[From Vayu purana – Maagha maasa Mahatame]
ಸರ್ವ ಪಾಪಗಳ ಉಪಶಾಂತ್ಯರ್ಥವಾಗಿ ಈ
ಮಾಧವಸ್ತವರಾಜ ಮಂತ್ರವನ್ನು ಉಪಯೋಗಿಸುವುದು.
ಇದು ಸರ್ವರೋಗ ವಿನಾಶಕರವು, ಜನರಿಗೆ ಭಕ್ತಿ
ಮುಕ್ತಿ ಪ್ರದವು ಆಗಿದೆ (೧)
ಚತುರ್ವಿಧ ನಾಶ ಶೂನ್ಯನಾದ ಹೇ ಅಚ್ಯುತನೇ, ಹೇ
ಅನಿರುದ್ಧನೇ, ಆದ್ಯಂತ ಮಧ್ಯ ರಹಿತನೇ,
ಬಹುರೂಪಿಯೇ, ವೇದ ಪ್ರತಿಪಾದ್ಯನು, ಗೋವುಗಳಿಂದ
ಕ್ರೀಡಿಸುವನು ಆದ ಗೋವಿಂದನೇ, ಮೊರೆಹೊಕ್ಕರ
ದುಃಖವನ್ನು ಪರಿಹರಿಸುವನೇ ಶ್ರೀ ಹರಿಯೇ ನಿಮ್ಮ
ನಾಮಸ್ಮರಣೆಯಿಂದ ಎನಗೀಗಲೇ ಮನಸು
ಶುದ್ಧಿಯನ್ನು ಉಂಟುಮಾಡು (೨)
ಹೇ ಸರ್ವೇಂದ್ರಿಯ ನಿಯಾಮಕನಾದ ಹೃಷೀಕೇಶನೇ,
ಜಗತ್ವ್ಯಾಪಿಯೇ, ಸರ್ವಸಾಕ್ಷಿಯೇ, ದಯಾನಿಧಿಯೇ,
ಸದಾ ಧರ್ಮ ಕಾರ್ಯಗಳಲ್ಲಿ ಅನುಕೂಲವಾಗಿ
ಪ್ರವರ್ತಿಸುವಂತೆ ನನ್ನ ಇಂದ್ರಿಯಂಗಳನ್ನು
ಮಾಡು (೩)
ಚಕ್ಷು ಅಂತರ್ಗತನು ಸೂರ್ಯನಲ್ಲಿ ವಾಸಿಯೇ,
ಸೂರ್ಯನಿಂದ ಸೇವಿತನಾದ ಸೂರ್ಯಾತ್ಮಕನಾದ ನೀನು,
ಹೇ ಮಹಾಬಾಹುವೇ,
ಸದಾ ಎನಗೆ ಧರ್ಮ ಮಾರ್ಗವನ್ನು ತೋರಿಸು (೪)
ದಿಕ್ ರೂಪಿಯಾದ ನೀನು ಶೋತ್ರೇಂದ್ರಿಯ ಸ್ಥಿತನಾದ
ಯಾವ ನೀನು ಸರ್ವ ಪ್ರತ್ಯಾಯ ಗೋಚರನಾಗಿರುವೆಯೋ
ಅಂತ ಶ್ರುತಿ ವೇದಗಳಿಂದ ನನ್ನ ಎರಡು
ಕಿವಿಗಳನ್ನು ನಿನ್ನ ಕಥಾ ಶ್ರವಣದಲ್ಲಿ
ಪ್ರವರ್ತಿಸುವಂತೆ ಮಾಡು (೫)
ಹೇ ನಾಸತ್ಯ ರೂಪಿ ಭಗವಂತ ನೀನು
ನಾಶಿ ಮಾರ್ಗದಲ್ಲಿದ್ದು ದಿವ್ಯವಾದ ನಿನ್ನ ಪಾದದಲ್ಲಿ
ಅರ್ಪಿತವಾದ ಪುಷ್ಪಗಳನ್ನು ಆಗ್ರಣಿಸುವಂತೆ
ಮಾಡು. ಹೇ ನಾಶವಿಲ್ಲದ ಹರಿಯೇ, ನನ್ನ ಮಾತನ್ನು
ಶೀಘ್ರವಾಗಿ ಪಾಲಿಸು (೬)
ಹೇ ಮಹಾಪ್ರಭುವೇ, ಜಿಹ್ವೆಯಲ್ಲಿದ್ದು ವರ್ಣಾಂತರ್ಗತ
ನೀನು, ಅನಂತ ಶಕ್ತಿ ಧರಿಸುವ, ಹೇ
ಲಕ್ಷ್ಮೀಪತಿಯಾದ ಮಾಧವನೇ, ನನ್ನ
ನಾಲಿಗೆಯನ್ನು ನಿನಗೆ ಅರ್ಪಿತವಾದ ಶೇಷ
ರಸಗಳನ್ನ ಸ್ವಾದನ್ನ ಮಾಡುವಂತೆ ಪ್ರವರ್ತಿ
ಉಳ್ಳವನಾಗಿ ಮಾಡು (೭)
ಪ್ರಾಣಾತ್ಮಕನಾದ ಸರ್ವತ್ರ ವ್ಯಾಪ್ತನಾದ
ವಿಷ್ಣುವೇ, ಅಜನೇ, ಉತ್ಪತ್ತಿ ಶೂನ್ಯನೇ,
ಚರ್ಮಸ್ಥಿತನಾದ ಮಹಾಪ್ರಭುವೇ , ತ್ವಕ್
ಸ್ಥಿತನಾದ ಹೇ ಅಚ್ಯುತನೇ, ಹೇ ಮಾಧವನೇ,
ತ್ವಕ್ಕಿನೀಂದಲೂ ಸ್ಪರ್ಶದಿಂದಲೂ ಮಾಡಿದ
ಪಾಪಗಳು, (೮)
ಆಕಾಶದಲ್ಲಿರುವ ಆಕಾಶನಾಮಕನಾದ
ಭಗವಂತನೇ ಸರ್ವ ವ್ಯಾಪಿಯೆ, ಮಹಾಪ್ರಭುವೇ,
ಅಚ್ಯುತನೇ ಆಕಶದಿಂದ ಮನಸಿನಿಂದಲು
ಪ್ರವೃತ್ತವಾದ ಯಾವ ಪಾಪ ಉಂಟೋ ಅದನ್ನು
ಶಮನ ಮಾಡು (೯)
ತೇಜಸ್ಸಿನಲ್ಲಿ ಇದ್ದುಕೊಂಡು ಅಗ್ನಿ ನಾಮಕನಾಗಿ
ಸಮಂಜ್ಯೋತಿಯು ಆದಿಕರ್ತನು ಆದ ನೀನು,
ಭೂತಾಗ್ನಿಯಿಂದ ಕೃತವಾದ ಯಾವ ಪಾಪ ಉಂಟೋ,
ಅದನ್ನು ಎಲೆ ಮಾಧವನೇ ನಾಶ ಮಾಡು ೧೦
ಅಪುನಲ್ಲಿ ಸ್ಥಿತನಾಗಿರುವ ಭಗವಾನ್ ವಿಷ್ಣುವು
ಆಪಾತ್ಮಕನಾಗಿ ಜೀವನ ಪ್ರದನಾದ ಹೇ
