Shivane nee ennanu

Composer : Shri Gopala dasaru

By Smt.Shubhalakshmi Rao

ಶಿವನೆ ನೀ ಯನ್ನನು ಕಾಯೊ ನಾ | ಭವದಿಂದ ಕಡೆ ಹಾಯುವ
ನೀ ವುಪಾಯನೀಯೊ ಪವನಸುತನೈಯ್ಯ || ಪ ||

ದಾಸತ್ವವು ನಿನ್ನಲ್ಲಿ ತೋರಿಸಿ ಭಜಿಪರಲ್ಲಿ |
ದೋಷಗಳೊಡಿಶಿನ್ನವರ ಪೋಷಿಸುವಿ ಅಘದೂರ |
ಈಶತ್ವವು ನಿನ್ನಲ್ಲಿ ಪ್ರಕಟಿಸಿ ಪೂಜಿಸೊರಲ್ಲಿ ಮೋಸಗೊಳಿಸಿ
ಅವರನೆ ತಾಮಸಿಗ್ ಹಾಕುವಿ ಹರನೆ || ೧ ||

ಶೈವಮತ ಸಿದ್ಧಾಂತ ಹವಣಿಸಿದಸುರಾರಿಗಂತ |
ಪವನಮತ ಸಿದ್ಧಾಂತ ನೀ ಕವಿಗಳಿಗೊರದೊ ಬಲವಂತ |
ಭವನೆ ಭಕುತರವಶನೆ ಅವುದಾರ್ಯ ಗುಣಶೀಲನೆ |
ಶ್ರವಣತಾರಕವುಪದೇಶಿ ಭವ ಓಡಿಸು ಯನ್ನ ವಹಿಸಿ || ೨ ||

ಕಾಮಾರಿ ಕರುಣಾಕರನೆ ನಿತ್ಯ , ರಾಮನಾಮದ ರುಚಿಕರನೆ |
ನೇಮುಳ್ಳವೈರಾಗ್ಯ ಪರನೆ ನಮ್ಮಾ , ಪ್ರೇಮ ಮನೋಭಿಮಾನಿಯೆನೆ |
ಪಾಮರ ಮತಿಯನ್ನೆ ಬಿಡಿಸು, ಸ್ವಾಮಿ ಗೋಪಾಲವಿಠಲನ್ನ ತಿಳಿಸು |
ನೇಮದಿ ಯನ್ನ ಮನ ನಿಲಿಸೊ ದೃಷ್ಟ ರಾಮಾವಾಸಾ , ನಿಂದ್ಯನ್ನ ಗೆಲಿಸೊ ||೩ ||


Sivane nI yannanu kAyo nA | BavadiMda kaDe hAyuva
nI vupAyanIyo pavanasutanaiyya || pa ||

dAsatvavu ninnalli tOrisi Bajiparalli |
dOShagaLoDiSinnavara pOShisuvi aGadUra |
ISatvavu ninnalli prakaTisi pUjisoralli mOsagoLisi
avarane tAmasig hAkuvi harane || 1 ||

Saivamata siddhAMta havaNisidasurArigaMta |
pavanamata siddhAMta nI kavigaLigorado balavaMta |
Bavane BakutaravaSane avudArya guNaSIlane |
SravaNatArakavupadESi Bava ODisu yanna vahisi || 2 ||

kAmAri karuNAkarane nitya , rAmanAmada rucikarane |
nEmuLLavairAgya parane nammA , prEma manOBimAniyene |
pAmara matiyanne biDisu, svAmi gOpAlaviThalanna tiLisu |
nEmadi yanna mana niliso dRuShTa rAmAvAsA , niMdyanna geliso ||3 ||

Leave a Reply

Your email address will not be published. Required fields are marked *

You might also like

error: Content is protected !!