-
Indire na ninna
Composer : Shri Vidyaratnakara Tirtharu ಇಂದಿರೆ ನಾ ನಿನ್ನ ವಂದಿಸಿ ಬೇಡುವೆಬಂದು ನೀ ಪಾಲಿಸೇ ಚಂದಿರವದನೇ || ಪ ||ಸಿಂಧು ಕುಮಾರಿಯೇ ಎಂದಿಗೂ ನಿನ್ನ ಪದದ್ವಂದ್ವವ ಸೇವಿಪೆನೆಂದು ನಾ ಬೇಡುವೆ || ಅ.ಪ || ದೇವಿ ನಿನ್ನಂಘ್ರಿಯ ಸೇವಿಸಿ ಪದ್ಮಭವಭಾವಿ ಫಣೀಶ ಸುರಾಧಿಪರೆಲ್ಲರುಈ ವಿಧವಾದನುಭಾವವ ಪೊಂದಿರಲುಈ ವಿಷಯಕ್ಕೆ ಶ್ರುತಿ ಸಾವಿರವಿರುವುದೇ || ೧ || ಪನ್ನಗವೇಣಿಯೇ ನಿನ್ನನೆ ನಂಬಿರಲುಸಣ್ಣಮನುಜರ ವರ್ಣಿಪುದೇಕೆಲೆಎನ್ನಪರಾಧವ ಮನ್ನಿಸಿ ಕೃಪೆಯನುಎನ್ನೊಳು ತೋರಲು ಧನ್ಯನಾನಾಗುವೆ || ೨ || ತಾಮರಸಾಕ್ಷಿಯೇ ನಾಮಗಿರೀಶ ಶ್ರೀಸ್ವಾಮಿ ನೃಸಿಂಹನ…
