Composer : Shri Gurujagannatha dasaru on Shri Vadirajaru
ವಾದಿರಾಜ ನಿಜ ಮೋದನೀಡುವ ತವ
ಪಾದವ ತೋರಿಸಯ್ಯಾ ಹೇ ಜೀಯಾ ||ಪ||
ವೇದವೇದ್ಯ ಯತಿ ಆರಾಧೀತ ಸುಜ
ನೋದ್ಧಾರ ಮಾಡಿದ ಪಾದವೋ ಗುರುರಾಜಾ |
ಮೇದಿನಿ ಸುರರಿಗೆ ಸಾದರದಿಂದ
ಭೋಧ ನೀಡಿದ ಪಾದವೋ ಮಹರಾಯಾ ||೧||
ವಂಧ್ಯಸತೀ ಜನಕೆ ಸಂದೇಹ ಮಾಡದೆ
ಕಂದನ ಕೊಟ್ಟ ಪಾದವೊ ಯತಿರಾಯಾ
ಮಂದ ಭಾಗ್ಯಗೆ ಭಾಗ್ಯ ಸಂದೋಹದಿ
ಸಾನಂದ ನೀಡಿದ ಪಾದವೋ ಸುರನಾಥ ||೨||
ನಷ್ಟನಯನ ಮಹಾ ಕುಷ್ಟಜನರ ನಿಜ
ಇಷ್ಟ ನೀಡುವ ಪಾದವೋ ಮಹರಾಜಾ
ನಷ್ಟಬಡುವ ಸುಜನರಾನಿಷ್ಟ ಕಳೆದು ಸರ್ವೋ
ತ್ಕೃಷ್ಟರೆನಿಸಿದ ಪಾದವೋ ಹೇ ಪ್ರಭುವೇ ||೩||
ಎಲ್ಲಾರ ಮನೋರಥ ನಿಲ್ಲಾದೆ ಸರ್ವದ
ಸಲ್ಲೀಸಿರುವ ಪಾದವೋ ಕರುಣಾಳೋ
ಪುಲ್ಲಲೋಚನ ಮಮ ಬಲ್ಲಿದ ಮನೋರಥ
ಸಲ್ಲಿಸದಿರಲೇನೋ ಪಾದ ಶ್ರೀಕರಾ ||೪||
ಪಾತಕ ಪರಿಹಾರ ಅನಾಥ ರಕ್ಷಕ ಭಾವಿ
ವಿಧಾತ ಪಾದವೋ ಹೇ ತಾತ
ದಾತ ಗುರುಜಗನ್ನಾಥ ವಿಠ್ಠಲ ನಿಜ
ದೂತನ ಶುಭ ಪಾದವೋ ಮನ್ನಾಥ ||೫||
vAdirAja nija mOdanIDuva tava
pAdava tOrisayyA hE jIyA ||pa||
vEdavEdya yati ArAdhIta suja –
nOddhAra mADida pAdavO gururAjA |
mEdini surarige sAdaradiMda
BOdha nIDida pAdavO maharAyA ||1||
vaMdhyasatI janake saMdEha mADade
kaMdana koTTa pAdavo yatirAyA
maMda BAgyage BAgya saMdOhadi
sAnaMda nIDida pAdavO suranAtha ||2||
naShTanayana mahA kuShTajanara nija
iShTa nIDuva pAdavO maharAjA
naShTabaDuva sujanarAniShTa kaLedu sarvO
tkRuShTarenisida pAdavO hE praBuvE ||3||
ellAra manOratha nillAde sarvada
sallIsiruva pAdavO karuNALO
pullalOcana mama ballida manOratha
sallisadiralEnO pAda SrIkarA ||4||
pAtaka parihAra anAtha rakShaka BAvi
vidhAta pAdavO hE tAta
dAta gurujagannAtha viThThala nija
dUtana SuBa pAdavO mannAtha ||5||

Leave a Reply
You must be logged in to post a comment.