ಪಂಚಪ್ರಾಣಾಗ್ನಿಹೋತ್ರ ಸುಳಾದಿ
ರಾಗ: ಮುಖಾರಿ
ಧ್ರುವತಾಳ
ಶ್ರೀಗುರುವಿನ ನೆನೆದು ನಿರ್ಮಳನಾಗಿ ಸರ್ವ –
ಯಾಗ ಭೋಕ್ತನಾದ ನಾರಾಯಣಗೆ
ಬಾಗಿ ಭಕುತಿಯಿಂದ ಚಿಂತಿಸಿ ಹೃದಯದಲ್ಲಿ
ಆಗಮ ಸ್ತುತಿಯಿಂದ ವಿಹಿತ ತಿಳಿದೂ
ಭೋಗಗಳೆಲ್ಲ ಸರ್ವಯಾಗಗಳೆಂದು ಲೇ –
ಸಾಗಿ ಸಂಚರಿಪದು ಸತತವಾಗಿ
ಈ ಗಾತ್ರದಲ್ಲಿ ಪಂಚ ಪ್ರಾಣ ಯಜ್ಞ ಸ್ಥಳಗಳು
ಭಾಗಂಗಳುಂಟು ಒಂದೊಂದು ಕಡೆ
ಮೊಗದಲ್ಲಿ ಪ್ರಾಣನೆಂಬೊ ಹೋತ್ರನು ವಾಸ –
ವಾಗಿಪ್ಪಪಾನ ದೆಶೆಯಿಂದ ಉದ್ಗಾತ್ರನಾಗಿಪ್ಪ ಯಜಮಾನ –
ನಾಗಿಪ್ಪ ವ್ಯಾನನೆಂಬುವನು ನಾಭಿಯಲ್ಲಿ
ವೇಗ ಕಂಠದಲ್ಲಿ ಉದಾನನೆಂಬೋಽಧ್ವರಿಯ
ಪೂಗರ್ಭನಾಮಕ ಸಮಾನ ಸರ್ವಾಂಗದಲ್ಲಿ
ಈ ಗಣಿತದೈವರು ಪ್ರಾಣ ರೂಪಗಳಿಂದ
ಯಾಗದಧಿಕಾರಿಗಳ ದೇಹದೊಳಗೆ
ಯೋಗಿಜನನುತ ವಿಜಯವಿಟ್ಠಲರೇಯ
ಭಾಗ ಮಾಡಿ ಕೊಡುವ ಉಂಡ ಪದಾರ್ಥವ || ೧ ||
ಮಟ್ಟತಾಳ
ವದನದಲ್ಲಿ ಆಹವನೀಯ ಎಂಬಾಗ್ನಿ
ಹೃದಯದಲ್ಲಿ ಅಗ್ನಿ ಗಾರ್ಹಸ್ಪತ್ಯನು
ಇದೇ ದಕ್ಷಿಣಾಗ್ನಿ ನಾಭಿ ಸ್ಥಾನದಲ್ಲಿ
ಮುದದಿ ಶರಭಿ ಅಗ್ನಿ ನಾಭಿ ದಕ್ಷಿಣಭಾಗ
ಅದರ ತರುವಾಯ ಅವಶರಭಿ ಎಂ –
ಬುದು ಕಾಣೊ ನಾಭಿ ಉತ್ತರ ದಿಕ್ಕಿಲಿ
ಇದೆ ಇದೆ ಪಂಚಾಗ್ನಿ ಎನಿಸುವದು ಸಿದ್ಧಾ
ಪದುಮಲೋಚನ ನಮ್ಮ ವಿಜಯವಿಟ್ಠಲ ಹರಿಯ
ಪದಗಳ ಭಜನೆಯಲೀ ಬಗೆಯನು ಮಾಡುವದು || ೨ ||
ತ್ರಿವಿಡಿತಾಳ
ಶರೀರ ಎಂಬೋದೆ ಅರಣಿ ಎನಿಪ ತಾ ಹಂ –
ಕಾರವೆಂಬೋ ಪಶು ಯೂಪಸ್ತಂಭ ಪ್ರಣವ
ಈ ರೀತಿಯೆ ಉಂಟು ಯಜ್ಞ ಪತ್ನಿಯೆ ಬುದ್ಧಿ
ತೋರುವದು ಬೆನ್ನು ವೇದಿಕವು
ಈ ರೋಮ ರೋಮಗಳು ದರ್ಭೆ ಎಂದದಿ ಕಾಣೊ
ಸಾರಿ ಸಾರಿಗೆ ಮೆಲುವ ಜಿಹ್ವೆ ಸ್ರುಕ್ ಸೃವಗಳು
ಚಾರು ಮನಸು ಯಜ್ಞ ಮಧ್ಯದಲಿ ಸಂಚಾರ
ಸಾರಿರಯ್ಯಾ ಸುಜನರು ಇನಿತು ನೋಡಿ
ಕಾರಣಕರ್ತನು ವಿಜಯವಿಟ್ಠಲರೇಯ
ಸಾರಭೋಕ್ತನು ಪ್ರಾಣ ಯಜ್ಞದೊಳಗೆ ಇಪ್ಪಾ || ೩ ||
ಅಟ್ಟತಾಳ
ಭೋಕ್ತ ಪುರುಷನ ಲಕ್ಷಣವನ್ನು ಕೇಳೋದು
ರಕ್ತ ಹರಿದ್ರಾ ವರ್ಣ ಕೂಡಿದ ಕಣ್ಣು
ಶಕ್ತ ಸರ್ವಕಾಲ ಜನನಾದಿ ವಿದೂರ
ಮುಕ್ತಿ ಪ್ರದಾತ ಪಾವಕ ಸದೃಶರೂಪ
ಭಕ್ತರು ಭಕ್ತಿಲಿ ಕೊಟ್ಟ ಪದಾರ್ಥವ
ವ್ಯಕ್ತದಲಿ ಕೈಕೊಂಡು ಮನ್ನಿಸುವನು
ಉಕ್ತ ಕ್ರಮದಿಂದ ಗುಣ ತೋರಿಸಿಕೊಂಬ
ಭಕ್ತವತ್ಸಲ ಸಿರಿ ವಿಜಯವಿಟ್ಠಲರೇಯ
ಭುಕ್ತಿಯವನಲ್ಲ ಬಲು ಲೀಲೆಗಾರನು || ೪ ||
ಆದಿತಾಳ
ಉತ್ತಮ ಜ್ಞಾನಿ ತಾನು ಹೋತ್ರಾದಿಗಳ ತಿಳಿದು
ಮತ್ತೆ ಪಂಚಾಗ್ನಿ ಉಳ್ಳ ಸ್ಥಾನವೆ ಪತಿಕರಿಸಿ
ತುತ್ತು ತುತ್ತಿಗೆ ಆತ್ಮ ಅಂತರಾತ್ಮ ರೂಪಗಳು
ತುತ್ತಿಸಿ ಭೋಜನ ಮಾಡಲು ಬಲು ಪುಣ್ಯ
ಚಿತ್ತ ನಿರ್ಮಲ ಸರ್ವದೇವತಿಗಳು ಸ –
ಮ್ಮತ ಮಾಡಿಕೊಂಬೋರು ಇವನ ಕುಲಕೋಟಿ ಉದ್ಧಾರ
ಚಿತ್ತದೊಡಿಯರಂಗ ವಿಜಯವಿಟ್ಠಲರೇಯ
ಅತ್ಯಂತ ಕೃಪೆಯಲ್ಲಿ ತೃಪ್ತಿಯ ಬಡಿಸುವ || ೫ ||
ಜತೆ
ಪ್ರಾಣಯಾಗವ ತಿಳಿದು ನಡೆದ ಜನರಿಗೆಲ್ಲ
ಪ್ರಾಣನಾಗಿಪ್ಪ ವಿಜಯವಿಟ್ಠಲ ನಿತ್ಯ ||
paMcaprANAgnihOtra suLAdi
rAga: muKAri
dhruvatALa
SrIguruvina nenedu nirmaLanAgi sarva –
yAga BOktanAda nArAyaNage
bAgi BakutiyiMda ciMtisi hRudayadalli
