Shreesha uddhariso

Composer : Shri Tande Shripati vittala

By Smt.Shubhalakshmi Rao

ಶ್ರೀಶ ಉದ್ಧರಿಸೋ ಅಶೇಷ ಪಾಲಕ
ಕರುಣಾ ಸಮುದ್ರನೆ ಶ್ರೀನಿವಾಸ | ಶ್ರೀಶ || ಪ ||

ದೋಷ ದೂರನೇ ನಿಜ ದಾಸರ ಸನ್ಮನ ಪೋಷಕ |
ಕಲಿಕೃತ ದೋಷ ನಾಶಕ |
ಸದ್ಗುಣ ಸುಮನನಿಧೇ |
ವೀಶ ಗಮನ ಫಣೀಶ ಶಯನ
ಸುರೇಶ ಮುಖ ತ್ರಿದಿವೇಶನುತ |
ದಾಸ ಜನ ಸಹವಾಸ ಕೊಡು ಮಹಿದಾಸ
ಈ ಭವ ಕ್ಲೇಶ ಕಳೆದು ||ಅ.ಪ||

ಕಮಲಜ ರಮಣ ಹೃತ್ ಕಮಲಸ್ಥ
ತವಪಾದ ಕಮಲ ನಂಬಿದೆ ಎನ್ನ ಕುಮಲವ ಕಳೆಯೋ |
ಕಮಲಜ ಪಿತ ನಿನ್ನ ವಿಮಲ ಗುಣವ ನಿತ್ಯ ಶಮದಿಂದ |
ಸಂಯುಕ್ತವಾದ ದಮದಿಂದ |
ಗ್ರಂಥೋಕ್ತ ವಿವಿಧ ಕ್ರಮದಿಂದ |
ಮಾನಸದಿ ಧ್ಯಾನಿಪೆ ವಿಮಲ ಸಂಪದ ಎಮಗೆ ಕೊಡು ಎಂದು |
ಪ್ರಾರ್ಥಿಸುವೆ ನಿನಗೆ ನಮಿಪ ಜನರಿಗೆ ಬದಿಗನಂತೆಂದೂ |
ಹೀಗೆಂದು ತಿಳಿದು ನಮಿಸುವೆನು ನಾ ನಿನಗೆ ನಿಜ ಬಂಧು |
ಆನಂದ ಸಿಂಧೋ |
ಸುಮನಸರ ಹೃತ್ಕಮಲದಿ ನೆಲೆಸಿ ಅಮಿತ ಕ್ರಿಯೆಗಳ ಮಾಡಿಸುವಿ |
ಸಂಯಮಜ ವರದ ಅಮರ ರಿಪುಗಣ ದಮನ ಎಮಗೆ ಸುಮನಸಿತ್ತು ||೧||

ಸಾರ ಹೃದಯರ ಉದ್ಧಾರ ಮಾಡುವ
ಸುಕುಮಾರ ಯಾದವ ಕುಲ ವೀರ ಧೀರ |
ಚಾರು ಸನ್ಮಹಿಮನೆ ಮಾರ ಜನಕ ಸೃಷ್ಟಿ ಕಾರಣ |
ಸಂಸಾರವನಧಿಗೆ ತಾರಣ | ಕರಿರಾಜ ರಿಪು ನಿವಾರಣ |
ನಾ ನಿನ್ನ ಚರಣ ಸಾರಿದೆನೊ ಮುರವೈರಿ ನರಹರಿಯೆ |
ಉದ್ಧವ ವರದ ಸುಕುಮಾರ ಅನುಪಮ ಅಮಿತ ಮಹಸಿರಿಯೆ |
ಇಂದ್ರಾತ್ಮಜಗೆ ನೀ ಸಾರಥಿಯೆ ವಿಭುಧೇಶ್ವರರ ದೊರೆಯೆ |
ರಜನೀಶ ಕುಲಜನೇ |
ವಾರಿಜರ ಕಿಟಿ ಮನುಜ ಮೃಗ ಬಲಿ ವೈರಿ ಸ್ವರ್ಗದ ವಹ್ನಿಜನೆ ಕಪಿ |
ವೀರ ಪಾರ್ಥಿಪ ಸುಖದ ಕಲ್ಕಿಯೇ ಚಾರು ತತ್ವ ವಿಚಾರ ಮತಿ ಕೊಡು ||೨||

