Composer : Shri Prasannavenkata dasaru
ಹರಹರ ಪುರಹರ ಗಿರಿಜಾ ಮನೋಹರ
ಸುರವರ ಕರುಣಾಕರನೆ ನಮೋ ನಮೋ |
ಶರಣರ ಸುರತರು ವರ ಪಂಪಾಪತಿ
ವಿರೂಪಾಂಬಕ ಪೊರೆ ಶುಭದಿ [ಪ.]
ಮದನನ ಮಥನ ಪಂಚವದನ
ಕೈಲಾಸದ ಸದನ ಸದಾಶಿವ ನಮೋ ನಮೋ
ಹದಿನಾಲ್ಕು ಭುವನದ ಬಲ್ಲರಜಿತ
ಕದನ ಕಲುಷಹರ ನಮೋ ನಮೋ [೧]
ತಾರಕ ಪತಿಧರ ಭೂರಿ ಕೃಪಾಂಬುಧಿ
ತಾರಕ ಹರಪಿತ ಜಯ ಜಯ
ತಾರಕ ಉಪದೇಶ ಕಾರಕ ಘನಭವ
ತಾರಕ ಮೃತ್ಯುಂಜಯ ಜಯ [೨]
ಶೇಷಾಭರಣ ವಿಭೂಷಾಭವ ವಿ
ಶೇಷ ಭಕುತಪ್ರಿಯ ವಿಭೋ ವಿಭೋ
ಶೇಷಭೂಭೃತ್ ಪೋಷ ಪ್ರಸನ್ವೆಂಕ
ಟೇಶ ಭಜನಶೀಲ ವಿಭೋ ವಿಭೋ [೩]
harahara purahara girijA manOhara
suravara karuNAkarane namO namO |
SaraNara surataru vara paMpApati
virUpAMbaka pore SuBadi [pa.]
madanana mathana paMcavadana
kailAsada sadana sadASiva namO namO
hadinAlku Buvanada ballarajita
kadana kaluShahara namO namO [1]
tAraka patidhara BUri kRupAMbudhi
tAraka harapita jaya jaya
tAraka upadESa kAraka GanaBava
tAraka mRutyuMjaya jaya [2]
SEShABaraNa viBUShABava vi
SESha Bakutapriya viBO viBO
SEShaBUBRut pOSha prasanveMka
TESa BajanaSIla viBO viBO [3]
Leave a Reply