ಮಾಧವನೇ, ಅಚ್ಯುತನೇ, ಭೂತನಾದ ಉದಕದಿಂದ
ಮಾಡಿದ ಪಾಪದ ದೆಸೆಯಿಂದ ಬಿಡಿಸಿ ರಕ್ಷಿಸು ೧೧
ಹೇ ಅಚ್ಯುತನೇ, ಮಾಧವನೇ, ಭೂಮಿ ಸ್ಥಿತನಾಗಿ
ಭೂಮಿ ನಾಮಕನಾಗಿ ಜಗತ್ತಿಗೆ
ಆಧಾರನಾದ ಹೇ ಕೇಶವನೇ, ಭೂತ ಭೂಮಿಯಿಂದ
ಕೃತವಾದ ಪಾಪಗಳನ್ನು ಶಮನ ಮಾಡು (೧೨)
ಮಹತ್ ತತ್ವದಲ್ಲಿ ಇರುವ ಮಹದ್ ರೂಪಿಯಾದ
ತನ್ನಾಮಕನಾಗಿ ಜಗತ್ತಿಗೆ ಮುಖ್ಯ ಹೇತುವಾದ ಹೇ
ವಿಷ್ಣುವೇ, ಅಚ್ಯುತನೇ ಮಾಧವನೇ ಕರ್ಮಕೃತ
ಪಾಪಗಳನ್ನು ಪರಿಹರಿಸು ೧೩
ಮನಸ್ಸಿನಲ್ಲಿ ಸ್ಥಿತನಾದ ಕಾಮರೂಪಿಯಿಂದ
ಸಂಕಲ್ಪ ಪ್ರವರ್ತ ನಿವರ್ತ ಕರ್ಮನಿಯಾಮಕನಾದ
ಹೇ ಮಾಧವನೇ, ಮನಸ್ಸಿನಿಂದ ಮಾಡಿದ
ಪಾಪಗಳನ್ನು ನಾಶ ಮಾಡು ೧೪
ಬುದ್ಧಿಯಲ್ಲಿದ್ದು ಬುದ್ಧಿ ನಾಮಕನಾಗಿ
ಬೋಧಾತ್ಮನು ಹರಿಯು ಆದ ನೀನು ನನ್ನ
ಬುದ್ಧಿಯಿಂದ ಮಾಡಿದ ಯಾವ ಪಾಪ ಉಂಟೋ ಅದನ್ನು
ಹೇ ಅಚ್ಯುತನೇ ಮಾಧವನೇ ನಾಶ ಮಾಡು (೧೫)
ವಾಕಿನಲ್ಲಿದ್ದು ಅಗ್ನಿರೂಪನಾಗಿ ಅನನ್ಯಾಶ್ರಯನು
ನಿರಾಶ್ರಯನು ಆದರೂ ಹೃದಯ ಗುಹೆಯನ್ನೇ ಆಶ್ರಯ
ಮಾಡಿಕೊಂಡಿರುವ ನಾಸರಹಿತನಾದ ಮಾಧವನೇ,
ಬಾಯಿಯಿಂದ ಮಾಡಿದ ಮಹತ್ ಪಾಪಗಳನ್ನು ನಾಶ
ಮಾಡು ೧೬
ಹಸ್ತ ಸ್ಥಿತನಾದ ಭಗವಾನ್ ವಿಷ್ಣುವು ದಕ್ಷ
ನಾಮಕನಾಗಿ ಅವನಲ್ಲಿರುವ ಪುಣ್ಯ ವಿಗ್ರಹವುಳ್ಳ
ಮಾಧವನೇ ನನ್ನ ಎರಡು ಕೈಗಳಿಂದ ಮಾಡುವ
ಯಾವ ಪಾಪವಿದೆಯೋ ಅದನ್ನು ಪರಿಹರಿಸಿ ನಾಶ ಮಾಡು (೧೭)
ಪಾದದಲ್ಲಿ ಸ್ಥಿತನಾದ ಜಯಾಂತರ್ಗತನಾದ
ಜಯಂತನಾಮಕ ಭಗವಾನ್, ಗರುಡಾಸನನೇ ನನ್ನ
ಎರಡು ಪಾದಗಳಿಂದ ಕೃತವಾದ ಪಾಪಗಳನ್ನು
ನಾಶ ಮಾಡು (೧೮)
ಗುಹ್ಯೇಂದ್ರದಲ್ಲಿರುವ ಗುಹ್ಯ ರೂಪಿಯಾದ
ರಮಾಪತಿಯೇ, ಪ್ರಸವಿಷ್ಣುವೇ, ಸೃಷ್ಟಿಕರ್ತನೇ,
ಗುಹ್ಯೇಂದ್ರಿಯದಿಂದ ಕೃತವಾದ ಯಾವ ಪಾಪ
ಉಂಟೋ ಅದನ್ನು ಹೇ ಮಾಧವನೇ ನಾಶ ಮಾಡು (೧೯)
ಸಜ್ಜನರ ಸಕಲ ಪಾಪ ಪರಿಹಾರಕನಾದ
ಮೋಕ್ಷ ಪ್ರದನಾದ ಕಷ್ಟಗಳನ್ನು
ಬಿಡುಗಡೆ ಮಾಡುವ ಹೇ ಹರಿಯೇ, ಶ್ರೀಕೃಷ್ಣನೇ,
ಶಂಖ ಚಕ್ರ ಗದಾ ಪದ್ಮಧಾರಿಯೇ ಮಾಧವನೇ,
ನನ್ನನ್ನು ಶಾಶ್ವತವಾಗಿ ಸರ್ವತ್ರ ರಕ್ಷಣೆ
ಮಾಡು (೨೦)
ಸುಂದರನಾದ ವಾಮನನೇ ವಿಶ್ವಾತ್ಮನೇ,
ಬಲಿವಿಧ್ವಂಸಿಯೇ, ವಟುರೂಪಿಯೇ ಹರಿಯೇ
ಹೇ ಕೃಪಾಲಯನೇ, ಮಾಧವನೇ,
ಸರ್ವ ಸ್ಥಳದಲ್ಲಿಯೂ ನನ್ನನ್ನು ರಕ್ಷಿಸು ೨೧
ತ್ರಿವಿಕ್ರಮನೇ ಭೂತ ಭವಿಷ್ಯದ್ ವರ್ತಮಾನನೆಂಬೊ
ಕಾಲತ್ರಯ ಜ್ಞಾನಿಯೇ ಶ್ವೇತದ್ವೀಪ ಅನಂತಾಸನ
ವೈಕುಂಠವೆಂಬೋ ತ್ರಿಲೋಕ ಸ್ಥಿತನಾದ
ತ್ರಿಧಾಮನೇ, ತ್ರಯಿಮಯನೇ ಸರ್ವಾಸ್ಚರ್ಯಕರನೇ
ಹೇ ಲಕ್ಷ್ಮೀಕಾಂತನಾದ ಮಾಧವನೇ ನನ್ನನ್ನು
ರಕ್ಷಿಸು (೨೨)
ವೇದವನ್ನು ತಂದ ಮಹಾಮೀನ ರೂಪಿಯೇ
ವರುಣಪಾಶದಿಂದಲೂ ನೀರಿನಲ್ಲಿ ಜಲಚರ
ಜಂತುಗಳ ಸಮೂಹದ ದೆಸೆಯಿಂದಲೂ ಹೇ
ಮಾಧವನೇ ನನ್ನನ್ನು ರಕ್ಷಿಸು ೨೩
ಹೇ ಮಹಾವಿಷ್ಣುವೇ ನರಸಿಂಹನೇ ನೀನು ವಜ್ರಕ್ಕೆ
