Shri Vishnu tirtharu – Jivana charitre

Composer : Shri Gurugovinda dasaru on Madanur Shri Vishnu Tirtharu

By Smt.Shubhalakshmi Rao

ಶ್ರೀ ವಿಷ್ಣು ತೀರ್ಥರು (ಮಾದನೂರು) – ಜೀವನ ಚರಿತ್ರೆ

ಶ್ರೀ ವಿಷ್ಣು ತೀರ್ಥರೆ ನಮೋ [ಪ]

ಶ್ರೀ ವಿಷ್ಣುಪದ ತಾಮರಸ ಭ್ರಮರರೆಂದನಿಸೂವ
ಲೌಕಿಕ ಸುವೈದಿಕ ಸುಶಬ್ದ ಜಾತವ |
ಸೌರ್ವಭೌಮ ಹರಿಗನ್ವಯಿಪರಂ
ಭಜಿಸುತ್ತ ಇಷ್ಟಾರ್ಥವಂ ಪಡೆಯಿರೊ [ಅ.ಪ.]

ಸವಣೂರು ಸನಿಯ ಸಿದ್ಧಾಪುರದ ಸೀಮೆಯಲಿ
ಅವಸಿತರು ಬಾಲ ಆಚಾರ್ಯ ಭಾಗೀರ್ಥಿ
ಎಂಬುವರು ಸದ್ಧರ್ಮರತರೆನಿಸಿ ಜಯತೀರ್ಥರಂ
ಸೇವಿಸಲು ಬಹು ಭಕುತಿಲಿ |
ಅವರನುಗ್ರಹ ಜಾತ ವರಶಿಶುವಿಗವರ ನಾಮವನಿಟ್ಟು |
ಕಾಲದೊಳಗುಪನಯನವಂ ಮಾಡಿ ಸರ್ವ ವೇದ ವೇಂದಾಗ
ಪಾರಂಗತರಂ ಐಜಿ ಆಚಾರ್ಯರಲಿ ಬಿಡಲು [೧]

ಕುಶಲತೆಯು ಮತ್ತೆ ಸೌಶೀಲ್ಯ ಗುಣನಿಧಿ ಎನಿಪ
ಶಿಷ್ಯನಿಗೆ ಸಚ್ಛಾಸ್ತ್ರ ಪಾರಂಗತರನು ಎನಿಸಿ |
ಒಸೆದು ದ್ವಿತಿಯಾಶ್ರಮಕೆ ಚೋದಿಸಿ ಕಳುಹಲವ
ಗೃಹಧರ್ಮ ಸ್ವೀಕರಿಸುತ |
ಎಸೆವ ಕೀರ್ತಿಲಿ ಮೆರೆದು ಶಿಷ್ಯರಿಗೆ ಶಾಸ್ತ್ರ ಬೋ-ಧಿಸುತಲಿರಲು
ಸತ್ಸಂತಾನ-ವಂತರಾಗುತ
ಎಸೆವ ಹಂಸತೂಲಿಕ ತಲ್ಪದೊಳು ಪವಡಿಸಿರೆ
ಅಪರಾಹ್ನ ರೋಗಾರ್ತರು [೨]

ಅಂತರ ಗೃಹ ಚತುರ ದಿಗ್ವಲಯ ದಾದರ್ಶ-ದಂತರದಿ
ಪ್ರತಿಫಲಿತ ತಮರೂಪವಿರೆ ಸತಿಯು
ಸಂತಸದಿ ಪತಿ ಚರಣ ಸೇವಿಸಿರೆ ಹೊರ ಬಾಗಿಲೊಳು
ಓರ್ವ ಭಿಕ್ಷಾರ್ಥಿಯು |
ಸಂತ ಪುರಂದರ ಸುದಾಸಾರ್ಯ ನುಡಿದುದನು
ಅಂತೆ ಮಂಚ ಬಾರದು ಮಡದಿ ಬಾರಳು
ಎಂಬ ಪಿಂತಿನ್ವಚನವ ಕೇಳಿ ಚಿಂತಿಸುತ್ತಿರೆ ತಮಗೆ
ಜಾತ ಸ್ಮೃತಿ ಒದಗುತಿರಲು [೩]

