Composer : Shri Kalluru Shrikara Vittala
ಗುರು ಜಿತಾಮಿತ್ರರ ಹರುಷದಿ ನೆನೆ ಮನ |
ಗಿರುವರು ಕೋರಿದ ಭಿಷ್ಠೇಯ ಪ್ರತಿದಿನ |ಪ |
ಕರ್ಣಿಕ ಶಿವಪೂರ ಜಿತ್ತಪ್ಪನೀತ |
ನರಹರಿಗುಣಿಸಿದ ಪರಮ ಪ್ರಖ್ಯಾತ |
ಗುರು ವಿಭುದೇಂದ್ರರ ಕರಕಮಲಜಾ |
ಪರೀಕ್ಷಿತ ನೃಪಗೆ ಭಾಗವತ ಪೇಳಿದಾತ |೧ |
ಭೀಮದ ಬಲಭಾಗ ಕೃಷ್ಣದೊಳಿರುವ |
ನೇಮದಿ ಭಜಿಪರ ಪ್ರೇಮದಿ ಪೊರೆವಾ |
ರಾಮಾನಾಮೃತ ನೇಮದಿ ಸೇವಿಪಾ |
ಆ ಮನುಜನೆ ಧನ್ಯ ಇವರ ಶೇವಿಸುವಾ |೨ |
ಕಡು ದಯಾನಿಧಿಯಾದ ಶ್ರೀಕರವಿಠಲನ್ನ |
ಧೃಡದಿ ಭಜಿಪರ ಪೊರೆವನು ಗೋನದ |
ಗಿಡದಡಿ ಮನೆ ಮಾಡಿಕೊಂಡಿರುವನ |
ಎಡ ಬಿಡದೆ ಪಾದವ ನಂಬುವದೀತನ |೩ |
guru jitAmitrara haruShadi nene mana |
giruvaru kOrida BiShThEya pratidina |pa |
karNika SivapUra jittappanIta |
narahariguNisida parama praKyAta |
guru viBudEMdrara karakamalajA |
parIkShita nRupage BAgavata pELidAta |1 |
BImada balaBAga kRuShNadoLiruva |
nEmadi Bajipara prEmadi porevA |
rAmAnAmRuta nEmadi sEvipA |
A manujane dhanya ivara SEvisuvA |2 |
kaDu dayAnidhiyAda SrIkaraviThalanna |
dhRuDadi Bajipara porevanu gOnada |
giDadaDi mane mADikoMDiruvana |
eDa biDade pAdava naMbuvadItana |3 |

Leave a Reply
You must be logged in to post a comment.