ಸೃಷ್ಠಿಶ ದೇವ ಪರಮೇಶ್ಟ್ಯಾದಿ ವಂದ್ಯ ಸುರಾ ಶ್ರೇಷ್ಟಾನೇ ಮಚ್ಛ ರೂಪಿ
ನಷ್ಟವ ಗೊಳಿಸು ಬಹು ದುಷ್ಟಾದ ಕರ್ಮಗಳ ಶಿಷ್ಟೀಷ್ಟ ಸುಷ್ಟವಪುಷ |
ಕಷ್ಟವೇ ನಿತ್ಯ ಸಂತುಷ್ಟನೇ ಸಲಹಾಲ್ಕೆ ದೃಷ್ಟೀಲಿ ಮಾತ್ರ ಜಗದೀ
ಕಾಷ್ಠಾದಿ ಬ್ರಹ್ಮಾಂತ ಚೇಷ್ಟಾದಿ ಗಳ ನಿತ್ಯ ನಿಷ್ಟೀಲಿ ಮಾಳ್ಪ ಹರಿಯೇ (೧)
ದುರ್ಮಾಯಿದಾನವರು ಧರ್ಮಾದಿಪಾರಮೃತ ನಿರ್ಮಾಣವಾಗುವಂತೆ
ನಿರ್ಮಥಿಸೇ ಗಿರಿಯ ಕೂರ್ಮಾಗಿ ನೀ ನೆಗದಿ ನಿರ್ಮಾಲ್ಯಪುಷ್ಪದಂತೆ |
ನಿರ್ಮೀಸಿ ಜೀವರಿಗೆ ಚರ್ಮಾಸ್ಥಿಯುಕ್ತತನು ದುರ್ಮೋಹವಿತ್ತು ಸೃಷ್ಟಿ
ಮರ್ಮಾವ ತಿಳಿಸದಲೆ ಕೂರ್ಮನೇ ಕರ್ಮಫಲ ಧರ್ಮಾರ್ಥಕಾಮ ಕೊಡುವಿ (೨)
ನೆರೆನಂಬಿದವರಘವ ಹರಿವಂಥ ಪರಪುರುಷ ಬಾರಯ್ಯ ಧ್ಯಾನಕೊದಗಿ
ಬೇರಿನ್ನು ಬೇಡೇನು ಘೋರಾದ ಭವಶರಧಿ ದಾಟೀಸಿ ಚರಣತೋರೋ |
ಧರಣೀಯಚೋರನ್ನ ವರಸಿದ ಮಹಾವರಹ ಕರುಣಾದಿ ಕೋರೆದೆಡೆಯಿಂ
ಧರಣೀಯನೆತ್ತಿ ಸುರವೃಂದವು ಸ್ತೋತ್ರ ಭರದಿಂದಲೇ ಗೈದರಾಗ (೩)
ಬೊಮ್ಮಾದಿ ಚೇತನಕೆ ಸುಮ್ಮಾನೆ ಈವಗತಿ ಬೊಮ್ಮಾಂಡದೊಡೆಯನೆನುತ
ಒಮ್ಮನದಿ ಪ್ರಹ್ಲಾದ ತಮ್ಮಗಳ ಸಹಿತಾಗಿ ನಿಮ್ಮಾನೇ ನೆನೆಯುತಿರಲು |
ತಮ್ಮನ್ನಕೊಂದ ಪರಬೊಮ್ಮನೆ ಕೋಲು ವೆನುವ ದುಮ್ಮಾನಕನಕಶಯ್ಯಾ
ಬೊಮ್ಮನು ಇತ್ತವರ ಧೆಮ್ಮಿಲೆ ಇರಕೊಂದ ನಮ್ಮಯ ನಾರಸಿಂಗ (೪)
ಕೋಮಲಗಾತ್ರ ಮಮ ಸ್ವಾಮಿಯೆ ಮನದಿರ್ದಕಾಮಾದಿವರ್ಗ ತಡೆದು
ಸಾಮ್ಯಾಧಿಕಾ ಶೂನ್ಯ ಕಾಮಾರಿವರವಂದ್ಯ ಸ್ವಾಮ್ಯಾಭಿಮಾನ ಕೀಳೋ |
ಕಾಮಿಸಿ ಸುರಪತಿಯ ಧಾಮವ ಗೈದ ಕೃತು ನೇಮದಿ ರಾಜ ಬಲಿಯ
ವಾಮನ ರೂಪದಲಿ ಭೂಮಿಯ ಬೇಡಿ ಬಲು ಸಾಮಾದಿ ತಲೆಯ ತುಳದಿ (೫)
ಸಾಮಾದಿ ವೇದಗಳು ಲೋಮಾದ ನಿನ್ನ ಗುಣ ಸ್ತೋಮನೇ ನುಡಿಯಲರಿಯ
ಧಾಮೇಲೇನಾಮ್ ಪರಶುರಾಮನೆ ವರುಣಿಪೆನೆ ಪ್ರೇಮದಿ ನೋಡು ಧೊರಯೆ |
ಭೂಮೀಶರನು ತೊರೆದು ಭೂಮೀಯ ವಿಪ್ರರಿಗೆ ಮಮತಾದಿ ಇತ್ತಪರಿಯ
ಪಾಮರನಪರಾಧ ಕ್ಷಮಿಸುತ್ತ ನಿಜಧಾಮ ಸೀಮಾದಲಾರಿಸು ಧಣಿಯೇ (೬)
ಕ್ಷಿತಿಗೀಶ ದಶರಥನ ಸುತನಾಗಿ ಮಲತಾಯಿ ಮಾತನು ಲಾಲಿಸುತಲಿ
ಅತಿ ತೋಷದಲಿ ಘೋರ ವ್ರತ ದಿಂದ ವನಖೋದಿ ಸತಿಭ್ರಾತೃರಿಂದ ಕೂಡಿ |
ಸೀತೆಯ ಕದ್ದದಿತಿಜಾತರಿಗಧಿಪತಿಯ ಘಾತೀಸಿ ಹತ್ತುತಲೆಯ
ವಾತಾತ್ಮ ಗಿತ್ತಿ ರಘುನಾಥನೇ ಸತ್ಯಪದ ಪ್ರೀತೀಲೆ ಮತ್ತೆ ತನುವ (೭)
ಎಂದೆಂದೂ ತವಪಾದ ಪೊಂದಿರ್ದ ಬಳಿಕಿನ್ನು ಬಂಧದೊಳಿಡುವುದೆಷ್ಟೋ
ಅಂದವೆ ನಿನಗಿನ್ನು ಸುಂದರ ವದನನೆ ಮಂದ ಸ್ಮಿತದಿ ನೋಡೈ |
ನಂದನಕಂದ ಸುರವೃಂದದಿವಂದ್ಯ ಮನ ಕುಂದುಗಳನ್ನು ತರಿದು
ಇಂದೀವರಾಕ್ಷ ಮುದದಿಂದಲೇ ಕಂದ ನಿವನೆಂತೆಂದು ನಂದಗೊಳಿಸೋ (೮)
