Composer : Shri Krishna vittala on Shri Vadirajaru
ಭಾವಿ ಭಾರತೀ ರಮಣ ಬಾ ಬ್ಯಾಗನೆ | ಕರುಣಾ |
ವಾರಿಧಿಯೆಂದು ಕರದೆ | ಭಾವಿಸಿ ಬೇಡಿದ ಭಕ್ತರ್ಗೆ |
ನವರತ್ನ ರಾಷಿಗಳಿತ್ತಾದ್ದು ಬಲ್ಲೆ ತಡವ್ಯಾತಕೋ |ಪ|
ಭಾವಿ ರುದ್ರಗೆ ಕೊಟ್ಟೆ ಭಾವಿ ಇಂದ್ರಗೆ ಕೊಟ್ಟೆ |
ಭಾವಿ ರವಿಚಂದ್ರ-ರಿಗಿತ್ತಿದೆಯೋ |
ಭಾವ ಶುದ್ಧಿಯಿಂದ ಬೇಡುವೆ | ನಾನೋರ್ವ ನಿನ ಪಾದಾ |
ಸೇವಿಪ ದಾಸರಾ ದಾಸರಣುಗ ಬಲ್ಲಿ |೧|
ಅವರಿಗೆ ಕೊಟ್ಟಾಗೆ ಕೊಡುಯೆಂದು | ಬೇ |
ಡುವನಲ್ಲೊ ಜಿನಸಿ- ಗೊಂದೊಂದೇ ಕೊಡು ಯೆನಗೆ |
ನವರತ್ನ ಮಾಲಿಯು ಕಟ್ಟಿ ನಿನ ಕೊರಳಿಗೆ ||
ಸವಿ ಮಾಡಿ ಹಾಕಿದೆ |
ಇವು ಅಷ್ಟು ಕಟ್ಟಿ ನಿನ್ನ ಪಾದಕೆ ಅರ್ಪಿಸಿದೆ |
ದಿವಾನಿಶಿಯೊಳುಯಾ-ದರದಿಂದ ನೋಡುವೆ |೨|
ಕೃಷ್ಣವಿಠ್ಠಲ ಶ್ರೀನಿವಾಸನ
ಗೃಹದಲ್ಲೇ | ಇದ್ದ ರತ್ನಗಳನಷ್ಟು
ನೀ ವೈದಿದಿ |
ಅಷ್ಟುರೂ ಪೇಳುವರು ಪಟ್ಟಣದವರೆಲ್ಲ ||
ಕೊಟ್ಟರೊಳಿತು ಕಾಲು | ಕಟ್ಟಿಕೊಂಬುವೆ ಗುರುವೇ |೩|
BAvi BAratI ramaNa bA byAgane | karuNA |
vAridhiyeMdu karade | BAvisi bEDida Baktarge |
navaratna rAShigaLittAddu balle taDavyAtakO |pa|
BAvi rudrage koTTe BAvi iMdrage koTTe |
BAvi ravicaMdra-rigittideyO |
BAva SuddhiyiMda bEDuve | nAnOrva nina pAdA |
sEvipa dAsarA dAsaraNuga balli |1|
avarige koTTAge koDuyeMdu | bE |
Duvanallo jinasi- goMdoMdE koDu yenage |
navaratna mAliyu kaTTi nina koraLige ||
savi mADi hAkide |
ivu aShTu kaTTi ninna pAdake arpiside |
divAniSiyoLuyA-daradiMda nODuve |2|
kRuShNaviThThala SrInivAsana
gRuhadallE | idda ratnagaLanaShTu
nI vaididi |
aShTurU pELuvaru paTTaNadavarella ||
koTTaroLitu kAlu | kaTTikoMbuve guruvE |3|

Leave a Reply
You must be logged in to post a comment.