Composer : Shri Vidyaratnakara Tirtharu
ಪಾಲಿಸೇ ಎನ್ನ ನಾಮಗಿರಮ್ಮ
ಹರಿಗುರುಗಳ ಕೃಪಾಬಲ ಎನ್ನಲ್ಲಿರುವಂತೆ || ಪ ||
ಕರುಣದಿ ನೋಡೆ ನಾಮಗಿರಮ್ಮ
ವರಗಳ ನೀಡೆ ಇಂದಿರೆ ಎನ್ನ ಸುಖಿಯನ್ನೆ ಮಾಡೆ
ವಾರಿಜಮುಖಿ ನರಪಾಲಾಧಮರ
ದುರ್ಮುಖವ ನೋಡಿಸದಂತೆ || ೧ ||
ಸುಖಚಿದಾಕಾರೆ ಎನ್ನ ಮನೆಗೆ
ದಯವಿಟ್ಟು ಬಾರೇ ನಾರಿಯರಲ್ಲಿ ಸರಿನಿನಗಾರೇ
ಪಂಕಜನೇತ್ರೆ ಕಿಂಕರನೆಂದು
ಆತಂಕ ಬಿಡಿಸೇ ತಾಯೇ || ೨ ||
ಚರಣಾರವಿಂದ ಸೇವಕನಲಿ ಕೃಪೆಯಿಟ್ಟು
ಮಂದಹಾಸದಿ ಬಂದು ಸುಖ ಬುದ್ಧಿಯಿಂದ
ಇಂದಿರಾದೇವಿ ಚಂದ್ರವದನೆ
ಎನ್ನ ಮಂದಿರದೊಳಗಿದ್ದು || ೩ ||
ಶ್ರಿತಸುರಧೇನು ದೇವಿ ನೀನೆಂದು ಬಂದೆನು
ನಾನು ಇಂದಿರೆ ಇಷ್ಟುಪೇಕ್ಷೆ ನಿಂಗೇನು
ಕಷ್ಟಗಳೆಲ್ಲ ನಷ್ಟವಾಗುವ ಪರಿ
ದೃಷ್ಟಿ ಎನ್ನೊಳಗಿಟ್ಟು || ೪ ||
ನರಹರಿ ಜಾಯೇ ನಾಮಗಿರಿಯಮ್ಮ
ಬಂದು ನೀ ಕಾಯೇ ಪೇಳುವುದೇನು ಸರ್ವಜ್ಞೆ
ತಾಯೇ ವಾರಿಜಮುಖಿ ನಿಜ ವರ್ಣಾಶ್ರಮ
ಧರ್ಮ ಚ್ಯುತಿ ಎಂದೂ ಬರದಂತೆ || ೫ ||
pAlisE enna nAmagiramma
harigurugaLa kRupAbala ennalliruvaMte || pa ||
karuNadi nODe nAmagiramma
varagaLa nIDe iMdire enna suKiyanne mADe
vArijamuKi narapAlAdhamara
durmuKava nODisadaMte || 1 ||
suKacidAkAre enna manege
dayaviTTu bArE nAriyaralli sarininagArE
paMkajanEtre kiMkaraneMdu
AtaMka biDisE tAyE || 2 ||
caraNAraviMda sEvakanali kRupeyiTTu
maMdahAsadi baMdu suKa buddhiyiMda
iMdirAdEvi caMdravadane
enna maMdiradoLagiddu || 3 ||
SritasuradhEnu dEvi nIneMdu baMdenu
nAnu iMdire iShTupEkShe niMgEnu
kaShTagaLella naShTavAguva pari
dRuShTi ennoLagiTTu || 4 ||
narahari jAyE nAmagiriyamma
baMdu nI kAyE pELuvudEnu sarvaj~je
tAyE vArijamuKi nija varNASrama
dharma cyuti eMdU baradaMte || 5 ||
Leave a Reply