ಸದ್ಧರ್ಮದಲಿ ಮನಸು ಸಿದ್ಧಾತ್ಮರಲಿ ರತಿಯು ಶುದ್ಧಾಂತಃ ಕರಣ ವಿತ್ತು
ಸಿದ್ಧಿಯ ಗೈಸು ಸತ್ಸಿದ್ಧಾಂತದ ವಾಕ್ಯ ಕ್ರುದ್ಧೋಲ್ಕ ದೇವದೇವ |
ಬುದ್ಧನೇ ದುರ್ವಿಷಯ ಬದ್ಧಾನ ಮಾಡದಲೇ ಬುದ್ಧಿಲೇ ನಿನ್ನ ಸ್ಮರಣ
ಶ್ರದ್ಧವ ಕೊಟ್ಟು ಪ್ರಾರಬ್ಧವ ದಾಟಿಸುತ ಉದ್ಧಾರ ಮಾಡು ತ್ವರದಿ (೯)
ನೀಲಾಂಬುದ ಶ್ಯಾಮ ಬಾಲ್ಯಾದ ವಸ್ಥೆಯಲಿ ಲೋಲಾಡಿ ನಿನ್ನ ಮರೆದೆ
ಕಾಲಾತ್ಮ ಮೂಲ ಗುಣ ಶೀಲಂಗಳನು ತೋರಿ ಕಾಲನ ಪಾಶ ಬೀಡಿಸೋ |
ಮಾಲೋಲ ನಿನ್ನ ಗುಣ ಲೀಲಾವಿನೋದಗಳ ನಾಲಿಗಿಯಲ್ಲಿ ನಿಲ್ಲಿಸೋ
ತಾಳದೆ ತಾಪಗಳ ಕೀಳೆಂದು ಮೊರೆಹೊಕ್ಕೆ ಲಾಲೀಸಿ ಕಲ್ಕಿ ಸಲಹೋ (೧೦)
ಮಗುವಾಗಿ ವಟದೆಲೆಲಿ ಸೊಗಸಾಗಿ ಮಲಗಿರ್ದ ಖಗರಾಜ ಪತ್ರ ಅಖಿಲ
ನಿಗಮವು ಅಘದೂರ ಸುಗಮವು ಎನುತಿವೆ ಲಗುಬಗೆ ಸತ್ಯ ಗೊಳಿಸೋ |
ಯೋಗೀಶ ತವಯೋಗ ಯಾವಾಗ ಆಗುವದು ಬೇಗದಿ ತೋರೋ ದಯದಿ
ಬಾಗುವೇ ಪದಗಳಿಗೆ ಸಾಗಿಸು ಮುಕ್ತಿಪಥ ಶ್ರೀ ರಘುರಾಮ ವಿಠ್ಠಲ (೧೧)
| ಶ್ರೀ ಕೃಷ್ಣಾರ್ಪಣಮಸ್ತು |
sRuShThiSa dEva paramESTyAdi vaMdya surA SrEShTAnE macCha rUpi
naShTava goLisu bahu duShTAda karmagaLa SiShTIShTa suShTavapuSha |
kaShTavE nitya saMtuShTanE salahAlke dRuShTIli mAtra jagadI
kAShThAdi brahmAMta cEShTAdi gaLa nitya niShTIli mALpa hariyE (1)
durmAyidAnavaru dharmAdipAramRuta nirmANavAguvaMte
nirmathisE giriya kUrmAgi nI negadi nirmAlyapuShpadaMte |
nirmIsi jIvarige carmAsthiyuktatanu durmOhavittu sRuShTi
marmAva tiLisadale kUrmanE karmaPala dharmArthakAma koDuvi (2)
nerenaMbidavaraGava harivaMtha parapuruSha bArayya dhyAnakodagi
bErinnu bEDEnu GOrAda BavaSaradhi dATIsi caraNatOrO |
dharaNIyacOranna varasida mahAvaraha karuNAdi kOredeDeyiM
dharaNIyanetti suravRuMdavu stOtra BaradiMdalE gaidarAga (3)
bommAdi cEtanake summAne Ivagati bommAMDadoDeyanenuta
ommanadi prahlAda tammagaLa sahitAgi nimmAnE neneyutiralu |
tammannakoMda parabommane kOlu venuva dummAnakanakaSayyA
bommanu ittavara dhemmile irakoMda nammaya nArasiMga (4)
kOmalagAtra mama svAmiye manadirdakAmAdivarga taDedu