ಸಮಾನಗಳಾದ ಉಗುರುಳ್ಳವನೇ, ಹೇ ಮಾಧವನೇ,
ದುರ್ಗ ಅಡವಿ ದುಷ್ಟ ಗ್ರಹ, ದುಷ್ಟ ಮೃಗಗಳ
ದೆಸೆಯಿಂದ ನನ್ನನ್ನು ರಕ್ಷಿಸು (೨೪)
ಯಾವ ನಿನ್ನ ಘೋರ ಹಲ್ಲೆಂಬೋ ಚಂದ್ರ ಕಲೆಯಲ್ಲಿ
ಸಂಬಂಧವಾದ ಭೂ ಮಂಡಲವೂ
ಕಳಂಕದಂತೆ ತೋರಿತೋ, ಅಂಥಾ ವರಾಹನೇ,
ಮಾಧವನೇ, ಮಾರ್ಗದಲ್ಲಿ ನನ್ನನ್ನು ರಕ್ಷಿಸು (೨೫)
ಶಾರ್ಙ್ಗ ಧನುಸನ್ನು ಧರಿಸುವ
ಮಹಾಪರಾಕ್ರಮ ಶಾಲಿಯಾದ ಉತ್ತಮರಾದ
ಬ್ರಹ್ಮಾದಿಗಳಿಂದ ಸರ್ವೋತ್ತಮನು ಸಮಾಬ್ಯಧಿಕ
ಶೂನ್ಯನು ಆದ ಹೇ ನಾರಾಯಣನೇ, ಪ್ರೇಮದಿಂದ
ಉತ್ಪನ್ನವಾದ ಮಹಾದು:ಖದ ದೆಸೆಯಿಂದ ಹೇ
ಮಾಧವನೇ, ನನ್ನನ್ನು ರಕ್ಷಿಸು (೨೬)
ಅತ್ರಿ ಋಶಿ ಪತ್ನಿಯಾದ ಅನುಸೂಯಾ ದೇವಿಯ
ಗರ್ಭರತ್ನನೇ, ಯೋಗಿಗಳಿಂದ ಧ್ಯೇಯನೇ, ಅತ್ರಿ
ಗೋತ್ರೋಪನ್ನನೇ, ಹೇ ದತ್ತಾತ್ರೇಯನೇ ಮಾಧವನೇ
ಯೋಗೋಪಾಯ ವಿಹೀನನಾದ ನನ್ನನ್ನು ರಕ್ಷಿಸು (೨೭)
ಹೇ ಸನತ್ಕುಮಾರನೇ, ಕಪಿಲನೇ, ಹಯಗ್ರೀವನೇ, ಹೇ
ಮಾಧವನೇ, ದೇವಹೇಳನದ ಬಂಧನದ
ದೆಸೆಯಿಂದ ನನ್ನನ್ನು ಬಿಡುಗಡೆ ಮಾಡಿ ರಕ್ಷಿಸು (೨೮)
ಸಮಸ್ತ ಜಗತ್ತಿಗೂ ಆಧಾರನಾದ ಸರ್ವ
ದೇವತೆಗಳ ಭಯವನ್ನು ಪರಿಹಾರ ಮಾಡುವವನೇ,
ಹೇ ಮಾಧವನೇ, ಘೋರವಾದ ನರಕಗಳ
ಯಾತೆನೆಗಳಿಂದ ನನ್ನನ್ನು ರಕ್ಷಿಸು (೨೯)
ಹೇ ಧನ್ವಂತ್ರಿಯೇ, ಚಿದಾನಂದ ಸ್ವರೂಪಿಯೇ, ಸರ್ವ
ಪ್ರಪಂಚದ ವೈದ್ಯನೇ ಹೇ ಮಾಧವನೇ,
ಅಪತ್ಯದಿಂದ ಜನಿಸುವ ಮಹಾ ದು:ಖಗಳ
ದೆಸೆಯಿಂದ ನನ್ನನ್ನು ರಕ್ಷಿಸು (೩೦)
ಸರ್ವತ್ರ ವ್ಯಾಪ್ತನಾದ ಮಹಾಶಕ್ತಿ
ಬಲಜ್ಞಾನಗಳುಲ್ಲ ನಾಶ ರಹಿತನಾದ ಹೇ
ಮಾಧವನೇ, ಸುಖ ದು:ಖ ಲಾಭಾಲಭಾದಿ
ದ್ವಂದ್ವಗಳಿಂದ ಉಂಟಾಗುವ ಮಹಾ ದು:ಖಗಳ
ದೆಸೆಯಿಂದ ಬಿಡುಗಡೆ ಮಾಡಿ ರಕ್ಷಿಸು (೩೧)
ಹೇ ಕೃಷ್ಣದ್ವೈಪಾಯನೇ, ಹರಿಯೇ, ಬುದ್ಧನೇ,
ಕಲ್ಕಿ ರೂಪಿಯೇ, ಶುಭ ಪ್ರದನೇ, ಹೇ ಮಾಧವನೇ,
ಅಜ್ಞಾನವೆ ಮೊದಲಾದ ಭಯದ ಅಪಾಯದಿಂದ
ನಿತ್ಯವು ನನ್ನನ್ನು ರಕ್ಷಿಸು (೩೨)
ಹೇ ಕೇಶವ, ಅಚ್ಯುತಾ, ಗೊವಿಂದ, ದಾಮೋದರ,
ಜನಾರ್ದನನೇ, ಪ್ರತಃ ಮದ್ಯಾನ್ಹ ಸಂಧ್ಯಾ
ಕಾಲಗಳಲ್ಲಿ ಹೇ ಮಾಧವನೇ ನನ್ನನ್ನು
ನಿತ್ಯದಲ್ಲಿಯೂ ರಕ್ಷಿಸು (೩೩)
ಕಾಲ ಮೂರ್ತಿಯೇ, ಮಹಾವಿಷ್ಣುವೇ, ಪದ್ಮನಾಭನೇ,
ಗದಾಧರನೇ, ಪ್ರದೋಷವೇ, ಮೊದಲಾದ ದುಷ್ಟ
ಕಾಲಗಳ ದೆಸೆಯಿಂದ ನನ್ನನ್ನು ರಕ್ಷಿಸು (೩೪)
ಶ್ರೀ ವತ್ಸಲಾಂಚನವನ್ನು ಮಹಾ
ಸಂಪತ್ಯುಕ್ತನೇ, ಶ್ರೀಕಾಂತನೇ, ಚಕ್ರಪಾಣಿಯೇ,
ಸಂಸಾರ ದು:ಖ ಪರಿಹಾರಕನೇ , ಹೇ ಮಾಧವನೇ,
ಅಜ್ಞಾನಾಖ್ಯ ಕತ್ತಲೆಯ ದೆಸೆಯಿಂದ ನಿತ್ಯವು
ನನ್ನನ್ನು ರಕ್ಷಿಸು (೩೫)
ವಾಸುದೇವನೇ, ಜಗತ್ಯೋನಿಯೇ, ಜಗತ್ತಿನ ಉತ್ಪತ್ತಿಗೆ
ಮೂಲಕಾರಣನೇ, ಶತೃಗಳನ್ನು ಜೆಯಿಸಿದವನೇ,
ಜಿತಾಮಿತ್ರನೇ, ಚತುರ್ಭುಜನೇ, ಹೇ ಮಾಧವನೇ,
ಅಜ್ಞಾನದಿಂದ ನನ್ನಿಂದ ಮಾಡಲ್ಪಟ್ಟ ಪಾಪದ