ಘನವಾದ ಐಶ್ವರ್ಯ ಸತಿಸುತರು ಬಂಧುಗಳು
ತೃಣಕೆ ಸಮ ತಿಳಿಯುತ್ತ ಜಯ ಗುರೂ ಹೃದ್ಗತವ
ಅನುಸರಿಸಿ ಅಜ್ಞಾನ ಬಗೆಯಲಿರುತಿಹೆನೆಂದು
ವೈರಾಗ್ಯವನೆ ಪೊಂದುತ ||
ಮನೆಯಿಂದ ಹೊರ ಹೊರಟು ಅನತಿ ದೂರವಸಾಗೆ
ಘನ ಸರ್ಪ ರೂಪದಿಂ ತೋರಿ ಕೊಳೆ ಜಯತೀರ್ಥ
ಮುನಿವರ್ಯ ಹೃದ್ಗತವ ತಿಳಿದು ವಸುಮತಿ ವ್ಯರ್ಥ
ಸಂಚರಣೆ ಸಂತ್ಯಜಿಸುತ [೪]

ಶೃತಿ ಸ್ಮೃತಿಗೆ ಸಮ್ಮತವು ದಶಮತಿಯ ಸಮಯವೆನುತತಿ
ಹಿತದಿ ಪ್ರವಚನೆಗೆ ಪ್ರೇರಿಸಿಹ
ಗುರುಮತವ ಸತ್ಕರಿಸಿ ಕಾರುಣ್ಯ ಕೊಂಡಾಡಿ
ಸಾಧಿಸಲು ತೃತಿಯಾಶ್ರಮವನು ||
ಹಿತದಿ ಕೈಕೊಂಡು ಮಲವ ತಾನಪಹರಿಪ
ಸರಿತೃ ತಟದಲಿ ಇರುವ ಮನುವಳ್ಳಿ ಪಳ್ಳಿಯಲಿ
ನೆಲಿಸುತಲಿ ವಿಹಿತ ಕರ್ಮಾಚರಿಸಿ ಸಿರಿಮತ್ಸು
ಮಧ್ವ ವಿಜಯವ ಪಠಿಸುತಿಹರು ೫

ಗುರುಮಧ್ವ ಕರುಣದಿಂ ಸಂಚಿತ ಸುಕೃತದಲ್ಲಿ
ವರ ಮಧುಕರೀ ವೃತ್ತಿಯಲಿ ಶಿಷ್ಯರಂ ಸಲಹಿ
ಸಿರಿನ್ಯಾಯ ಸುಧೆ ಪ್ರವಚಿಸುತ ಜ್ಞಾನವನೆ ಬೀರುತಲಿ
ಯೋಗ್ಯ ಜನಗಳಿಗೆ ||
ಇರುತ ಕೆಲಕಾಲ ಶಿರಿ ಸತ್ಯಸಂಧರ ಕರಜ
ಗುರು ಸತ್ಯವರ ತೀರ್ಥ ಕರಜ ರೆಂದೆನಿಸುತ್ತ
ಮೆರೆವ ಚತುರಾಶ್ರಮದಿ ಸಿರಿ ವಿಷ್ಣುತೀರ್ಥ-ರೆಂಬಂಕಿತದಿ
ಮೆರೆಯುತಿಹರು [೬]

ಅಂತೆ ವಾಸೀ ಜನರ ಅಭಿಮತವನನುಸರಿಸಿ
ಅಂತ್ಯ ಕಾಲದ ಸ್ಮರಣೆ ಸರ್ವ ಕರ್ಮಾರ್ಪಣವು
ಕಂತು ಪಿತ ಸ್ತೋತ್ರ ಸಿರಿ ಗೀತೆರತ್ನ
ಬಿಂಬೋಪಾಸನಾಜ್ಞಾಪತ್ರವ ||
ಅಂತೆ ಶಿರಿ ಭಾಗವತ ಸಾರದುದ್ಧಾರವನು
ಮುಂತಾದ ಮುಕುತಿ ಸತ್ಪಂಥಗಳ ಬೋಧಿಪ
ಗ್ರಂಥಗಳ ರಚಿಸಿ ಸುಜನೋದ್ಧಾರವನೆ ಗೈದು
ಶೋಭಿಸುವರವನಿಯಲ್ಲಿ [೭]

