Kapila Suladi – Vijayadasaru

Smt.Nandini Sripad

ಶ್ರೀ ಕಪಿಲದೇವರ ಸ್ತೋತ್ರ ಸುಳಾದಿ
ರಾಗ: ತೋಡಿ
ಧ್ರುವತಾಳ
ಸಿದ್ದಿದಾಯಕ ಶಿಷ್ಯಜನ ಪರಿಪಾಲ ಪರಮ –
ಶುದ್ಧಾತ್ಮ ಸುಗುಣಸಾಂದ್ರ ಸುಖವಾರಿಧಿ
ನಿದ್ರಾರಹಿತ ನಿದ್ರಾರಮಣ ನಿರ್ವಿಕಾರ
ಚಿದ್ದೇಹ ಸರ್ವಕಾಲ ಸುಂದರ ಸಾರ –
ಪದ್ಮಸಂಭವ ಬಲಿಪ್ರಕ್ಷಾಲಿತ ಪಾದ , ಮಹ –
ಹೃದ್ರೋಗನಾಶ , ವೈಕುಂಠವಾಸ
ವಿದ್ಯಾತೀತ ವಿಶ್ವನಾಟಕ ನಾರಾಯಣ
ವಿದ್ಯ ಉದ್ದಾರಕ ಉದಧಿ ಸದನಾ
ಸಿದ್ಧಾದಿ ವಿನುತ ಸಂತತ ಪಾತಾಳವಾಸಿ
ಬುದ್ಧಿವಿಶಾಲ ಮಹಿಮ ಪಾಪಹಾರಿ
ಖದ್ಯೋತವರ್ಣ ಸಕಲವ್ಯಾಪ್ತ ಆಕಾಶ ಅಮಿತ
ಬದ್ಧ ವಿಚ್ಛೇದ ನಾನಾ ರೂಪಾತ್ಮಕ
ಅದ್ವೈತ ಕಾಯಾ ಮಾಯಾ ರಮಣ ರಾಜೀವನೇತ್ರ
ಅದ್ವಯ ಅನಾದಿ ಪುರುಷ ಚಿತ್ರ
ಕರ್ದಮ ಮುನಿಸೂನು ವಿಜಯವಿಟ್ಠಲ ಕಪಿಲ
ನಿರ್ದೋಷ ಕರುಣಾಬ್ದಿ ಸರ್ವರಾಧಾರಿ || ೧ ||

ಮಟ್ಟತಾಳ

ಆದಿ ಮನ್ವಂತರದಿ ಜನಿಸಿದ ಮಹದೈವ
ಆದಿ ಪರಬೊಮ್ಮ ಬೊಮ್ಮನಯ್ಯ ಜೀಯ
ಸಾಧುಜನರ ಪ್ರೀಯ ಸಂತತ ಮುನಿತಿಲಕ
ಬೋಧಶರೀರ ಭಕುತರ ಮನೋಹರ ಹರಿ
ಮಾಧವ ಸಿರಿ ವಿಜಯವಿಟ್ಠಲ ವಿಮಲೇಶ
ಮೋದಮತಿ ಕೊಡುವ ಕಪಿಲ ಭಗವನ್ಮೂರ್ತಿ || ೨ ||

ತ್ರಿವಿಡಿತಾಳ

ಘನ ಮಹಿಮ ಗೌಣಾಂಡದೊಳಗೆ ಲೀಲೆಯಿಂದ
ಜನಿಸಿ ಮೆರೆದೆ ಬಿಂದುಸರೋವರದಲ್ಲಿ
ಮಿನಗುವ ದ್ವಯಹಸ್ತ ಅಪ್ರಾಕೃತ ಕಾಯ
ಇನನಂತೆ ಒಪ್ಪುವ ಶಿರೋರುಹವೊ
ಕನಕ ಪುತ್ಥಳಿಯಂತೆ ಕಾಂತಿ ತ್ರಿಭುವನಕ್ಕೆ
ಅನವರತ ತುಂಬಿ ಸೂಸುತಲಿದಕೋ
ಜನನಿ ದೇವಹೂತಿಗೆ ಉಪದೇಶವನು ಮಾಡಿ
ಗುಣಮೊದಲಾದ ತತ್ವವ ತಿಳಿಸಿದೆ
ತನುವಿನೊಳಗೆ ನೀನೆ ತಿಳಿದು ತಿಳಿದೆ ನಿತ್ಯ
ಜನರನ್ನ ಪಾಲಿಸುವ ಕಪಿಲಾಖ್ಯನೆ
ಅನುದಿನ ನಿನ್ನ ಧ್ಯಾನವ ಮಾಡಿ ಮಣಿಯಿಂದ
ಎಣಿಸುವ ಸುಜನಕ್ಕೆ ಜ್ಞಾನ ಕೊಡುವೆ
ಎಣೆಗಾಣೆ ನಿನ್ನಾಲೋಚನದ ಶಕ್ತಿಗೆ ಸಗರ –
ಜನಪನಂದನರನ್ನು ಭಂಗಿಸಿದೆ
ಅನುಮಾನವಿದಕಿಲ್ಲ ನಿನ್ನ ನಂಬಿದ ಮೂಢ –
ಮನುಜನಿಗೆ ಮಹಪದವಿ ಬರುವದೈಯ್ಯಾ
ಮುನಿಕುಲೋತ್ತಮ ಕಪಿಲ ವಿಜಯವಿಟ್ಠಲರೇಯ
ಎನಗೆ ಯೋಗಮಾರ್ಗವ ತೋರು ತವಕದಿಂದ || ೩ ||