ದೆಸೆಯಿಂದ ನನ್ನನ್ನು ರಕ್ಷಿಸು (೩೬)
ವೇದಸಾರನೇ ಜಗತ್ರಕ್ಷಕನೇ, ಸತ್ಯವಾಕ್
ಉಳ್ಳವನೇ, ಸತ್ಯ ವಿಕ್ರಮನೇ, ಹೇ ಮಾಧವನೇ,
ಸುಳ್ಳು ಹೇಳುವುದರಿಂದ ಉಂಟಾದ ಮಹಾಪಾಪದ
ದೆಸೆಯಿಂದ ನನ್ನನ್ನು ಬಿಡಿಸಿ ರಕ್ಷಿಸು (೩೭)
ಉತ್ತಾಮಾನಂದ ಪೂಣಾನಂದನೇ ಪೂರ್ಣನೇ
ಪರಬ್ರಹ್ಮನೇ ಸತ್ಯಬೋಧನೇ, ಅವ್ಯಯಾತ್ಮಕನೇ,
ಹೇ ಮಾಧವನೇ, ನಿನ್ನನ್ನು ಧ್ಯಾನ ಮಾಡದಿರುವ
ಮಹಾಪಾಪದ ದೆಸೆಯಿಂದ ನನ್ನನ್ನು ಬಿಡಿಸಿ
ರಕ್ಷಿಸು (೩೮)
ಸರ್ವಕರ್ತನೇ, ಸರ್ವವನ್ನು ಸಾಕ್ಷಾತಾಗಿ
ಅವ್ಯವಧಾನದಿಂದ ನೋಡುವನೇ, ಸರ್ವ ಸಾಕ್ಷಿಯೇ,
ಮಂಗಲರೂಪಿಯೇ, ಸರ್ವ ಸ್ವತಂತ್ರನೇ,
ಮಂಗಳಪ್ರದನೇ, ಹೇ ಮಾಧವನೇ, ನೀನು
ಮಂಗಳಕರವಾದ ಸುಜ್ಞಾನ ರೂಪ
ಉಳ್ಳವನೆಂಬೊ ಸಮಿಚೀನ ಜ್ಞಾನ ರಹಿತದಿಂದ
ಉಂಟಾದ ಪಾಪದ ದೆಸೆಯಿಂದ ನನ್ನನ್ನು ಬಿಡಿಸಿ
ರಕ್ಷಿಸು (೩೯)
ಸರ್ವ ಯಜ್ಞಗಳನ್ನು ಪ್ರೇರಣೆ ಮಾಡುವ
ಪೂಜಾ ಯಜ್ಞ ಯಾಗಾದಿ ಸತ್ಕರ್ಮಗಳನ್ನ
ಯಜ್ಞಕರ್ತನಾದ, ಯಜ್ಞಾಂತರ್ಗತಗತನು,
ಯಜ್ಞನಾಮಕನು, ಯಜ್ಞ ಸಾರ ಭೋಕ್ತನು, ಸಕಲ
ಯಜ್ಞ ಸಾಧಕನು ಆದ ಯಜ್ಞನೇ, ಯಜ್ಞ
ನಾರಾಯಣನೇ, ಪೂಜ ಯಜ್ಞಾದಿ ಸತ್ಕರ್ಮಗಳನ
ತ್ಯಜಿಸಿದರಿಂದ ಉಂಟಾದ ಮಹಾಪಾಪದ
ದೆಸೆಯಿಂದ ಹೇ ಮಾಧವನೇ ನನ್ನನ್ನು ರಕ್ಷಿಸು (೪೦)
ಭಕ್ತಪ್ರಿಯನೇ, ಸಮಸ್ತ ಚರಾಚರ
ಪ್ರಪಂಚಕ್ಕೆ ಆಧಾರನೇ, ಪೂರ್ಣಾಕೃತಿಯೇ,
ನಿರಾಮಯನೇ, ಮಾಧವನೇ,
ನಿನ್ನಲ್ಲಿ ಅನುರಾಗವಿಲ್ಲದ ಮಹಾಪಾಪದ ದೆಸೆಯಿಂದ
ನನ್ನನ್ನು ರಕ್ಷಿಸು (೪೧)
ನಿರ್ದೋಷಿಯೇ, ಪ್ರಾಕೃತ ಆಕಾರಶೂನ್ಯನೇ, ಸತ್ವ,
ರಜಸ್, ತಮಸ್ ಎಂಬೋ ಗುಣತ್ರಯ ಸಂಬಂಧ
ರಹಿತನೇ, ಸರ್ವರಿಂದಲು ನಮಸ್ಕೃತನೇ,
ನಿಸ್ಚಲನೇ, ಸರ್ವ ದೇಹಪ್ರಕಾರವಾಗಿ ಇರುವನೇ,
ಹೇ ಮಾಧವನೇ, ಗುಣತ್ರಯದಿಂದ ಮಾಡಲ್ಪಟ್ಟ
ಬಂಧನದ ದೆಸೆಯಿಂದ ನನ್ನನ್ನು ಅನುಗಾಲವು
ರಕ್ಷಿಸು (೪೨)
ಕ್ಷೇತ್ರಜ್ಞನೇ, ಕ್ಷೇತ್ರಜ್ಞನೇ, ಹೇ ಕ್ಷೇತ್ರಿಯೇ,
ದೇಹೇಂದ್ರಿಯಾದಿ ತತ್ವಗಳಿಂದ ದೂರನೇ,
ಕೃಪಾಕರನೇ, ಈ ಕ್ಷೇತ್ರದಿಂದ ಉತ್ಪನ್ನವಾದ
ಮಹಾಪಾಪದ ದೆಸೆಯಿಂದ ಬಿಡಿಸಿ ಹೇ ಮಾಧವನೇ
ನನ್ನನ್ನು ರಕ್ಷಿಸು (೪೩)
ನಿಂತಾಗ ಕುಳಿತಾಗ ಮಲಗಿ ನಿದ್ರಿಸುವಾಗ
ತಿರುಗಾಡುವಾಗ ಪಾನ ಮಾಡುವಾಗ ತಿನ್ನುವಾಗ
ಆಕಳಿಸುವಾಗ ಯಾವ ಪಾಪಗಳು
ಮಾಡಲ್ಪಡುತ್ತದೆಯೋ ಹೇ ಮಾಧವನೇ
ಅವುಗಳಿಂದ ನನ್ನನ್ನು ಬಿಡಿಸಿ ರಕ್ಷಿಸು (೪೪)
ದಾಕ್ಷಿಣ್ಯದಿಂದ ದ್ರವ್ಯ ಲೋಭದಿಂದ,
ಭಯದಿಂದ, ಅಥವಾ ದುಷ್ಟ ಸಹವಾಸದಿಂದ
ಜವರಿಸಿ, ಹೆದರಿಸಿದರಿಂದ ಯೇನು ಪಾಪಗಳು
ಮಾಡಲ್ಪಡುತ್ತಯೋ ಹೇ ಮಾಧವನೇ, ಅವುಗಳ
ದೆಸೆಯಿಂದ ನನ್ನನ್ನು ಬಿಡಿಸಿ ರಕ್ಷಿಸು (೪೫)
ಆಲಸ್ಯದ ದೆಸೆಯಿಂದಲೂ, ದುಷ್ಟ ಪಾಪದ
ದೆಸೆಯಿಂದಲೂ, ಮೋಕ್ಷೋಪಾಯವು ನನ್ನಿಂದ
ಸಾಧಿಸಲ್ಪಡಲಿಲ್ಲ, ಅಂತ ಪಾಪದ ದೆಸೆಯಿಂದ ಹೇ
