-
Madhava Stavaraja – Kannada gist
[From Vayu purana – Maagha maasa Mahatame] ಸರ್ವ ಪಾಪಗಳ ಉಪಶಾಂತ್ಯರ್ಥವಾಗಿ ಈಮಾಧವಸ್ತವರಾಜ ಮಂತ್ರವನ್ನು ಉಪಯೋಗಿಸುವುದು.ಇದು ಸರ್ವರೋಗ ವಿನಾಶಕರವು, ಜನರಿಗೆ ಭಕ್ತಿಮುಕ್ತಿ ಪ್ರದವು ಆಗಿದೆ (೧) ಚತುರ್ವಿಧ ನಾಶ ಶೂನ್ಯನಾದ ಹೇ ಅಚ್ಯುತನೇ, ಹೇಅನಿರುದ್ಧನೇ, ಆದ್ಯಂತ ಮಧ್ಯ ರಹಿತನೇ,ಬಹುರೂಪಿಯೇ, ವೇದ ಪ್ರತಿಪಾದ್ಯನು, ಗೋವುಗಳಿಂದಕ್ರೀಡಿಸುವನು ಆದ ಗೋವಿಂದನೇ, ಮೊರೆಹೊಕ್ಕರದುಃಖವನ್ನು ಪರಿಹರಿಸುವನೇ ಶ್ರೀ ಹರಿಯೇ ನಿಮ್ಮನಾಮಸ್ಮರಣೆಯಿಂದ ಎನಗೀಗಲೇ ಮನಸುಶುದ್ಧಿಯನ್ನು ಉಂಟುಮಾಡು (೨) ಹೇ ಸರ್ವೇಂದ್ರಿಯ ನಿಯಾಮಕನಾದ ಹೃಷೀಕೇಶನೇ,ಜಗತ್ವ್ಯಾಪಿಯೇ, ಸರ್ವಸಾಕ್ಷಿಯೇ, ದಯಾನಿಧಿಯೇ,ಸದಾ ಧರ್ಮ ಕಾರ್ಯಗಳಲ್ಲಿ ಅನುಕೂಲವಾಗಿಪ್ರವರ್ತಿಸುವಂತೆ ನನ್ನ ಇಂದ್ರಿಯಂಗಳನ್ನುಮಾಡು (೩)…