ಲಕ್ಷುಮಿಯು ನರಯಣರನುಗ್ರಹವನೇ ಪಡೆದು
ದಕ್ಷಿಣದಿ ಬದರಿಕಾಶ್ರಮವೆನುತಿರೆ ಮೆರೆವ
ತ್ರಕ್ಷ್ಯ ಮೋದೇಶ್ವರ ಪುರದಲ್ಲಿ ನೆಲಿಸಿ
ನೂರೆಂಟು ಸಲ ಸುಧೆ ಪ್ರವಚಿಸುತಲಿ ||
ಕುಕ್ಷಿಯೊಳಗುಳ್ಳ ಸು ಕ್ಷೇತ್ರಗಳ ಸಂಚರಿಸಿ
ಲಕ್ಷಿಸುತ |ಯೋಗ್ಯ ಜನಕುಪದೇಶ ಚರಿಸಲು
ಸ್ವಕ್ಷೇತ್ರಕೇ ಮರಳಿ ಕುಶಸರಿತು ತೀರದಲಿ
ಪರ್ಣ ಶಾಲೆಯಲಿ ವಸಿಸಿ [೮]

ಹರಿನಿಯುತ ಕಾಲ ತಾ ತಿಳೀಯುತ್ತ ಶಿಷ್ಯ ಜನಕರಿವಿತ್ತು
ಶಾಲಿವಾಹನ ಸಹಸ್ರ ಷಟ್ಯತೊತ್ತರವಷ್ಟ
ಸಪ್ತತಿಯು ಮಾಘಾಸಿತ ಪಕ್ಷ
ತ್ರಯೋದಶಿ ಸುಮೂಹೂರ್ತದಿ ||
ಸುರರು ಭೂಸುರರೆಲ್ಲ ಜಯ ಘೋಷ ಗೈಯ್ಯುತಿರೆ
ವರ ಮಹಾತ್ಮರು ಆಗ ಹೊಗಲು ವೃಂದಾವನವ
ಪರಿಜನರು ಮುಳುಗಿದರು ದುಃಖ ಆನಂದ
ಸಾಗರದಲದ-ನೇನೆಂಬೆನು [೯]

ಅವತಾರಮಾರಭ್ಯ ಐದು ದಶ ವರ್ಷಗಳು
ಅವನಿಜನ ದೃಗ್ವಿಷಯರೀ ಮಹಾತ್ಮರು ತಾವು
ಅವಧೂತ ವೇಷದಿಂ ಭುವನ ಪಾವನವೆನಿಸಿ
ಪಿಂತೆ ಶುಕ ಮುನಿಯಂದದಿ ||
ಪವನ ಮತ ಶರನಿಧಿಗೆ ಶಶಿಯು ಇಪ್ಪತ್ತೆಂಟು
ಪವಿತರ ಸುಲಕ್ಷಣ ಸುತನುವಿಂದುರೆ ಮೆರೆದು
ಅವನಿಸುರ ಶಿಕ್ಷಣ ಸುಪದೇಶನುಷ್ಠಾನದಿಂ
ಗೈದ ಕೀರ್ತಿಯುತರು [೧೦]

ಇವರ ನಾಮ ಸ್ಮರಣೆ ಕಲಿಮಲದ ಅಪಹರಣೆ
ಇವರ ಸೇವೆಯ ಫಲವು ಸರ್ವಾಮಯ ಹರವು
ಇವರುನುಗ್ರಹವಿರಲು ವಾದಿನಿಗ್ರಹವಹುದು
ಇದಕೆ ಸಂಶಯ ಸಲ್ಲದು ||
ಇವರಿಹರು ಸುರತರುವಿನಂದದಲಿ ಶರಣರಿಗೆ
ಇವರೆ ಚಿಂತಾಮಣಿಯು ಸರ್ವ ಭಯ ಹರಿಸುವರು
ಇವರ ಗುಣ ಕೊಂಡಾಡಿ ಇವರೊಲಿಮೆ ಅರ್ಜಿಸಲು
ಸರ್ವಕಾಮವು ಲಭ್ಯವು [೧೧]

