Composer : Shri Gurugovinda vittala on Shri Vadirajaru
ಹಯ ಮುಖ ಪದಾಬ್ಜ ಮಧುಪಾ |
ದುರ್ಭವ ಭಯವ ತಾರಿಸು ಮುನಿಪಾ [ಪ]
ವ್ರಯವಾಯಿತು ಮಮ | ಆಯುವು ಎಲ್ಲವು ಪ್ರಿಯ ನೀನಲ್ಲವೆ |
ಭಯ ಪರಿಹರಿಸೈ [ಅ.ಪ]
ರಜತ ಪುರಿಲಿ ನಿಂದೂ | ವಿಧಿಸಿದಿ ಅಜಪಿತ ಭಜನೆಯ ನಂದೂ |
ಋಜಗಣದಲಿ ಬಹು | ರಾಜಿಪ ಗುರುವೇ ಅಜನ ಸುಪದವಿಗೆ |
ನಿಜದಿ ಬರುವ ಯತಿ [೧]
ಸೋದೆ ಪುರದಿ ವಾಸಾ | ಭಕ್ತರ ಗಾಧ ದೋಷ ನಾಶಾ ||
ವಾದಿ ಜನರ ಮದ | ಛೇದನ ದಶಮತಿ ಬೋಧಪ್ರೀಯ ಗುರು |
ಮೋದದಿ ಪಾಲಿಸು [೨]
ಪಂಚ ವೃಂದಾವನವಾ | ರಚಿಸುತ ಪಂಚರೂಪಿ ಹರಿಯಾ ||
ಸಂಚಿಂತಿಸಿ ಭಕ್ತ | ವಾಂಛಿತ ಗರೆಯಲು ಸಂಚುಗೊಳಿಸಿ ಪ್ರ |
ಪಂಚವ ತೊರೆದೇ [೩]
ಅಮರೇಂದ್ರ ನಾಳ್ಬರಲೂ | ತ್ರೈವಿಕ್ರಮ ದುತ್ಸವದೋಳೂ ||
ಸಮಯವಲ್ಲವಿದು | ನಿಮಗೆಂದೆನುತಲಿ ಕ್ರಮಿಸುವ ತೆರ ನೀ |
ಮಾಡಿದೆ ಯತಿವರ [೪]
ಪೂವಿಲ್ಲನ ಪಿತನಾ | ಗುರುಗೋವಿಂದ ವಿಠ್ಠಲನಾ ||
ಭಾವದಿ ಕಾಣುತ ಮೈಮರೆದ್ ಹಿಗ್ಗುವ ಈ ವಿಧ ಸುಖ
ಯಾವಾಗಲೂ ಕಾಣುವ [೫]
haya muKa padAbja madhupA |
durBava Bayava tArisu munipA [pa]
vrayavAyitu mama | Ayuvu ellavu priya nInallave |
Baya pariharisai [a.pa]
rajata purili niMdU | vidhisidi ajapita Bajaneya naMdU |
RujagaNadali bahu | rAjipa guruvE ajana supadavige |
nijadi baruva yati [1]
sOde puradi vAsA | Baktara gAdha dOSha nASA ||
vAdi janara mada | CEdana daSamati bOdhaprIya guru |
mOdadi pAlisu [2]
paMca vRuMdAvanavA | racisuta paMcarUpi hariyA ||
saMciMtisi Bakta | vAMCita gareyalu saMcugoLisi pra |
paMcava toredE [3]
amarEMdra nALbaralU | traivikrama dutsavadOLU ||
samayavallavidu | nimageMdenutali kramisuva tera nI |
mADide yativara [4]
pUvillana pitanA | gurugOviMda viThThalanA ||
BAvadi kANuta maimared higguva I vidha suKa
yAvAgalU kANuva [5]

Leave a Reply
You must be logged in to post a comment.