sAmyAdhikA SUnya kAmArivaravaMdya svAmyABimAna kILO |
kAmisi surapatiya dhAmava gaida kRutu nEmadi rAja baliya
vAmana rUpadali BUmiya bEDi balu sAmAdi taleya tuLadi (5)
sAmAdi vEdagaLu lOmAda ninna guNa stOmanE nuDiyalariya
dhAmElEnAm paraSurAmane varuNipene prEmadi nODu dhoraye |
BUmISaranu toredu BUmIya viprarige mamatAdi ittapariya
pAmaranaparAdha kShamisutta nijadhAma sImAdalArisu dhaNiyE (6)
kShitigISa daSarathana sutanAgi malatAyi mAtanu lAlisutali
ati tOShadali GOra vrata diMda vanaKOdi satiBrAtRuriMda kUDi |
sIteya kaddaditijAtarigadhipatiya GAtIsi hattutaleya
vAtAtma gitti raGunAthanE satyapada prItIle matte tanuva (7)
eMdeMdU tavapAda poMdirda baLikinnu baMdhadoLiDuvudeShTO
aMdave ninaginnu suMdara vadanane maMda smitadi nODai |
naMdanakaMda suravRuMdadivaMdya mana kuMdugaLannu taridu
iMdIvarAkSha mudadiMdalE kaMda nivaneMteMdu naMdagoLisO (8)
saddharmadali manasu siddhAtmarali ratiyu SuddhAMtaH karaNa vittu
siddhiya gaisu satsiddhAMtada vAkya kruddhOlka dEvadEva |
buddhanE durviShaya baddhAna mADadalE buddhilE ninna smaraNa
Sraddhava koTTu prArabdhava dATisuta uddhAra mADu tvaradi (9)
nIlAMbuda SyAma bAlyAda vastheyali lOlADi ninna marede
kAlAtma mUla guNa SIlaMgaLanu tOri kAlana pASa bIDisO |
mAlOla ninna guNa lIlAvinOdagaLa nAligiyalli nillisO
tALade tApagaLa kILeMdu morehokke lAlIsi kalki salahO (10)
maguvAgi vaTadeleli sogasAgi malagirda KagarAja patra aKila
nigamavu aGadUra sugamavu enutive lagubage satya goLisO |
yOgISa tavayOga yAvAga Aguvadu bEgadi tOrO dayadi
bAguvE padagaLige sAgisu muktipatha SrI raGurAma viThThala (11)
| SrI kRuShNArpaNamastu |

Leave a Reply
You must be logged in to post a comment.