Composer : Shri Gurugovinda vittala on Shri Vadirajaru
ದಯದಿ ಪಾಲಿಸೋ ವಾದಿರಾಜ ಗುರುವೇ | ನತಜನ ಸುರತರುವೇ [ಪ]
ಹಯಮುಖ ಪದ ಸದ್ವನಜ ಸುಭೃಂಗಾ | ಪಾಲಿಸು ದಯಾಪಾಂಗಾ [ಅ.ಪ.]
ರಜತ ಪೀಠದೊಳು ಕೃಷ್ಣ ಪೂಜೆಗಳನ್ನು |ಪರಿಪರಿ ರಚಿಸಿನ್ನೂ |
ಕುಜನರ ಭೇದಿಪ ಭಜನೆ ಪದಗಳನ್ನೂ | ಸುಜನಕಿತ್ತೆ ನೀನೂ ||
ಭಜಿಸೆ ಬಂದವರಿಗನ್ನೋದಕಗಳನೂ | ಏರ್ಪಡಿಸಿನ್ನೂ |
ನಿಜ ಜನರ ಪೊರೆವ ಸುವ್ಯವಸ್ಥೆಗಳನ್ನೂ | ರಚಿಸಿ ಮೆರೆದೆ ನೀನೂ [೧]
ಅಂತರಂಗದಿ ಪೂಜಿಪೆ ಹಯವದನನ್ನ | ಭಾವಿ ಮರುತ ಎನ್ನ |
ಅಂತರಂಗದೊಳು ನೆಲಿಸುತ ನೀಯೆನ್ನ | ಸಂಚಿತಾದಿಯನ್ನ ||
ಅಂತಗಾಣಿಪ ಶ್ರೀ ಅಂತರಾತ್ಮನನ್ನ | ಚಿಂತೆ ಪಾಲಿಸು ಮುನ್ನ |
ಯೆಂತು ವರ್ಣಿಸಲು ತವ ಮಹಿಮೆಗಳನ್ನ | ನಿಂತು ನಲಿ ವದನದೊಳೆನ್ನ [೨]
ಭರತ ಖಂಡದಿ ತೀರ್ಥ ಕ್ಷೇತ್ರ ಚರಿಸೀ | ತತ್ಪ್ರಬಂಧ ರಚಿಸೀ |
ವಿರಚಿಸಿದೆಯೋ ರುಕ್ಮಿಣೀಶ ಕಾವ್ಯಾ | ಯುಕ್ತಿಮಲ್ಲಿಕೇಯಾ ||
ಸುರಸ ಪದಗಳಲಿ ತತ್ವ ಪುಂಜವನ್ನ | ರಚಿಸಿ ಮೆರೆದರನ್ನ |
ನಿರಣಯಾದಿಗಳ ಭಾವಗಳನ್ನ | ಕನ್ನಡದಿ ರಚಿಸಿದೆ ಘನ್ನ [೩]
ಸ್ವಾದಿ ಪುರದಿ ಬಲು ಮುದದಲಿ ಮೆರೆದಾ | ಬಿರಿದು ಪೊತ್ತ ಶೈವಾ
ವಾದಿಸೆ ನಿನ್ನೊಳು ಸೋತು ನಿಂತನವ | ಪಾದದಿ ಬಿದ್ದು ಅವ ||
ಮೇದಿನಿಯೊಳ್ ನಿಮಗೆ ಸಮರು ಆವ | ಎಂದೊಪ್ಪಿಸಿದನು ಅವ |
ಮೋದದಿಂದಲಿ ಬಸವ ಚಿನ್ಹಿತನಾದ | ತವ ಚರಿತೆ ಅಗಾಧಾ [೪]
ಪಂಚ ಸುವೃಂದಾವನಗಳ ರಚಿಸುತ್ತಾ | ತಾವ್ನಡುವಿರ ಬೇಕೆನುತಾ |
ಅಂಚೆಗಮನ ಪ್ರಾಣ ಗಂಗಾಧರನಾ | ಗುರು ಗೋವಿಂದ ವಿಠ್ಠಲನಾ ||
ಸಂಚಿಂತಿಸಿ ನಿಲಿಸುತ ನಾಲ್ಕರಲ್ಲೀ | ಚತುರ ದಿಕ್ಕಿನಲ್ಲೀ |
ಪಂಚರೂಪಿ ನಿಷ್ಕಿಂಚಿನ ಪ್ರಿಯ ಹರಿಯಾ | ಪುರವ ಸೇರಿದಯ್ಯಾ [೫]
dayadi pAlisO vAdirAja guruvE | natajana surataruvE [pa]
hayamuKa pada sadvanaja suBRuMgA | pAlisu dayApAMgA [a.pa.]
rajata pIThadoLu kRuShNa pUjegaLannu |paripari racisinnU |
kujanara BEdipa Bajane padagaLannU | sujanakitte nInU ||
Bajise baMdavarigannOdakagaLanU | ErpaDisinnU |
nija janara poreva suvyavasthegaLannU | racisi merede nInU [1]
aMtaraMgadi pUjipe hayavadananna | BAvi maruta enna |
aMtaraMgadoLu nelisuta nIyenna | saMcitAdiyanna ||
aMtagANipa SrI aMtarAtmananna | ciMte pAlisu munna |
yeMtu varNisalu tava mahimegaLanna | niMtu nali vadanadoLenna [2]
Barata KaMDadi tIrtha kShEtra carisI | tatprabaMdha racisI |
viracisideyO rukmiNISa kAvyA | yuktimallikEyA ||
surasa padagaLali tatva puMjavanna | racisi meredaranna |
niraNayAdigaLa BAvagaLanna | kannaDadi raciside Ganna [3]
svAdi puradi balu mudadali meredA | biridu potta SaivA
vAdise ninnoLu sOtu niMtanava | pAdadi biddu ava ||
mEdiniyoL nimage samaru Ava | eMdoppisidanu ava |
mOdadiMdali basava cinhitanAda | tava carite agAdhA [4]
paMca suvRuMdAvanagaLa racisuttA | tAvnaDuvira bEkenutA |
aMcegamana prANa gaMgAdharanA | guru gOviMda viThThalanA ||
saMciMtisi nilisuta nAlkarallI | catura dikkinallI |
paMcarUpi niShkiMcina priya hariyA | purava sEridayyA [5]

Leave a Reply
You must be logged in to post a comment.