ಮಾಧವನೇ ನನ್ನನ್ನು ರಕ್ಷಿಸು (೪೬)
ಅಗಮ್ಯಾಗಮನದ ದೆಸೆಯಿಂದ, ತಿನ್ನಬಾರದ
ಪದಾರ್ಥಗಳನ್ನು ತಿನ್ನುವುದು,
ಮದ್ಯಪಾನಾದಿಗಳ ಸೇವನೆಗಳಿಂದ ಬರುವ
ಪಾಪಗಳ ದೆಸೆಯಿಂದ ಹೇ ವಿಷ್ಣುವೇ, ಆ
ಕಾರ್ಯಗಳನ್ನು ಮಾಡುವದರಿಂದ ಬಂದ
ಪಾಪಗಳ ದೆಸೆಯಿಂದ ಹೇ ಮಾಧವನೇ ನನ್ನನ್ನು
ರಕ್ಷಿಸು (೪೭)
ಭೋಗಲೋಲುಪದೇ ದುರಾಭ್ಯಾಸ ದುಷ್ಟರ
ಸಮಾಗಮ ಪ್ರತಿಗ್ರಹ ದುರಾಚಾರಗಳಿಂದ
ಬರುವ ಪಾಪಗಳ ದೆಸೆಯಿಂದ ಹೇ ಮಾಧವನೇ
ನನ್ನನ್ನು ರಕ್ಷಿಸು (೪೮)
ಅಗ್ನಿ ಕಾರ್ಯ ಪರಿಚರ್ಯ ಮಾಡದ ದುರಾನ್ನದಿಂದ,
ಸಂಧ್ಯಾ ಕರ್ಮಗಳನ್ನು ಮಾಡದೆ, ಲೋಭ
ಮಾಡಿದ ಮತ್ತು ಪರಮಾತ್ಮನಾದ ನಿನ್ನನ್ನು
ಪೂಜಿಸದಿರುವ ಪಾಪಗಳ ದೆಸೆಯಿಂದ ರಕ್ಷಿಸು ೪೯
ಏಕಾದಶಿಯಲ್ಲಿ ಅನ್ನ ತಿಂದ ಪಾಪ, ದ್ವಾದಶಿಯಲ್ಲಿ
ಎರಡು ಹೊತ್ತು ಊಟ ಮಾಡಿದ ಪಾಪ ಮತ್ತು ಶ್ರಾದ್ಧ
ಕರ್ಮಗಳನ ತ್ಯಾಗ ಮಾಡಿದ ಪಾಪದ ದೆಸೆಯಿಂದ
ಹೇ ಮಾಧವನೇ ನನ್ನನ್ನು ರಕ್ಷಿಸು ೫೦
ವೇದ ಶಾಸ್ತ್ರಾಭ್ಯಾಸ ಪ್ರವಚನ
ಮಾಡದಿರುವುದರಿಂದ, ವ್ರತಾನುಷ್ಟಾನಾದಿ ಸತ್
ಕರ್ಮಗಳ ತ್ಯಜಿಸಿದ, ದುರಾಗ್ರಹದಿಂದ
ಜನನವಿತ್ತ ತಂದೆ ತಾಯಿ ಮತ್ತು ಗುರುಗಳನ್ನು,
ಭಕ್ತರಾದ ಸಾಧು ಸಜ್ಜನರುಗಳನ್ನು, ನಿಂದಿಸಿದ
ಪಾಪಗಳ ದೆಸೆಯಿಂದ ನನ್ನನ್ನು ರಕ್ಷಿಸು (೫೧)
ಆಶ್ರಮ ಧರ್ಮವನ್ನು ಅವಲಂಬಿಸದಿರುವ
ಅಧ್ಯಯನ ಮಾಡದಿರುವ ಮತ್ತು ಗುರುಗಳಲ್ಲಿ
ನಿರಂತರ ವಿಶ್ವಾಸವನ್ನಿಡದಿರುವ ಪಾಪಗಳ
ದಸೆಯಿಂದ ದನುಜಾಂತಕನೇ, ನನ್ನನ್ನು ರಕ್ಷಿಸು (೫೨)
ಹೇ ಮಹಾಬಾಹುವೇ, ಮಾಧವನೇ, ಕುಲಸ್ತ್ರೀಯರ
ದೂಶಣೆ, ವಿವಾಹಕ್ಕೆ ವಿಘ್ನ, ಇತರ ಆಸೆಯನ್ನು
ನಿರಾಸೆ ಮಾಡದಿರುವಂತೇ ನನ್ನನ್ನು ರಕ್ಷಿಸು (೫೩)
ಇಬ್ಬರ ಹೆಂಡತಿಯಲ್ಲಿ ಯಾವಳೊಬ್ಬವನಾದರು
ದುಷ್ಟ ಮನಸಿನಿಂದ ತ್ಯಾಗ ಮಾಡುವದಿಂದ
ಅಥವಾ ಪರಸ್ತ್ರೀ ಗಮನದಿಂದ ಬರುವ ಪಾಪದ
ದೆಸೆಯಿಂದ ಹೇ ಮಾಧವನೇ ನನ್ನನ್ನು ರಕ್ಷಿಸು (೫೪)
ಮೇರುಪರ್ವತ, ಮಂದರ ಪರ್ವತಕೆ
ಸಮಾನಗಳಾದ ಪಾಪದ ದೆಸೆಯಿಂದಲೂ
ಉಪಪಾತಕಗಳ ದೆಸೆಯಿಂದಲೂ, ಬ್ರಹ್ಮಹತ್ಯಾದಿ
ಮಹಾಪಾಪಗಳ ದೆಸೆಯಿಂದಲೂ ಹೇ ಮಾಧವನೇ
ನನ್ನನ್ನು ಬಿಡಿಸಿ ಅನುಗಾಲವು ರಕ್ಷಿಸು (೫೫)
ಫಲಶ್ರುತಿ :
ಹೀಗೆ ಈ ರೀತಿಯಾಗಿ ಪೇಳಿದ ಪುಣ್ಯಪ್ರದವು,
ಮಹಾಪಾತಕ ನಾಶಕರವು, ದಾರಿದ್ರ್ಯ
ಪರಿಹಾರಕರವು, ಧನ್ಯವು ಯಶಸ್ಕರವು,
ಆಯುಷ್ಯ ವೃದ್ಧಿಕರವು ಆದ ಮಾಧವ
ಸ್ತವರಾಜವನ್ನು ಯಾವ ದ್ವಿಜೋತ್ತಮನು
ನಿರಂತರ ಮಾಗಸ್ನಾನ ಮಾಡಿ, ಪಠಿಸುತ್ತಾನೆಯೋ,
ಅವನಿಗೆ ಅಂಥಾ ಮಾಘ ಮಾಸದಲ್ಲಿ ಮಾಡಿದ
ಪುಣ್ಯವು ಕೋಟಿ ಕೋಟಿ ಗುಣಾದಿಕ ಫಲವನ್ನು ಕೊಡುತ್ತದೆ |
ಮನುಷ್ಯನು ನಿತ್ಯದಲ್ಲಿಯೂ ಪ್ರಾತಕಾಲದಲ್ಲಿ
ಶುಚಿರ್ಭೂತನು ಶಾಂತನು ಜಿತೇಂದ್ರಿಯನು ಆಗಿ
ಪಠಿಸಬೇಕು.