ಸರ್ವ ಕ್ಷೇತ್ರಾಧಿಕದಿ ಭೂವರಹ ನಿಲ್ಲಿರುವ
ಸರ್ವಭಯ ನಾಶನಕೆ ನರಹರಿಯು ಅರಿರೂಪ
ಸರ್ವ ಭಕ್ತರ ಭೀಷ್ಟ ವರ್ಷಣಕೆ
ಗೋಪಾಲ ಕೃಷ್ಣರೂಪದಿ ಇರುವನು ||
ಇವರ ವೃಂದಾವನದೊಳೀ ಪರೀ ಹರಿರೂಪ ಪವನ
ರೂಪಗಳಿಹವು ಶಿರದೊಳಗೆ ಜಯ ಮುನಿಯು
ಸರ್ವ ಋಷಿ ದೇವತೆಗಳಿಹರು ವೃಕ್ಷ ರೂಪದಿ
ಈ ಪವಿತರ ಕ್ಷೇತ್ರದಿ [೧೨]

ನಮೊ ನಮೋ ಜಯತೀರ್ಥ ಮುನಿಯನುಗ್ರಹ ಜಾತ
ನಮೊ ನಮೋ ಅವಧೂತ ಚರ್ಯ ಬಹು ನಿಷ್ಣಾತ
ನಮೊ ನಮೋ ಶುಕರಂತೆ ಭಗವದ್ ವಿಭೂತಿಯೇ
ಭಾಗವತ ನಿಷ್ನಾತರೆ ||
ನಮೊ ನಮೋ ಭಕ್ತಜನ ಕಾಮಧುಕ್ ಭವ್ಯಾತ್ಮ
ನಮೋ ಶ್ರೀ ಮದಾನಂದ ಮುನಿಚರಣ ಮಧುಪರೆ
ನಮೊ ಗುರೂ ಗೋವಿಂದ ವಿಠ್ಠಲ ಪಾದಾಶ್ರಿತರೆ
ನಮೊ ವಿಷ್ಣುತೀರ್ಥ ಪಾಹಿ [೧೩]


SrI viShNu tIrthare namO [pa]

SrI viShNupada tAmarasa BramarareMdanisUva
laukika suvaidika suSabda jAtava |
sourvaBauma hariganvayiparaM
Bajisutta iShTArthavaM paDeyiro [a.pa.]

savaNUru saniya siddhApurada sImeyali
avasitaru bAla AcArya BAgIrthi
eMbuvaru saddharmaratarenisi jayatIrtharaM
sEvisalu bahu Bakutili |
avaranugraha jAta varaSiSuvigavara nAmavaniTTu |
kAladoLagupanayanavaM mADi sarva vEda
vEMdAga pAraMgataraM aiji AcAryarali biDalu [1]

kuSalateyu matte sauSIlya guNanidhi enipa
SiShyanige sacCAstra pAraMgataranu enisi |
osedu dvitiyASramake cOdisi kaLuhalava
gRuhadharma svIkarisuta |
eseva kIrtili meredu SiShyarige SAstra
bO-dhisutaliralu satsaMtAna-vaMtarAguta
eseva haMsatUlika talpadoLu pavaDisire
aparAhna rOgArtaru [2]

aMtara gRuha catura digvalaya dAdarSa-daMtaradi
pratiPalita tamarUpavire satiyu
saMtasadi pati caraNa sEvisire hora bAgiloLu
Orva BikShArthiyu |
saMta puraMdara sudAsArya nuDidudanu
aMte maMca bAradu maDadi bAraLu
eMba piMtinvacanava kELi ciMtisuttire tamage
jAta smRuti odagutiralu [3]

GanavAda aiSvarya satisutaru baMdhugaLu
tRuNake sama tiLiyutta jaya gurU hRudgatava
anusarisi aj~jAna bageyalirutiheneMdu
vairAgyavane poMduta ||
maneyiMda hora horaTu anati dUravasAge
Gana sarpa rUpadiM tOri koLe jayatIrtha
munivarya hRudgatava tiLidu vasumati vyartha
saMcaraNe saMtyajisuta [4]

