Jaya jaya vaishnava

Composer : Shri Vidyaprasanna Tirtharu on Shri Vyasarajaru

By Smt.Shubhalakshmi Rao & Sheshagiri Rao

ಜಯ ಜಯ ವೈಷ್ಣವ ಪಯೊನಿಧಿ ಚಂದ್ರಗೆ,
ಜಯ ಜಯ ವ್ಯಾಸ ಯತೀಂದ್ರರಿಗೆ (ಪ)
ಜಯ ಜಯ ವರ ಕರ್ನಾಟಕ ಪತಿಗೆ,
ಜಯ ಸಿಂಹಾಸನ ವೇರಿದಗೆ (ಅ.ಪ)

ನಾಲ್ಕು ಶಾಸ್ತ್ರಂಗಳ ಪಾರಂಗತರಿಗೆ,
ಕಾಕು ಮತಗಳನು ತುಳಿದವಗೆ
ಆ ಕಮಲಾಪತಿ ಭಕುತ ವರೇಣ್ಯಗೆ
ಶ್ರೀಕರ ಚಂದ್ರಿಕಾಚಾರ್ಯರಿಗೆ (೧)

ಹನುಮನ ಭಾಷ್ಯವ ಅಣಿಮಾಡಿದಗೆ ,
ಹನುಮಗೆ ಭವನಗಳನು ಕಟ್ಟಿದಗೆ
ಹನುಮನ ಯಂತ್ರದಿ ಬಿಗಿದಪ್ಪಿದಗೆ,
ಮುನಿತ್ರಯದಲಿ ಸೇರಿದ ದೊರೆಗೆ (೨)

ಮಾಯ ವಾದಿಗಳನು ಗೆಲಿದವಗೆ,
ಸ್ವೀಯ ಮಥವ ಸ್ಥಾಪಿಸಿದವಗೆ
ನ್ಯಾಯಾಮೃತ ಧಾರೆಯ ಅಭಿಷೇಕದಿ
ಆ ಯದುಪತಿಯನು ಕುಣಿಸಿದಗೆ (೩)

ಚಕ್ರ ಧರನ ಸುಳುಗಳ ತಿಲಿದವಗೆ,
ಮಿಕ್ಕ ಮತಗಳನು ಅಳಿದವಗೆ
ವಕ್ರ ಯುಕುತಿಗಳ ತುಕ್ಕುಡ ಗೈಯುವ
ತರ್ಕ ತಾಂಡವದಿ ನಲಿದವಗೆ (೪)

ಕೃಷ್ಣ ದೇವ ರಾಯನ ಕುಲ ಪತಿಗೆ,
ಕಷ್ಟದ ಕುಹ ಯೋಗವ ಕೊಂದವಗೆ
ಶಿಷ್ಟ ಜನಗಳಿಗೆ ಇಷ್ಟಾರ್ಥಗಳನು
ವೃಷ್ಟಿಯ ಗೈವ ಪ್ರಸನ್ನರಿಗೆ (೫)


jaya jaya vaiShNava payonidhi chaMdrage,
jaya jaya vyaasa yateeMdrarige (pa)
jaya jaya vara karnATaka patige,
jaya siMhaasana vEridage (a.pa)

naalku shAstraMgaLa paaraMgatarige,
kaaku matagaLanu tuLidavage
aa kamalApati bhakuta varENyage
shrIkara chaMdrikAchaaryarige (1)

hanumana bhaaShyava aNimaaDidage ,
hanumage bhavanagaLanu kaTTidage
hanumana yaMtradi bigidappidage,
munitrayadali sErida dorege (2)

maaya vaadigaLanu gelidavage,
sveeya mathava sthaapisidavage
nyAyAmRuta dhaareya abhiShEkadi
aa yadupatiyanu kuNisidage (3)

chakra dharana suLugaLa tilidavage,
mikka matagaLanu aLidavage
vakra yukutigaLa tukkuDa gaiyuva
tarka taaMDavadi nalidavage (4)

kRuShNa dEva raayana kula patige,
kaShTada kuha yOgava koMdavage
shiShTa janagaLige iShTaarthagaLanu
vRuShTiya gaiva prasannarige (5)

Leave a Reply

Your email address will not be published. Required fields are marked *

You might also like

error: Content is protected !!