ಅಂಥವನು ಉತ್ತರೋತ್ತರವಾಗಿ ದೇವತೆಗಳಿಂದಲೂ
ವಿಶೆಷವಾಗಿ ಪೂಜಿತನು ಸನ್ಮಾನಿತನು ಆಗುವನು.
ಈ ಮಾಧವ ಸ್ತವರಾಜವನ್ನು ಯಾವನು ನಿತ್ಯವಾಗಿ
ತಪ್ಪದೇ, ಶುಚಿಯಾಗಿ ಪ್ರತಿನಿತ್ಯವೂ
ಪಠಿಸುತ್ತಾನೇಯೋ, ಅವನೇ ಪುರುಷನೂ, ಅವನೇ
ಜನಾರ್ದನನನಾಗುವನು ಅಂದರೇ ಜನಾರ್ದನನ
ಪೂರ್ಣಾನುಗ್ರಹಕ್ಕೆ ಪಾತ್ರನಾಗಿ ಮುಕ್ತನಾಗುವನು |
ಈ ಮಾಧವ ಸ್ತವರಾಜವನ್ನು ಪಠಿಸುವವನಿಗೆ
ಗ್ರಹಾದಿಗಳ ವ್ಯಥೆಯೂ, ಪಾತಕವೂ ಎಂದಿಗೂ
ಆಗುವುದಿಲ್ಲ.
ಈ ಮಾಧವ ಸ್ತವರಾಜಯೆಂಬೊ ಮಹಾ ಮಂತ್ರವನ್ನು
ಯಾವನು ಪುಣ್ಯಕಾಲದಲ್ಲಿ ಪಠಿಸುತ್ತಾನೇಯೋ, ಅವನು
ಅನೇಕ ಕೋಟಿ ಕಲ್ಪ ಕಾಲಗಳಲ್ಲಿ ವಿಷ್ಣು ಲೋಕದಲ್ಲಿ,
ವಿಷ್ಣು ಮಂದಿರದಲ್ಲಿ ಆನಂದಿಸುತ್ತಾನೆ.
ಮಾಧವ ಸ್ತವರಾಜವು ಪಾಪವೆಂಬೊ ಪೊದೆಗೆ ಕಾಡು
ಗಿಚ್ಚಿನಂತೆ ಇರುವುದು, ಅಂದರೆ ಪಾಪವನ್ನು ಸುಟ್ಟು
ಭಸ್ಮ ಮಾಡುವುದು. ಧರ್ಮಾದಿ ಮೋಕ್ಷ
ಪರಿಯಂತವಾಗಿ ಪುರುಷಾರ್ಥಕ್ಕೆ ಕಾರಣವು
ಸೂರ್ಯ ಚಂದ್ರ ಗ್ರಹಣ ಕಾಲದಲ್ಲಿ ಇದನ್ನು
ಪಠನೆ ಮಾಡಿದರೆ ಅನಂತ ಫಲವನ್ನು
ಭಗವಂತ ಕರುಣಿಸುತ್ತಾನೆ.
ವಾಯು ಪುರಾಣದಲ್ಲಿ ಬಂದ ಈ ಮಾದವಸ್ತವರಾಜದ
ಕನ್ನಡ ಅನುವಾದ ಸಂಪೂರ್ಣಂ.
ಶ್ರೀ ಕೃಷ್ಣಾರ್ಪಣಮಸ್ತು |
sarva pApagaLa upaSAMtyarthavAgi I
mAdhavastavarAja maMtravannu upayOgisuvudu.
idu sarvarOga vinASakaravu, janarige Bakti
mukti pradavu Agide (1)
caturvidha nASa SUnyanAda hE acyutanE, hE
aniruddhanE, AdyaMta madhya rahitanE,
bahurUpiyE, vEda pratipAdyanu, gOvugaLiMda
krIDisuvanu Ada gOviMdanE, morehokkara
duHKavannu pariharisuvanE shrI hariyE nimma
nAmasmaraNeyiMda enagIgalE manasu
Suddhiyannu uMTumADu (2)
hE sarvEMdriya niyAmakanAda hRuShIkESanE,
jagatvyApiyE, sarvasAkShiyE, dayAnidhiyE,
sadA dharma kAryagaLalli anukUlavAgi
pravartisuvaMte nanna iMdriyaMgaLannu
mADu (3)
chakShu aMtargatanu sUryanalli vAsiyE,
sUryaniMda sEvitanAda sUryAtmakanAda nInu,
hE mahAbAhuvE,
sadA enage dharma mArgavannu tOrisu (4)
dik rUpiyAda nInu SOtrEMdriya sthitanAda
yAva nInu sarva pratyAya gOcaranAgiruveyO
aMta Sruti vEdagaLiMda nanna eraDu
kivigaLannu ninna kathA SravaNadalli
pravartisuvaMte mADu (5)
hE nAsatya rUpi BagavaMta nInu
nASi mArgadalliddu divyavAda ninna pAdadalli
arpitavAda puShpagaLannu AgraNisuvaMte
mADu. hE nASavillada hariyE, nanna mAtannu
SIGravAgi pAlisu (6)
hE mahApraBuvE, jihveyalliddu varNAMtargata
nInu, anaMta Sakti dharisuva, hE
lakShmIpatiyAda mAdhavanE, nanna
nAligeyannu ninage arpitavAda SESha
rasagaLanna svAdanna mADuvaMte pravarti
uLLavanAgi mADu (7)
prANAtmakanAda sarvatra vyAptanAda
viShNuvE, ajanE, utpatti shUnyanE,
charmasthitanAda mahAprabhuvE , tvak
sthitanAda hE achyutanE, hE mAdhavanE,
tvakkinIMdalU sparshadiMdalU mADida
pApagaLu, (8)
AkAshadalliruva AkAshanAmakanAda
BagavaMtanE sarva vyApiye, mahAprabhuvE,
achyutanE AkashadiMda manasiniMdalu
pravRuttavAda yAva pApa uMTO adannu
shamana mADu (9)
tEjassinalli iddukoMDu agni nAmakanAgi
samaMjyOtiyu Adikartanu Ada nInu,
BUtAgniyiMda kRutavAda yAva pApa uMTO,
adannu ele mAdhavanE nASa mADu 10
apunalli sthitanAgiruva BagavAn viShNuvu
ApAtmakanAgi jIvana pradanAda hE
mAdhavanE, acyutanE, BUtanAda udakadiMda
mADida pApada deseyiMda biDisi rakShisu 11
hE acyutanE, mAdhavanE, BUmi sthitanAgi
BUmi nAmakanAgi jagattige
AdhAranAda hE kESavanE, BUta BUmiyiMda
kRutavAda pApagaLannu shamana mADu (12)
mahat tatvadalli iruva mahad rUpiyAda
tannAmakanAgi jagattige mukhya hEtuvAda hE
viShNuvE, acyutanE mAdhavanE karmakRuta
pApagaLannu pariharisu 13
manassinalli sthitanAda kAmarUpiyiMda
saMkalpa pravarta nivarta karmaniyAmakanAda
hE mAdhavanE, manassiniMda mADida
pApagaLannu nASa mADu 14
buddhiyalliddu buddhi nAmakanAgi
bOdhAtmanu hariyu Ada nInu nanna
buddhiyiMda mADida yAva pApa uMTO adannu
hE achyutanE mAdhavanE nASa mADu (15)
vAkinalliddu agnirUpanAgi ananyASrayanu
nirASrayanu AdarU hRudaya guheyannE ASraya
mADikoMDiruva nAsarahitanAda mAdhavanE,
bAyiyiMda mADida mahat pApagaLannu nASa
mADu 16
hasta sthitanAda BagavAn viShNuvu dakSha
nAmakanAgi avanalliruva puNya vigrahavuLLa
mAdhavanE nanna eraDu kaigaLiMda mADuva
yAva pApavideyO adannu pariharisi nASa mADu (17)
pAdadalli sthitanAda jayAMtargatanAda
jayaMtanAmaka BagavAn, garuDAsananE nanna
eraDu pAdagaLiMda kRutavAda pApagaLannu
nASa mADu (18)
guhyEMdradalliruva guhya rUpiyAda
ramApatiyE, prasaviShNuvE, sRuShTikartanE,
guhyEMdriyadiMda kRutavAda yAva pApa