Agama stutiyiMda vihita tiLidU
BOgagaLella sarvayAgagaLeMdu lE –
sAgi saMcaripadu satatavAgi
I gAtradalli paMca prANa yaj~ja sthaLagaLu
BAgaMgaLuMTu oMdoMdu kaDe
mogadalli prANaneMbo hOtranu vAsa –
vAgippapAna deSeyiMda udgAtranAgippa yajamAna –
nAgippa vyAnaneMbuvanu nABiyalli
vEga kaMThadalli udAnaneMbO&dhvariya
pUgarBanAmaka samAna sarvAMgadalli
I gaNitadaivaru prANa rUpagaLiMda
yAgadadhikArigaLa dEhadoLage
yOgijananuta vijayaviTThalarEya
BAga mADi koDuva uMDa padArthava || 1 ||
maTTatALa
vadanadalli AhavanIya eMbAgni
hRudayadalli agni gArhaspatyanu
idE dakShiNAgni nABi sthAnadalli
mudadi SaraBi agni nABi dakShiNaBAga
adara taruvAya avaSaraBi eM –
budu kANo nABi uttara dikkili
ide ide paMcAgni enisuvadu siddhA
padumalOcana namma vijayaviTThala hariya
padagaLa BajaneyalI bageyanu mADuvadu || 2 ||
triviDitALa
SarIra eMbOde araNi enipa tA haM –
kAraveMbO paSu yUpastaMBa praNava
I rItiye uMTu yaj~ja patniye buddhi
tOruvadu bennu vEdikavu
I rOma rOmagaLu darBe eMdadi kANo
sAri sArige meluva jihve sruk^ sRuvagaLu
cAru manasu yaj~ja madhyadali saMcAra
sArirayyA sujanaru initu nODi
kAraNakartanu vijayaviTThalarEya
sAraBOktanu prANa yaj~jadoLage ippA || 3 ||
aTTatALa
BOkta puruShana lakShaNavannu kELOdu
rakta haridrA varNa kUDida kaNNu
Sakta sarvakAla jananAdi vidUra
mukti pradAta pAvaka sadRuSarUpa
Baktaru Baktili koTTa padArthava
vyaktadali kaikoMDu mannisuvanu
ukta kramadiMda guNa tOrisikoMba
Baktavatsala siri vijayaviTThalarEya
Buktiyavanalla balu lIlegAranu || 4 ||
AditALa
uttama j~jAni tAnu hOtrAdigaLa tiLidu
matte paMcAgni uLLa sthAnave patikarisi
tuttu tuttige Atma aMtarAtma rUpagaLu
tuttisi BOjana mADalu balu puNya
citta nirmala sarvadEvatigaLu sa –
mmata mADikoMbOru ivana kulakOTi uddhAra
cittadoDiyaraMga vijayaviTThalarEya
atyaMta kRupeyalli tRuptiya baDisuva || 5 ||
jate
prANayAgava tiLidu naDeda janarigella
prANanAgippa vijayaviTThala nitya ||

Leave a Reply
You must be logged in to post a comment.