Composer : Shri Prasannavenkata dasaru
ಶಿವರಾಮಾ ಮಹಾಮಹಿಮ ||ಪ||
ಭುವನಗಿರಿ ರಾಮೇಶ್ವರಧಾಮ ||ಅಪ||
ಮಾರಜನಕನ ಮಹಿಮೆ ಸಾರಲು
ತ್ವರದಿ ಶುಕಮುನಿಯಾಗಿ ಬರಲು
ಗುರುವೆನಿಸಿದಿ ಹರಿಮತದವರೊಳು
ಪರಗತಿ ಸಾಧನ ದಾರಿಯ ತೋರಲು ||೧||
ಭುಂಜಿಸಿ ವಿಷ ನಂಜುಂಡನೆನಿಸಿದಿ
ಕೆಂಜಡೆಯಲಿ ನಂದಿನಿಯ ರಂಜಿಸಿ
ವಂಜೀರರ ಭವಭಂಜಕ ನಮ್ಮ
ಕಂಜನಾಭ ಪದಕಂಜ ತೋರುವ ||೨||
ಜಪ ತಪ ನೇಮಾಬೇಕಿಲ್ಲ
ನೀಪ್ರಕಟನಾಗುವಿ ನಂಬುವಗೆಲ್ಲ
ಅಪತ್ತಿಗೊದಗುವ ಘಟಿತಾಘಟಿತ ಬಲ
ಶ್ರೀ ಪ್ರಸನ್ನವೆಂಕಟ ನಿನ್ನೊಳಗಿಹನಲ್ಲ ||೩||
SivarAmA mahAmahima ||pa||
Buvanagiri rAmESvaradhAma ||apa||
mArajanakana mahime sAralu
tvaradi SukamuniyAgi baralu
guruvenisidi harimatadavaroLu
paragati sAdhana dAriya tOralu ||1||
BuMjisi viSha naMjuMDanenisidi
keMjaDeyali naMdiniya raMjisi
vaMjIrara BavaBaMjaka namma
kaMjanABa padakaMja tOruva ||2||
japa tapa nEmAbEkilla
nIprakaTanAguvi naMbuvagella
apattigodaguva GaTitAGaTita bala
SrI prasannaveMkaTa ninnoLagihanalla ||3||
Leave a Reply