uMTO adannu hE mAdhavanE nASa mADu (19)
sajjanara sakala pApa parihArakanAda
mOkSha pradanAda kaShTagaLannu
biDugaDe mADuva hE hariyE, SrIkRuShNanE,
SaMKa cakra gadA padmadhAriyE mAdhavanE,
nannannu SASvatavAgi sarvatra rakShaNe
mADu (20)
suMdaranAda vAmananE viSvAtmanE,
balividhvaMsiyE, vaTurUpiyE hariyE
hE kRupAlayanE, mAdhavanE,
sarva sthaLadalliyU nannannu rakShisu 21
trivikramanE BUta BaviShyad vartamAnaneMbo
kAlatraya j~jAniyE shvEtadvIpa anaMtAsana
vaikuMThaveMbO trilOka sthitanAda
tridhAmanE, trayimayanE sarvAscharyakaranE
hE lakShmIkAMtanAda mAdhavanE nannannu
rakShisu (22)
vEdavannu taMda mahAmIna rUpiyE
varuNapASadiMdalU nIrinalli jalacara
jaMtugaLa samUhada deseyiMdalU hE
mAdhavanE nannannu rakShisu 23
hE mahAviShNuvE narasiMhanE nInu vajrakke
samAnagaLAda uguruLLavanE, hE mAdhavanE,
durga aDavi duShTa graha, duShTa mRugagaLa
deseyiMda nannannu rakShisu (24)
yAva ninna ghOra halleMbO chaMdra kaleyalli
saMbaMdhavAda bhU maMDalavU
kaLaMkadaMte tOritO, aMthA varAhanE,
mAdhavanE, mArgadalli nannannu rakShisu (25)
shAr~gga dhanusannu dharisuva
mahAparAkrama shAliyAda uttamarAda
brahmAdigaLiMda sarvOttamanu samAbyadhika
shUnyanu Ada hE nArAyaNanE, prEmadiMda
utpannavAda mahAdu:khada deseyiMda hE
mAdhavanE, nannannu rakShisu (26)
atri Rushi patniyAda anusUyA dEviya
garbharatnanE, yOgigaLiMda dhyEyanE, atri
gOtrOpannanE, hE dattAtrEyanE mAdhavanE
yOgOpAya viheenanAda nannannu rakShisu (27)
hE sanatkumAranE, kapilanE, hayagreevanE, hE
mAdhavanE, dEvahELanada baMdhanada
deseyiMda nannannu biDugaDe mADi rakShisu (28)
samasta jagattigU AdhAranAda sarva
dEvategaLa bhayavannu parihAra mADuvavanE,
hE mAdhavanE, ghOravAda narakagaLa
yAtenegaLiMda nannannu rakShisu (29)
hE dhanvaMtriyE, chidAnaMda svarUpiyE, sarva
prapaMchada vaidyanE hE mAdhavanE,
apatyadiMda janisuva mahA du:khagaLa
deseyiMda nannannu rakShisu (30)
sarvatra vyAptanAda mahAshakti
balaj~jAnagaLulla nAsha rahitanAda hE
mAdhavanE, sukha du:kha lAbhAlabhAdi
dvaMdvagaLiMda uMTAguva mahA du:khagaLa
deseyiMda biDugaDe mADi rakShisu (31)
hE kRuShNadvaipAyanE, hariyE, buddhanE,
kalki rUpiyE, shubha pradanE, hE mAdhavanE,
aj~jAnave modalAda bhayada apAyadiMda
nityavu nannannu rakShisu (32)
hE kEshava, achyutA, goviMda, dAmOdara,
janArdananE, prataH madyAnha saMdhyA
kAlagaLalli hE mAdhavanE nannannu
nityadalliyU rakShisu (33)
kAla mUrtiyE, mahAviShNuvE, padmanAbhanE,
gadAdharanE, pradOShavE, modalAda duShTa
kAlagaLa deseyiMda nannannu rakShisu (34)
shrI vatsalAMchanavannu mahA
saMpatyuktanE, shrIkAMtanE, chakrapANiyE,
saMsAra du:kha parihArakanE , hE mAdhavanE,
aj~jAnAkhya kattaleya deseyiMda nityavu
nannannu rakShisu (35)
vAsudEvanE, jagatyOniyE, jagattina utpattige
mUlakAraNanE, shatRugaLannu jeyisidavanE,
jitAmitranE, chaturbhujanE, hE mAdhavanE,
aj~jAnadiMda nanniMda mADalpaTTa pApada
deseyiMda nannannu rakShisu (36)
vEdasAranE jagatrakShakanE, satyavAk
uLLavanE, satya vikramanE, hE mAdhavanE,
suLLu hELuvudariMda uMTAda mahApApada
deseyiMda nannannu biDisi rakShisu (37)
uttAmAnaMda pUNAnaMdanE pUrNanE
parabrahmanE satyabOdhanE, avyayAtmakanE,
hE mAdhavanE, ninnannu dhyAna mADadiruva
mahApApada deseyiMda nannannu biDisi
rakShisu (38)
sarvakartanE, sarvavannu sAkShAtAgi
avyavadhAnadiMda nODuvanE, sarva sAkShiyE,
maMgalarUpiyE, sarva svataMtranE,
maMgaLapradanE, hE mAdhavanE, neenu
maMgaLakaravAda suj~jAna rUpa
uLLavaneMbo samicIna j~jAna rahitadiMda
uMTAda pApada deseyiMda nannannu biDisi
rakShisu (39)
sarva yaj~jagaLannu prEraNe mADuva
pUjA yaj~ja yAgAdi satkarmagaLanna
yaj~jakartanAda, yaj~jAMtargatagatanu,
yaj~janAmakanu, yaj~ja sAra bhOktanu, sakala
yaj~ja sAdhakanu Ada yaj~janE, yaj~ja
nArAyaNanE, pooja yaj~jAdi satkarmagaLana
tyajisidariMda uMTAda mahApApada
deseyiMda hE mAdhavanE nannannu rakShisu (40)
bhaktapriyanE, samasta charAchara
prapaMchakke AdhAranE, pUrNAkRutiyE,
nirAmayanE, mAdhavanE,
ninnalli anurAgavillada mahApApada deseyiMda
