Indire na ninna

Composer : Shri Vidyaratnakara Tirtharu

By Smt.Shubhalakshmi Rao

ಇಂದಿರೆ ನಾ ನಿನ್ನ ವಂದಿಸಿ ಬೇಡುವೆ
ಬಂದು ನೀ ಪಾಲಿಸೇ ಚಂದಿರವದನೇ || ಪ ||
ಸಿಂಧು ಕುಮಾರಿಯೇ ಎಂದಿಗೂ ನಿನ್ನ ಪದ
ದ್ವಂದ್ವವ ಸೇವಿಪೆನೆಂದು ನಾ ಬೇಡುವೆ || ಅ.ಪ ||

ದೇವಿ ನಿನ್ನಂಘ್ರಿಯ ಸೇವಿಸಿ ಪದ್ಮಭವ
ಭಾವಿ ಫಣೀಶ ಸುರಾಧಿಪರೆಲ್ಲರು
ಈ ವಿಧವಾದನುಭಾವವ ಪೊಂದಿರಲು
ಈ ವಿಷಯಕ್ಕೆ ಶ್ರುತಿ ಸಾವಿರವಿರುವುದೇ || ೧ ||

ಪನ್ನಗವೇಣಿಯೇ ನಿನ್ನನೆ ನಂಬಿರಲು
ಸಣ್ಣಮನುಜರ ವರ್ಣಿಪುದೇಕೆಲೆ
ಎನ್ನಪರಾಧವ ಮನ್ನಿಸಿ ಕೃಪೆಯನು
ಎನ್ನೊಳು ತೋರಲು ಧನ್ಯನಾನಾಗುವೆ || ೨ ||

ತಾಮರಸಾಕ್ಷಿಯೇ ನಾಮಗಿರೀಶ ಶ್ರೀ
ಸ್ವಾಮಿ ನೃಸಿಂಹನ ಕಾಮಿನೀ ಮಣಿಯೇ
ಕೋಮಲಗಾತ್ರೆಯೇ ಶ್ರೀಮಹಾಲಕ್ಷ್ಮಿ ಎನ್ನ
ಧಾಮವ ಬಿಡದಿರೇ ಸೋಮಸಹೋದರಿ || ೩ ||


iMdire nA ninna vaMdisi bEDuve
baMdu nI pAlisE caMdiravadanE || pa ||
siMdhu kumAriyE eMdigU ninna pada
dvaMdvava sEvipeneMdu nA bEDuve || a.pa ||

dEvi ninnaMGriya sEvisi padmaBava
BAvi PaNISa surAdhiparellaru
I vidhavAdanuBAvava poMdiralu
I viShayakke Sruti sAviraviruvudE || 1 ||

pannagavENiyE ninnane naMbiralu
saNNamanujara varNipudEkele
ennaparAdhava mannisi kRupeyanu
ennoLu tOralu dhanyanAnAguve || 2 ||

tAmarasAkShiyE nAmagirISa SrI
svAmi nRusiMhana kAminI maNiyE
kOmalagAtreyE SrImahAlakShmi enna
dhAmava biDadirE sOmasahOdari || 3 ||

Leave a Reply

Your email address will not be published. Required fields are marked *

You might also like

error: Content is protected !!