kRutiyeMdu suvvi |1|
pakShi vAhanna jagakke mOhanna
rakkasadAhannaniva suvvi
rakkasadAhannaniva tanna more-
hokkara kAyva prasannaniva suvvi ||2||
yaSOdeya kaMda tanna viShavanuNNeMda
karkaSada pUtaniya SiSuvAgi suvvi
karkaSada pUtaniya SiSuvAgi koMda namma
eseva gOviMda pAlisa baMda suvvi ||3||
SakaTAsuranna meTTi koMda balu
vikaTa daityanna koraletti suvvi
vikaTadaityanna koraletti koMdu sarpana ma-
stakadamEle nalivuta niMda suvvi||4||
karugaLa kaNNiya biDuvAga nAriyarellaru
poravaDalu tA pokku pAlmosarane suvvi
poravaDalu tA pokku pAlmosarane suridu
avarbaralu beNNeya koMDODuva suvvi ||5||
mattiya maragaLa kittuvAga alli
BRutyarigolidu varavitta suvvi
BRutyarigolidu varavitta tanna
mitrajanakAgi giriyettidane suvvi ||6||
madhurege pOgi mallarasuva nIgi
madAMdha mAvanna maDuhida suvvi
madAMdha mAvanna maDuhida SrIkRuShNa
mudadi tannavara muddisida suvvi ||7||
anaMtAsanaveMdu mattoMdu nagara kRuShNage
GanOdakada mEle miMcutippudu suvvi
GanOdakada mEle miMcutippudu alli
mane maneyali muktara saMdaNi suvvi||8||
iMtu hayavadana niSciMta jagatkAMta
saMtaranu sadA salahuva suvvi
saMtaranu sadA salahuva mArAMtara kRu-
tAMtana baLige kaLuhuva suvvi ||9||
Leave a Reply