Maddu madalariya

Composer : Shri Purandara dasaru

By Smt.Shubhalakshmi Rao

ಮದ್ದು ಮಾಡಲರಿಯಾ ಎನ್ನಮ್ಮ ಶ್ರೀ
ಮುದ್ದು ರಮಾ ದೇವಿ [ಪ]
ಮುದ್ದು ಬಾಲ ಕೃಷ್ಣನಲ್ಲಿ
ಎನ್ನ ಮನಸು ನಿಲ್ಲೊ ಹಾಂಗೆ [ಅ.ಪ]

ವಚನಂಗಳ್ಳೆಲ್ಲ ವಾಸುದೆವನ ಕಥೆಯೆಂದು
ರಚನೆ ಮಾಡುವಲ್ಲಿ ರಕುತಿ ನಿಲ್ಲೊ ಹಾಂಗೆ [೧]

ಸಂತೆ ನೆರಹಿದ ಸತಿಸುತರು ತನ್ನವರೆಂಬೊ
ಭ್ರಾಂತಿ ಬಿಟ್ಟು ನಿಶ್ಚಿಂತ ನಾಗೊ ಹಾಂಗೆ [೨]

ಎನ್ನೊಡಯ ಸಿರಿ ಪುರಂದರ ವಿಠಲನ
ಸನ್ನಿಧಿಯಲಿ ನಾ ನಾಟ್ಯವಾಡೊ ಹಾಂಗೆ [೩]


maddu mADalariyA ennamma SrI
muddu ramA dEvi [pa]
muddu bAla kRuShNanalli
enna manasu nillo hAMge [a.pa]

vacanaMgaLLella vAsudevana katheyeMdu
racane mADuvalli rakuti nillo hAMge [1]

saMte nerahida satisutaru tannavareMbo
BrAMti biTTu niSciMta nAgo hAMge [2]

ennoDaya siri puraMdara viThalana
sannidhiyali nA nATyavADo hAMge [3]

Leave a Reply

Your email address will not be published. Required fields are marked *

You might also like

error: Content is protected !!