Jangamaru naavu jagadolu

Composer : Shri Purandara dasaru

By Smt.Shubhalakshmi Rao

ಜಂಗಮರು ನಾವು ಜಗದೊಳು
ಜಂಗಮರು ನಾವು ಲಿಂಗಾಂಗಿಗಳು
ಮಂಗಳವಂತರು ಭಾವಿಗಳೆಂತೆಂಬಿರಿ ||ಅ.ಪ||

ಹರ ಗುರು ದೈವ ಕೇಶವ ನಮ್ಮ ಮನೆದೈವ
ವರದ ಮೋಹನ ಗುರು ಶಾಂತೇಶ
ಹರ ಗುರು ದ್ರೋಹ ಮಾಡಿದ ಪರವಾದಿಯು
ರೌರವ ನರಕದಿ ಮುಳುಗುವುದೆ ಸಿದ್ಧ ||೧||

ವಿಭೂತಿ ನಮಗುಣ್ಟು ವಿಶ್ವೇಶ ನಮಗುಣ್ಟು
ಶೋಭನ ನಾಮ ಮುದ್ರೆಗಳುಣ್ಟು
ಶ್ರೀ ಭಾಗೀರತಿಯ ಗಣಿತ ಮಜ್ಜನವುಣ್ಟು
ಸೌಭಾಗ್ಯವೀವ ಮಹಂತನ ಮಠದವರು ||೨|||

ವಿರಕ್ತರು ನಾವು ಶೀಲವಂತರು ನಾವು
ವೀರಭದ್ರ ಪ್ರಿಯ ಭಕ್ತರು ನಾವು
ಕಾರಣ ಕರ್ತ ಶ್ರೀ ಪುರಂದರ ವಿಠ್ಠಲನ
ಕಾರುಣ್ಯಕೆ ಮುಖ್ಯ ಪಾತ್ರರು ನಾವು ||೩||


jaMgamaru nAvu jagadoLu
jaMgamaru nAvu liMgAMgigaLu
maMgaLavaMtaru bhAvigaLeMteMbiri ||a.pa||

hara guru daiva kEshava namma manedaiva
varada mOhana guru shAMtEsha
hara guru drOha mADida paravAdiyu
raurava narakadi muLuguvude siddha ||1||

vibhUti namaguNTu vishvEsha namaguNTu
shObhana nAma mudregaLuNTu
shrI bhAgIratiya gaNita majjanavuNTu
saubhAgyavIva mahaMtana maThadavaru ||2|||

viraktaru nAvu shIlavaMtaru nAvu
vIrabhadra priya bhaktaru nAvu
kAraNa karta shrI puraMdara viThThalana
kAruNyake mukhya pAtraru nAvu ||3||

Leave a Reply

Your email address will not be published. Required fields are marked *

You might also like

error: Content is protected !!