Bandu nodide yatiya

By Shri Vijayadasaru on Shri Padmanabha Tirtharu

By Smt.Shubhalakshmi Rao

ಬಂದು ನೋಡಿದೆ ಯತಿಯ ಎನ್ನ ನೂರೊಂದು ಕುಲದ ಗತಿಯ
ಕೊಡುವಾನಂದದಿಂದಲಿ ಸ್ತುತಿಯ , ಮಾಡಲು ಪೊಂದಿಸುವನು ಮತಿಯ |ಪ|

ಮುನಿ ಕುಲೋತ್ತಮನ, ಉತ್ತಮ ಮನುಜರ ಮನೋಹರನ
ಅನಿಮಿತ್ತ ಬಾಂಧವನ ಶುಭಕಾಯ ದಿನಕರ ತೇಜನನ ||೧||

ಪರವಾದಿಗಳ ಭಂಗನ ತನ್ನನು ಅರಿದವಗೊಲಿದವನ
ಕರೆದವರಿಗೆ ವರನ ಸುರಿದು ಪೊರೆವ ಕರುಣಾ ಪಾಂಗನ ||೨||

ಮಂಡಲದೊಳು ದಿಟ್ಟ ದ್ವಾದಶ ಪುಂಡ್ರವ ರಚಿಸಿದನ
ದಂಡ ಕಾಷ್ಟವ ಧರನ ಕಂಡೆ ಕಮಣ್ಡಲ ಉಳ್ಳ ಕರನ ||೩||

ಕಾಶಾಯ ಅಂಬರ ಧರನ ನಿರುತ ವ್ಯಾಸ ರಾಮರ ಪೂಜನ
ಸಾಸಿರ ಗುಣಗಣನ ವೇದದ ಘೋಷಣ ಲಾಲಿಪನ ||೪||

ವಾಯುಮತ ಸಿದ್ಧನ ಮಧ್ವರಾಯರ ಪ್ರತಿಬಿಂಬನ
ಕಾಯುವ ಎಲ್ಲರನ ನಮ್ಮ ವಿಜಯ ವಿಠ್ಠಲ ದಾಸನ ||೫||


baMdu nODide yatiya enna nUroMdu kulada gatiya
koDuvAnaMdadiMdali stutiya , mADalu poMdisuvanu matiya |pa|

muni kulOttamana, uttama manujara manOharana
animitta bAMdhavana shubhakAya dinakara tEjanana ||1||

paravAdigaLa bhaMgana tannanu aridavagolidavana
karedavarige varana suridu poreva karuNA paaMgana ||2||

maMDaladoLu diTTa dvAdasha puMDrava rachisidana
daMDa kAShTava dharana kaMDe kamaNDala uLLa karana ||3||

kAshAya aMbara dharana niruta vyAsa rAmara pUjana
sAsira guNagaNana vEdada ghOShaNa lAlipana ||4||

vAyumata siddhana madhvarAyara pratibiMbana
kAyuva ellarana namma vijaya viThThala dAsana ||5||

Leave a Reply

Your email address will not be published. Required fields are marked *

You might also like

error: Content is protected !!