Composer : Shri Karpara Narahari dasaru
Shri Madanur Vishnu Tirtharu:
EdamUkOpi vaagmithvum jadOpi prAgna moulitAm |
Yath krupAlEshatO yAti Sri Vishnu tIrtham tamAshraye ||
1756–1806
Aradhane : Magha krishna trayodashi
ಸ್ಮರಿಸೊ ಸಂತತ ಮಾನವ ಗುರು ವಿಷ್ಣು ತೀರ್ಥರ ||ಪ||
ಸ್ಮರಿಸೊ ಸಂತತ ಮಾನವ ||
ಸ್ಮರಿಸೊ ಟೀಕೆಯ ವಿರಚಿಸಿದ ಗುರುವರರ
ಕರುಣದಿ ಜನಿಸಿ
ಧರೆಯೊಳು ನಿರುತ ಸ್ಮರಿಸುವ ಶರಣು ಜನರಘ
ತರಿದ ಭೀಷ್ಠೆಯ ಗರಿವರಂಘ್ರಿಯ ||ಅ.ಪ||
ಪುರ ಹರಾಂಶಜರೆನಿಸಿ ಬಾಳಾಚಾರ್ಯರ
ತರುಣಿ ಗರ್ಭದಿ ಜನಿಸಿ
ಮಳಖೇಡ ಮಂದಿರ ಗುರು ನಾಮದಲಿ ಕರಿಸಿ
ವಟು ವ್ರತವ ಧರಿಸಿ
ಗುರುಕುಲದಿ ರಾಮಾರ್ಯರಿಂದಲಿ ಅರಿತು
ವೇದವೇದಾಂತ ಶಾಸ್ತ್ರವ
ಗುರುಸುತನ ಮಹಜ್ವರ ಹರಣ ನರಹರಿಯ
ಮಂತ್ರವ ಜಪಿಸಿದವರನು ||೧||
ಗುರು ತುರಗವನುಸರಿಸಿ
ಬರುತಿರಲು ಬಿಸಿಲೊಳು ಗುರುಪ್ರೀತಿಯನು ಬಯಸಿ,
ಗುರುವಿತ್ತ ಪಾದುಕವೆರಡು ಶಿರದಲಿ ಧರಿಸಿ
ಮಹಿಮೆಯನು ತಿಳಿಸಿ
ಧರಿಸಿ ದ್ವಿತಿಯಾಶ್ರಮದಿ ನೋಡಲು ಪರಮ
ಸತ್ಕುಲ ಜಾದಿ ಗುಣಯುತ
ವರವಧೂ ಮಣಿಸಹಿತ ವಿಭವದಿ
ಸಿರಿಯ ತನದೋಳ್ಮೆರೆವರಂಘ್ರಿಯ ||೨||
ಮಂಚದೊಳ್ ಸುಖತಲ್ಪದಿ ಪದವತ್ತುತಿರೆ
ಮೃಗಲಾಂಚನ ಮುಖಸಹಿತದಿ
ಪವಡಿಸಿರಲೊಂದಿನ ಕಿಂಚಿದ್ದೇಹಾಸ್ವಾಸ್ಥ್ಯದಿ
ಹರಿದಾಸ ಪಾಡಿದ
ಮಂಚಬಾರದು ಮಡದಿಬಾರಳು ಮುಂಚೆ
ಮಾಡಿರಿ ಧರ್ಮವೆಂಬುವ
ಕಿಂಚಗೀತೆಯ ಕೇಳಿದೊಡನೆ ಪ್ರಪಂಚ
ಸುಖವನು ತ್ಯಜಿಸಿ ಪೊರಟರ ||೩||
ಫಣಿಯ ರೂಪವ ನೋಡುತ್ತ ಮಾರ್ಗದೊಳು
ಚರಿಸುತ ಗಮನ ನಿರೋಧಿಸುತ
ಯೋಚನೆಯ ಮಾಡುತಯಿರಲು
ಸ್ವಪ್ನದಿ ಸೂಚಿತ ಶಿಷ್ಯರ ಸಮೇತ
ಅನವರತ ಶ್ರೀ ಮತ್ಸುಧಾ ಪ್ರವಚನ ವಿಜಯ ಮುನಿ
ಮನಕೆ ಸಮ್ಮತವೆನುತ ಮುನಿ ವೃತ್ತಿಯಲಿ ಸತಿಸಹ
ಮುನಿಯವಲ್ಲಿ ಯೊಳಿರುವ ಗುರುಗಳ ||೪||
ಸಾರ ಗ್ರಂಥಗಳ ರಚಿಸಿ
ಸತ್ಯವರತೀರ್ಥ ಕುಮಾರಕರೆಂದೆನಿಸಿ
ಸುಕ್ಷೇತ್ರ ಮೋದನೂರೊಳು ತನುವಿರಿಸಿ
ಹರಿಪದವ ಧ್ಯಾನಿಸಿ
ಸೇರಿದವರಘ ದೂರ ಮಾಡುವ ಚಾರು ಕೃಷ್ಣಾತೀರ
ಕಾರ್ಪರ ನಾರಸಿಂಹ ವಲಿಮೆ ಪಡೆದ
ಅಪಾರ ಮಹಿಮರ ಚಾರು ಚರಣವ ||೫||
smariso saMtata mAnava guru viShNu tIrthara ||pa||
smariso saMtata mAnava ||
smariso TIkeya viracisida guruvarara
karuNadi janisi
dhareyoLu niruta smarisuva SaraNu janaragha
tarida bhIShTheya garivaraMghriya ||a.pa||
pura harAMSajarenisi bALAcAryara
taruNi garbhadi janisi
maLakhEDa maMdira guru nAmadali karisi
vaTu vratava dharisi
gurukuladi rAmAryariMdali aritu
vEdavEdAMta SAstrava
gurusutana mahajvara haraNa narahariya
maMtrava japisidavaranu ||1||
guru turagavanusarisi
barutiralu bisiloLu guruprItiyanu bayasi,
guruvitta pAdukaveraDu Siradali dharisi
mahimeyanu tiLisi
dharisi dvitiyASramadi nODalu parama
satkula jAdi guNayuta
varavadhU maNisahita vibhavadi
siriya tanadOLmerevaraMghriya ||2||
maMcadoL sukhatalpadi padavattutire
mRugalAMcana mukhasahitadi
pavaDisiraloMdina kiMciddEhAsvAsthyadi
haridAsa pADida
maMcabAradu maDadibAraLu muMce
mADiri dharmaveMbuva
kiMcagIteya kELidoDane prapaMca
sukhavanu tyajisi poraTara ||3||
PaNiya rUpava nODutta mArgadoLu
carisuta gamana nirOdhisuta
yOcaneya mADutayiralu
svapnadi sUcita SiShyara samEta
anavarata SrI matsudhA pravacana vijaya muni
manake sammatavenuta muni vRuttiyali satisaha
muniyavalli yoLiruva gurugaLa ||4||
sAra graMthagaLa racisi
satyavaratIrtha kumArakareMdenisi
sukShEtra mOdanUroLu tanuvirisi
haripadava dhyAnisi
sEridavaragha dUra mADuva cAru kRuShNAtIra
kArpara nArasiMha valime paDeda
apAra mahimara cAru caraNava ||5||

Leave a Reply
You must be logged in to post a comment.