Composer : Shri Gurujagannatha dasaru on Shri Vadirajaru
ವಾದಿರಾಜ ಸುರರಾಜ ತಾನಾದರೆ
ಮೇದಿನಿಯೊಳಗಿಹನ್ಯಾಕೆ ||ಪ||
ಮೇದಿನಿ ಸುರರಿಗೆ ಮೋದ ಕೊಡೋದಕೆ
ಸ್ವಾದಿಯೊಳಗೆ ನಿಂತಿಹನದಕೇ ||ಅ.ಪ||
ಋಜುಗಣದೊಡೆಯನು ತ್ರಿಜಗಾಧೀಶನು
ಭುಜಗಾಂಚಿತನಾದ್ಯಾಕೆ
ಭಜಿಸುವ ಜನ ಭೂಭುಜ ತಾನೆನಿಸಿ
ಅಜನ ಪದ ತಾ ಸೇರೋದಕೆ ||೧||
ಸುರತತಿ ಸನ್ನುತ ಸರಸಿಜಭವ ಪದ
ಕರಹನು ನರನ್ಯಾಕಾದಾ
ಧರೆಸುರರಿಗೆ ತನ್ನ ಕುರುಹನು ತಿಳಿಸೀ
ಪರಿಪರಿ ಮಹಿಮೆಯ ತೋರಿಸಿದ ||೨||
ವೀತಭಯನು ತಾನೀತೆರ ಜಗದಿ
ಯಾತಕೆ ಯತಿಯಾದ
ದಾತ ಗುರುಜಗನ್ನಾಥ ವಿಠಲ ಗುಣ
ಖ್ಯಾತಿಯ ತಾ ಮಾಡಿದ ||೩||
vAdirAja surarAja tAnAdare
mEdiniyoLagihanyAke ||pa||
mEdini surarige mOda koDOdake
svAdiyoLage niMtihanadakE ||a.pa||
RujugaNadoDeyanu trijagAdhISanu
BujagAMcitanAdyAke
Bajisuva jana BUBuja tAnenisi
ajana pada tA sErOdake ||1||
suratati sannuta sarasijaBava pada
karahanu naranyAkAdA
dharesurarige tanna kuruhanu tiLisI
paripari mahimeya tOrisida ||2||
vItaBayanu tAnItera jagadi
yAtake yatiyAda
dAta gurujagannAtha viThala guNa
KyAtiya tA mADida ||3||

Leave a Reply
You must be logged in to post a comment.