SRuti smRutige sammatavu daSamatiya samayavenutati
hitadi pravacanege prErisiha
gurumatava satkarisi kAruNya koMDADi
sAdhisalu tRutiyASramavanu ||
hitadi kaikoMDu malava tAnapaharipa
saritRu taTadali iruva manuvaLLi paLLiyali
nelisutali vihita karmAcarisi sirimatsu
madhva vijayava paThisutiharu 5

gurumadhva karuNadiM saMcita sukRutadalli
vara madhukarI vRuttiyali SiShyaraM salahi
sirinyAya sudhe pravacisuta j~jAnavane bIrutali
yOgya janagaLige ||
iruta kelakAla Siri satyasaMdhara karaja
guru satyavara tIrtha karaja reMdenisutta
mereva caturASramadi siri viShNutIrtha-reMbaMkitadi
mereyutiharu [6]

aMte vAsI janara aBimatavananusarisi
aMtya kAlada smaraNe sarva karmArpaNavu
kaMtu pita stOtra siri gIteratna
biMbOpAsanAj~jApatrava ||
aMte Siri BAgavata sAraduddhAravanu
muMtAda mukuti satpaMthagaLa bOdhipa
graMthagaLa racisi sujanOddhAravane
gaidu SOBisuvaravaniyalli [7]

lakShumiyu narayaNaranugrahavanE paDedu
dakShiNadi badarikASramavenutire mereva
trakShya mOdESvara puradalli nelisi
nUreMTu sala sudhe pravacisutali ||
kukShiyoLaguLLa su kShEtragaLa saMcarisi
lakShisuta |yOgya janakupadESa carisalu
svakShEtrakE maraLi kuSasaritu tIradali
parNa SAleyali vasisi [8]

hariniyuta kAla tA tiLIyutta SiShya janakarivittu
SAlivAhana sahasra ShaTyatottaravaShTa
saptatiyu mAGAsita pakSha
trayOdaSi sumUhUrtadi ||
suraru BUsurarella jaya GOSha gaiyyutire
vara mahAtmaru Aga hogalu vRuMdAvanava
parijanaru muLugidaru duHKa AnaMda
sAgaradalada-nEneMbenu [9]

avatAramAraBya aidu daSa varShagaLu
avanijana dRugviShayarI mahAtmaru tAvu
avadhUta vEShadiM Buvana pAvanavenisi
piMte Suka muniyaMdadi ||
pavana mata Saranidhige SaSiyu ippatteMTu
pavitara sulakShaNa sutanuviMdure meredu
avanisura SikShaNa supadESanuShThAnadiM
gaida kIrtiyutaru [10]

ivara nAma smaraNe kalimalada apaharaNe
ivara sEveya Palavu sarvAmaya haravu
ivarunugrahaviralu vAdinigrahavahudu
idake saMSaya salladu ||
ivariharu surataruvinaMdadali SaraNarige
ivare ciMtAmaNiyu sarva Baya harisuvaru
ivara guNa koMDADi ivarolime arjisalu
sarvakAmavu laByavu [11]

sarva kShEtrAdhikadi BUvaraha nilliruva
sarvaBaya nASanake narahariyu arirUpa
sarva Baktara BIShTa varShaNake
gOpAla kRuShNarUpadi iruvanu ||
ivara vRuMdAvanadoLI parI harirUpa pavana
rUpagaLihavu SiradoLage jaya muniyu
sarva RuShi dEvategaLiharu vRukSha rUpadi
I pavitara kShEtradi [12]

namo namO jayatIrtha muniyanugraha jAta
namo namO avadhUta carya bahu niShNAta
namo namO SukaraMte Bagavad viBUtiyE
BAgavata niShnAtare ||
namo namO Baktajana kAmadhuk BavyAtma
namO SrI madAnaMda municaraNa madhupare
namo gurU gOviMda viThThala pAdASritare
namo viShNutIrtha pAhi [13]

Leave a Reply

You might also like

error: Content is protected !!