ಅಟ್ಟತಾಳ

ಕಪಿಲ ಕಪಿಲಯೆಂದು ಪ್ರಾತಃ ಕಾಲದಲೆದ್ದು
ಸಪುತ ಸಾರಿಗೆಲಿ ನುಡಿದ ಮಾನವನಿಗೆ
ಅಪಜಯ ಮೊದಲಾದ ಕ್ಲೇಶಗಳೊಂದಿಲ್ಲ
ಅಪರಿಮಿತ ಸೌಖ್ಯ ಅವನ ಕುಲಕೋಟಿಗೆ
ಗುಪುತ ನಾಮವಿದು ಮನದೊಳಗಿಡುವದು
ಕಪಟ ಜೀವರು ಈತನು ಒಬ್ಬ ಋಷಿಯೆಂದು
ತಪಿಸುವರು ಕಾಣೊ ನಿತ್ಯ ನರಕದಲ್ಲಿ
ಕೃಪಣವತ್ಸಲ ನಮ್ಮ ವಿಜಯವಿಟ್ಠಲರೇಯಾ
ಕಪಿಲಾವತಾರನು ಬಲ್ಲವಗೆ ಬಲು ಸುಲಭ || ೪ ||

ಆದಿತಾಳ

ಬಲಹಸ್ತದಲ್ಲಿ ಯಜ್ಞಶಾಲೆಯಲ್ಲಿ , ಕಂ –
ಗಳ ಕಪ್ಪಿನಲ್ಲಿ ಹೃದಯಸ್ಥಾನ , ನಾಭಿಯಲ್ಲಿ
ಜಲಧಿ ಗಂಗಾ ಸಂಗಮದಲ್ಲಿ ಗಮನದಲ್ಲಿ
ತುಲಸಿಪತ್ರದಲ್ಲಿ , ತುರಗ , ತುರುವಿನಲ್ಲಿ
ಮಲಗುವ ಮನೆಯಲ್ಲಿ , ನೈವೇದ್ಯ ಸಮಯದಲ್ಲಿ
ಬಲುಕರ್ಮ ಬಂಧಗಳು ಮೋಚಕವಾಗುವಲ್ಲಿ
ಚಲುವನಾದವನಲ್ಲಿ , ವಿದ್ಯ ಪೇಳುವನಲ್ಲಿ,
ಫಲದಲ್ಲಿ , ಪ್ರತಿಕೂಲ ಇಲ್ಲದ ಸ್ಥಳದಲ್ಲಿ,
ಬೆಳೆದ ದರ್ಭೆಗಳಲ್ಲಿ , ಅಗ್ನಿಯಲ್ಲಿ , ಹರಿವ –
ಜಲದಲ್ಲಿ ಜಾಂಬುನದ ನದಿಯಲ್ಲಿ , ಶ್ಲೋಕದಲ್ಲಿ
ಬಲಿಮುಖ ಬಳಗದಲ್ಲಿ ಆಚಾರ ಶೀಲನಲ್ಲಿ
ಘಳಿಗೆ ಆರಂಭದಲ್ಲಿ ಪಶ್ಚಿಮ ಭಾಗದಲ್ಲಿ
ಪೊಳೆವ ಮಿಂಚಿನಲ್ಲಿ , ಬಂಗಾರದಲ್ಲಿ ಇನಿತು
ಕಾಲಕಾಲಕ್ಕೆ ಬಿಡದೆ ಸ್ಮರಿಸು ಕಪಿಲ ಪರಮಾತ್ಮನ್ನ
ಗೆಲವುಂಟು ನಿನಗೆಲವೋ ಸಂಸಾರದಿಂದ ವೇಗ
ಕಲಿಯುಗದೊಳಗಿದೆ ಕೊಂಡಾಡಿದವರಿಗೆ
ಖಳರ ಅಂಜಿಕೆಯಿಲ್ಲ ನಿಂದಲ್ಲಿ ಶುಭಯೋಗ
ಬಲವೈರಿನುತ ನಮ್ಮ ವಿಜಯವಿಟ್ಠಲರೇಯ
ಇಳಿಯೊಳಗೆ ಕಪಿಲಾವತಾರನಾಗಿ ನಮ್ಮ ಭಾರವಹಿಸುವಾ || ೫ ||

