Composer : Shri Prasannavenkata dasaru

By Smt.Shubhalakshmi Rao

ನಂದಿಗಮನ ಆನಂದ ಸದನ ಮುನಿ
ವಂದಿತ ಮಂದಾಕಿನಿಧರನೆ ವಂದನೆ [ಪ]

ಮಂದಮತಿ ಕಳೆದು ನಂದತೀರ್ಥಮತ |
ದಂದ ತತ್ವಗಳ ಚೆಂದದಿ ತಿಳಿಸೋ [ಅ.ಪ]

ಚಂದ್ರಮೌಳಿ ಚತುರಾನನ ನಂದನೆ |
ವಂದಿಮಾಗಧರೊಂದಿತ ಚರಣನೆ
ಸಿಂಧುರಾರ್ಚಿತ ಸುಂದರಾಂಗನೆ |
ಬಂಧುರ ಭಕುತಾನಂದ ಘನ್ನಶಿವ [೧]

ಅಚ್ಚೋತ್ತೀಮನ ಅಚ್ಯುತನಾಮವ |
ನಿಚ್ಚವೂ ಉಚ್ಚರಿಪಂತೆ ಕರುಣಿಸು
ದುಚ್ಚರಿತಗಳಿಗೆ ಕಿಚ್ಚನಿಟ್ಟು ಮನ- |
ದಿಚ್ಛೆ ಪೂರೈಸು ಸಚ್ಚರಿತ ಶಿವಶಂಕರನೆ [೨]

ನಿಟಿಲನೇತ್ರ ನಟನಾಟ್ಯ ಪಟುತಪಟ |
ಅಟತಾನಲ ಘಟ ಜಟಾಜೂಟ ಮುಕುಟ
ಘಟಿತಾಘಟಿತ ಶ್ರೀಪ್ರಸನ್ವೆಂಕಟನೆ |
ದಿಟದೈವೆಂದಟಸ್ಪುಟ ಮಾಡಿಟ್ಟವ [೩]


naMdigamana AnaMda sadana muni
vaMdita maMdAkinidharane vaMdane [pa]

maMdamati kaLedu naMdatIrthamata |
daMda tatvagaLa ceMdadi tiLisO [a.pa]

caMdramauLi caturAnana naMdane |
vaMdimAgadharoMdita caraNane
siMdhurArcita suMdarAMgane |
baMdhura BakutAnaMda GannaSiva [1]

acchOttImana acyutanAmava |
niccavU uccaripaMte karuNisu
duccaritagaLige kiccaniTTu mana- |
dicCe pUraisu saccarita SivaSaMkarane [2]

niTilanEtra naTanATya paTutapaTa |
aTatAnala GaTa jaTAjUTa mukuTa
GaTitAGaTita SrIprasanveMkaTane |
diTadaiveMdaTaspuTa mADiTTava [3]

Leave a Reply

Your email address will not be published. Required fields are marked *

You might also like

error: Content is protected !!