ಮಂದಜಾಸನ ವಾಯು ನಂದಿವಾಹನ
ಅಹಿ ವಿಹಗೇಂದ್ರ ಪ್ರಮುಖ ಸುರ ವೃಂದ | ವಂದ್ಯ |
ಇಂದಿರಾ ರಮಣನೇ ಮಂದಾಕಿನಿಯ ಪಿತ ಇಂದೆನ್ನ ||
ಬಿನ್ನಪವ ಕೇಳಿ ಮುಂದೆನ್ನ |
ಮರೆಯದಲೆ ಕರುಣದಿಂದೆನ್ನ |
ಭೂರಿಕೃತನ್ನ ಛಂದದಿಂದಲಿ ಮಾಡುವನು ನೀನೇ |
ನಿನ್ನ್ಹೊರತು ಇನ್ನು ಪೊಂದಿದವರನು ಪೊರೆವರನು ಕಾಣೆ |
ಅಜಮಿಳ ಪ್ರಭುಗಾನಂದಪಡಿಸಿದ ಪರಮ ಪ್ರಭು ನೀನೇ |
ಅರವಿಂದ ನೇತ್ರನೇ |
ಹಿಂದುಮುಂದೆದೆಂದಿಗೂ ಗತಿ ಎಂದು ನಂಬಿದೆ ಕರವ ಪಿಡಿಯೋ
ತಂದೆ ಶ್ರೀಪತಿವಿಠಲ ಈ ಭವ ಸಿಂಧುವಿನ ದೆಶೆಯಿಂದ ಶೀಘ್ರದಿ ||೩||


SrISa uddharisO aSESha pAlaka
karuNA samudrane SrInivAsa | SrISa || pa ||

dOSha dUranE nija dAsara sanmana pOShaka |
kalikRuta dOSha nASaka |
sadguNa sumananidhE |
vISa gamana PaNISa Sayana
surESa muKa tridivESanuta |
dAsa jana sahavAsa koDu mahidAsa
I Bava klESa kaLedu ||a.pa||

kamalaja ramaNa hRut kamalastha
tavapAda kamala naMbide enna kumalava kaLeyO |
kamalaja pita ninna vimala guNava nitya SamadiMda |
saMyuktavAda damadiMda |
graMthOkta vividha kramadiMda |
mAnasadi dhyAnipe vimala saMpada emage koDu eMdu |
prArthisuve ninage namipa janarige badiganaMteMdU |
hIgeMdu tiLidu namisuvenu nA ninage nija baMdhu |
AnaMda siMdhO |
sumanasara hRutkamaladi nelesi amita kriyegaLa mADisuvi |
saMyamaja varada amara ripugaNa damana emage sumanasittu ||1||

sAra hRudayara uddhAra mADuva
sukumAra yAdava kula vIra dhIra |
cAru sanmahimane mAra janaka sRuShTi kAraNa |
saMsAravanadhige tAraNa | karirAja ripu nivAraNa |
nA ninna caraNa sArideno muravairi narahariye |
uddhava varada sukumAra anupama amita mahasiriye |
iMdrAtmajage nI sArathiye viBudhESvarara doreye |
rajanISa kulajanE |
vArijara kiTi manuja mRuga bali vairi svargada vahnijane kapi |
vIra pArthipa suKada kalkiyE cAru tatva vicAra mati koDu ||2||

maMdajAsana vAyu naMdivAhana
ahi vihagEMdra pramuKa sura vRuMda | vaMdya |
iMdirA ramaNanE maMdAkiniya pita iMdenna ||
binnapava kELi muMdenna |
mareyadale karuNadiMdenna |
BUrikRutanna CaMdadiMdali mADuvanu nInE |
ninnhoratu innu poMdidavaranu porevaranu kANe |
ajamiLa praBugAnaMdapaDisida parama praBu nInE |
araviMda nEtranE |
hiMdumuMdedeMdigU gati eMdu naMbide karava piDiyO
taMde SrIpativiThala I Bava siMdhuvina deSeyiMda SIGradi ||3||

Leave a Reply

Your email address will not be published. Required fields are marked *

You might also like

error: Content is protected !!