Composer : Shri Pranesha dasaru
ಪಾರ್ವತೀ ಪತಿ ಪಾಹಿ ಹರಹರ [ಪ]
ಪಾರ್ವತೀಪತಿ ನೀನೊಲಿದು ಮನಸಿನೊಳು
ತೋರ್ಪುದು ಕೇಶವನ | ಹರಹರ [ಅ.ಪ]
ವಿಜಯ ನಿನ್ನೊಳಗಂದು ವಿಜಯಿಸಲಸ್ತ್ರವ |
ತ್ರಿಜಗವರಿಯ ಕೊಟ್ಟ |
ಮಜ ಭಾಪುರೆ ಅಂಬುಜ ಸುತ ನಂದನ |
ಗಜ ಚರ್ಮಾಂಬರನೆ | ಹರಹರ [೧]
ಜಾತವೇದಸ ಶಶಿ ತರಣಿ ನಯನ |
ಮಾತರಿಶ್ವ ತನಯ |
ಭೂತ ಗಣಪ ಗುಣವ್ರಾತ ನಿನ್ನವರೊಳು |
ಪ್ರೀತಿಯಿಂದಲೆ ಕೂಡಿಸು | ಹರಹರ [೨]
ಕ್ಷಿತಿಧರ ಶರ ಮನ್ಮಥ ಪುರ ಹರಣ |
ಪ್ರಮಥಾಧಿಪ ಹರಿಣಾಂಕ |
ನತಿಸುವೆ ನಿನ್ನನು ಪ್ರತಿದಿನದಲಿ |
ಸನ್ಮತಿ ಕರುಣಿಸು ತ್ವರಿಯಾ | ಹರಹರ [೩]
ಸುರಸೇವಿತ ಪದ ಅರವಿಂದ ಅನಘ |
ಮುರ ರಿಪು ಸುಖ ಕಪರ್ದಿ |
ಚರಣವ ನಂಬಿದವರ ಭಯವಾರಿದ |
ಮರುತ ಕುಶ ನಂದನನೆ | ಹರಹರ [೪]
ಖಟವ ಪಾಣಿ ಖಳ ಆಟವಿ ವಹ್ನಿ ಧೂ |
ರ್ಜಟ ಹರ ಪ್ರಾಣೇಶ |
ವಿಠಲನ ಭಜನೆಯು ಘಟಿಕ ತಪ್ಪದಲೆ |
ಘಟನೆ ಮಾಡಿಸುವುದೋ | ಹರಹರ [೫]
pArvatI pati pAhi harahara [pa]
pArvatIpati nInolidu manasinoLu
tOrpudu kESavana | harahara [a.pa]
vijaya ninnoLagaMdu vijayisalastrava |
trijagavariya koTTa |
maja BApure aMbuja suta naMdana |
gaja carmAMbarane | harahara [1]
jAtavEdasa SaSi taraNi nayana |
mAtariSva tanaya |
BUta gaNapa guNavrAta ninnavaroLu |
prItiyiMdale kUDisu | harahara [2]
kShitidhara Sara manmatha pura haraNa |
pramathAdhipa hariNAMka |
natisuve ninnanu pratidinadali |
sanmati karuNisu tvariyA | harahara [3]
surasEvita pada araviMda anaGa |
mura ripu suKa kapardi |
caraNava naMbidavara BayavArida |
maruta kuSa naMdanane | harahara [4]
KaTava pANi KaLa ATavi vahni dhU |
rjaTa hara prANESa |
viThalana Bajaneyu GaTika tappadale |
GaTane mADisuvudO | harahara [5]
Leave a Reply