nannannu rakShisu (41)
nirdOShiyE, prAkRuta AkArashUnyanE, satva,
rajas, tamas eMbO guNatraya saMbaMdha
rahitanE, sarvariMdalu namaskRutanE,
nischalanE, sarva dEhaprakAravAgi iruvanE,
hE mAdhavanE, guNatrayadiMda mADalpaTTa
baMdhanada deseyiMda nannannu anugAlavu
rakShisu (42)
kShEtraj~janE, kShEtraj~janE, hE kShEtriyE,
dEhEMdriyAdi tatvagaLiMda dooranE,
kRupAkaranE, ee kShEtradiMda utpannavAda
mahApApada deseyiMda biDisi hE mAdhavanE
nannannu rakShisu (43)
niMtAga kuLitAga malagi nidrisuvAga
tirugADuvAga pAna mADuvAga tinnuvAga
AkaLisuvAga yAva pApagaLu
mADalpaDuttadeyO hE mAdhavanE
avugaLiMda nannannu biDisi rakShisu (44)
dAkShiNyadiMda dravya lObhadiMda,
bhayadiMda, athavA duShTa sahavAsadiMda
javarisi, hedarisidariMda yEnu pApagaLu
mADalpaDuttayO hE mAdhavanE, avugaLa
deseyiMda nannannu biDisi rakShisu (45)
Alasyada deseyiMdalU, duShTa pApada
deseyiMdalU, mOkShOpAyavu nanniMda
sAdhisalpaDalilla, aMta pApada deseyiMda hE
mAdhavanE nannannu rakShisu (46)
agamyAgamanada deseyiMda, tinnabArada
padArthagaLannu tinnuvudu,
madyapAnAdigaLa sEvanegaLiMda baruva
pApagaLa deseyiMda hE viShNuvE, A
kAryagaLannu mADuvadariMda baMda
pApagaLa deseyiMda hE mAdhavanE nannannu
rakShisu (47)
bhOgalOlupadE durAbhyAsa duShTara
samAgama pratigraha durAchAragaLiMda
baruva pApagaLa deseyiMda hE mAdhavanE
nannannu rakShisu (48)
agni kArya paricharya mADada durAnnadiMda,
saMdhyA karmagaLannu mADade, lOBa
mADida mattu paramAtmanAda ninnannu
pUjisadiruva pApagaLa deseyiMda rakShisu 49
EkAdaSiyalli anna tiMda pApa, dvAdaSiyalli
eraDu hottu UTa mADida pApa mattu SrAddha
karmagaLana tyAga mADida pApada deseyiMda
hE mAdhavanE nannannu rakShisu 50
vEda SAstrAByAsa pravacana
mADadiruvudariMda, vratAnuShTAnAdi sat
karmagaLa tyajisida, durAgrahadiMda
jananavitta taMde tAyi mattu gurugaLannu,
bhaktarAda sAdhu sajjanarugaLannu, niMdisida
pApagaLa deseyiMda nannannu rakShisu (51)
Ashrama dharmavannu avalaMbisadiruva
adhyayana mADadiruva mattu gurugaLalli
niraMtara vishvAsavanniDadiruva pApagaLa
daseyiMda danujAMtakanE, nannannu rakShisu (52)
hE mahAbAhuvE, mAdhavanE, kulastrIyara
dUshaNe, vivAhakke vighna, itara Aseyannu
nirAse mADadiruvaMtE nannannu rakShisu (53)
ibbara heMDatiyalli yAvaLobbavanAdaru
duShTa manasiniMda tyAga mADuvadiMda
athavA parastrI gamanadiMda baruva pApada
deseyiMda hE mAdhavanE nannannu rakShisu (54)
mEruparvata, maMdara parvatake
samAnagaLAda pApada deseyiMdalU
upapAtakagaLa deseyiMdalU, brahmahatyAdi
mahApApagaLa deseyiMdalU hE mAdhavanE
nannannu biDisi anugAlavu rakShisu (55)
phalashruti :
hIge I rItiyAgi pELida puNyapradavu,
mahApAtaka nASakaravu, dAridrya
parihArakaravu, dhanyavu yaSaskaravu,
AyuShya vRuddhikaravu Ada mAdhava
stavarAjavannu yAva dvijOttamanu
niraMtara mAgasnAna mADi, paThisuttAneyO,
avanige aMthA mAgha mAsadalli mADida
puNyavu kOTi kOTi guNAdika Palavannu koDuttade |
manuShyanu nityadalliyU prAtakAladalli
SucirBUtanu SAMtanu jitEMdriyanu Agi
paThisabEku.
aMthavanu uttarOttaravAgi dEvategaLiMdalU
visheShavAgi pUjitanu sanmAnitanu Aguvanu.
I mAdhava stavarAjavannu yAvanu nityavAgi
tappadE, shuchiyAgi pratinityavU
paThisuttAnEyO, avanE puruShanU, avanE
janArdanananAguvanu aMdarE janArdanana
pUrNAnugrahakke pAtranAgi muktanAguvanu |
I mAdhava stavarAjavannu paThisuvavanige
grahAdigaLa vyatheyU, pAtakavU eMdigU
Aguvudilla.
I mAdhava stavarAjayeMbo mahA maMtravannu
yAvanu puNyakAladalli paThisuttAnEyO, avanu
anEka kOTi kalpa kAlagaLalli viShNu lOkadalli,
viShNu maMdiradalli AnaMdisuttAne.
mAdhava stavarAjavu pApaveMbo podege kADu
giccinaMte iruvudu, aMdare pApavannu suTTu
Basma mADuvudu. dharmAdi mOkSha
pariyaMtavAgi puruShArthakke kAraNavu
sUrya caMdra grahaNa kAladalli idannu
paThane mADidare anaMta Palavannu
BagavaMta karuNisuttAne.
vAyu purANadalli baMda I mAdavastavarAjada
kannaDa anuvAda saMpUrNaM.
SrI kRuShNArpaNamastu |

Leave a Reply
You must be logged in to post a comment.