Santa sakhi – On Sode kshetra

Composer : Shri Krishna Vittala on Sonda Kshetra

By Smt.Shubhalakshmi Rao

ಸಂತ ಸಖಿ ಬಾರೆ ನಾವ್ ಹೋಗುವಾ ಕುಣಿದಾಡುವಾ
ನಲಿದಾಡುವಾ ವರ ಬೇಡುವಾ [ಪ್]

ಧವಲಗಂಗೆಯ ತೀರ್ಥವಂತೆ ಸ್ವಾದಿಯ ಸುಕ್ಷೇತ್ರವಂತೆ
ಹಯವದನನ ಸದನವಂತೆ ಬೃಂದಾವನ ವಿಹುದಂತೆ [೧]

ಪಂಚ ವೃಂದಾವನಗಳಂತೆ ಕಾಂಚನತೆರ ಹೊಳೆವರಂತೆ
ಸಂಚಿತದಿ ಪಾಪ ಕಳೆದು ವಾಂಛಿತಾರ್ಥವೀವರಂತೆ [೨]

ವಾದಿರಾಜ ಗುರುಗಳಂತೆ ವಾದದಲಿ ಶೂರರಂತೆ
ವೇದಶಾಸ್ತ್ರ ಘೋಷವಂತೆ ಮೋದ ಮನಕೆವೀವುದಂತೆ [೩]

ದೇಶದೇಶದಿಂದ ಜನರು ಬಂದಿವರನು ಭಜಿಪರಂತೆ
ದಾಸಕೂಟ ವ್ಯಾಸಕೂಟ ನೋಡಲು ಬಲು ಸೊಗಸಂತೆ [೪]

ದಾಸಜನಕೆ ಸ್ವರ್ಗವಂತೆ ವಾಸವಿಲ್ಲಿ ನಿವಾಸವಂತೆ
ದಾಸರಾಜ ಕೃಷ್ಣವಿಠಲದಾಸರ ದಾಸರಾಗೋಣಂತೆ [೫]


saMta saKi bAre nAv hOguvA kuNidADuvA
nalidADuvA vara bEDuvA [p]

dhavalagaMgeya tIrthavaMte svAdiya sukShEtravaMte
hayavadanana sadanavaMte bRuMdAvana vihudaMte [1]

paMca vRuMdAvanagaLaMte kAMcanatera hoLevaraMte
saMcitadi pApa kaLedu vAMCitArthavIvaraMte [2]

vAdirAja gurugaLaMte vAdadali SUraraMte
vEdaSAstra GOShavaMte mOda manakevIvudaMte [3]

dESadESadiMda janaru baMdivaranu BajiparaMte
dAsakUTa vyAsakUTa nODalu balu sogasaMte [4]

dAsajanake svargavaMte vAsavilli nivAsavaMte
dAsarAja kRuShNaviThaladAsara dAsarAgONaMte [5]

Leave a Reply

You might also like

error: Content is protected !!