Yadupatiya toramma

Composer : Shri Vadirajaru

ಯದುಪತಿಯ ತೋರಮ್ಮಾ ಯೆನ್ನ ನೀ ಬಿಡದಿರಮ್ಮ
ಯದೆಯೊಳು ನಿನ್ನ ನಿಲಿಸಿಕೊಂಡನಾ
ಖಳಕುಲಖಂಡನಾ ನಿನ್ನಯ ಗಂಡನಾ ||ಪ||

ಸರಸೀಹ ದಳನೇತ್ರೇ ಸದಮಲ ಶುಭಗಾತ್ರೇ
ಸರಸಾದಿ ನಿನ್ನ ಕೂಡ ಮಾತನಾಡುವ
ಭಕ್ತರೊಡನಾಡುವ ಕರುಣಾದಿ ನೋಡುವ ||೧||

ಮದಗಜ ಸಮಯಾತ್ರೆ ಮೇದಿನಿಯೊಳತಿಚಿತ್ರೆ
ಅದುಭೂತ ಪ್ರಳಯಾಬ್ಧಿಯೊಳಿಪ್ಪನ
ನಿನಗೊಲಿದಿಪ್ಪನ ಮನ್ಮಥನಪ್ಪನ ||೨||

ಆದ್ಯಂತಾ ಮಧ್ಯರಹಿತೆ ಅಜಭವಸುರಮಾತೆ
ಮುದ್ದು ಹಯವದನನಾ ಶ್ರೀಧರೇಶನಾ
ಸ್ವಾದಿಪುರವಾಸನ ವಾದಿರಾಜಾಧೀಶನ ||೩||


yadupatiya tOrammA yenna nI biDadiramma
yadeyoLu ninna nilisikoMDanA
KaLakulaKaMDanA ninnaya gaMDanA ||pa||

sarasIha daLanEtrE sadamala SuBagAtrE
sarasAdi ninna kUDa mAtanADuva
BaktaroDanADuva karuNAdi nODuva ||1||

madagaja samayAtre mEdiniyoLaticitre
aduBUta praLayAbdhiyoLippana
ninagolidippana manmathanappana ||2||

AdyaMtA madhyarahite ajaBavasuramAte
muddu hayavadananA SrIdharESanA
svAdipuravAsana vAdirAjAdhISana ||3||

Leave a Reply

Your email address will not be published. Required fields are marked *

You might also like

error: Content is protected !!