ಜತೆ

ತಮಪರಿಚ್ಛೇದ ಈತನ ಸ್ಮರಣೆ, ನೋಡು ಹೃ –
ತ್ಕಮಲದೊಳಗೆ ವಿಜಯವಿಟ್ಠಲನ್ನ ಚರಣಾಬ್ಜಾ ||


SrI kapiladEvara stOtra suLAdi
rAga: tODi
dhruvatALa
siddidAyaka SiShyajana paripAla parama –
SuddhAtma suguNasAMdra suKavAridhi
nidrArahita nidrAramaNa nirvikAra
ciddEha sarvakAla suMdara sAra –
padmasaMBava baliprakShAlita pAda , maha –
hRudrOganASa , vaikuMThavAsa
vidyAtIta viSvanATaka nArAyaNa
vidya uddAraka udadhi sadanA
siddhAdi vinuta saMtata pAtALavAsi
buddhiviSAla mahima pApahAri
KadyOtavarNa sakalavyApta AkASa amita
baddha vicCEda nAnA rUpAtmaka
advaita kAyA mAyA ramaNa rAjIvanEtra
advaya anAdi puruSha citra
kardama munisUnu vijayaviTThala kapila
nirdOSha karuNAbdi sarvarAdhAri || 1 ||

maTTatALa

Adi manvaMtaradi janisida mahadaiva
Adi parabomma bommanayya jIya
sAdhujanara prIya saMtata munitilaka
bOdhaSarIra Bakutara manOhara hari
mAdhava siri vijayaviTThala vimalESa
mOdamati koDuva kapila BagavanmUrti || 2 ||

triviDitALa

Gana mahima gauNAMDadoLage lIleyiMda
janisi merede biMdusarOvaradalli
minaguva dvayahasta aprAkRuta kAya
inanaMte oppuva SirOruhavo
kanaka putthaLiyaMte kAMti triBuvanakke
anavarata tuMbi sUsutalidakO
janani dEvahUtige upadESavanu mADi
guNamodalAda tatvava tiLiside
tanuvinoLage nIne tiLidu tiLide nitya
janaranna pAlisuva kapilAKyane
anudina ninna dhyAnava mADi maNiyiMda
eNisuva sujanakke j~jAna koDuve
eNegANe ninnAlOcanada Saktige sagara –
janapanaMdanarannu BaMgiside
anumAnavidakilla ninna naMbida mUDha –
manujanige mahapadavi baruvadaiyyA
munikulOttama kapila vijayaviTThalarEya
enage yOgamArgava tOru tavakadiMda || 3 ||

aTTatALa

kapila kapilayeMdu prAtaH kAladaleddu
saputa sArigeli nuDida mAnavanige
apajaya modalAda klESagaLoMdilla
aparimita sauKya avana kulakOTige
guputa nAmavidu manadoLagiDuvadu
kapaTa jIvaru Itanu obba RuShiyeMdu
tapisuvaru kANo nitya narakadalli
kRupaNavatsala namma vijayaviTThalarEyA
kapilAvatAranu ballavage balu sulaBa || 4 ||

AditALa

balahastadalli yaj~jaSAleyalli , kaM –
gaLa kappinalli hRudayasthAna , nABiyalli
jaladhi gaMgA saMgamadalli gamanadalli
tulasipatradalli , turaga , turuvinalli
malaguva maneyalli , naivEdya samayadalli
balukarma baMdhagaLu mOcakavAguvalli
caluvanAdavanalli , vidya pELuvanalli,
Paladalli , pratikUla illada sthaLadalli,
beLeda darBegaLalli , agniyalli , hariva –
jaladalli jAMbunada nadiyalli , SlOkadalli
balimuKa baLagadalli AcAra SIlanalli
GaLige AraMBadalli paScima BAgadalli
poLeva miMcinalli , baMgAradalli initu
kAlakAlakke biDade smarisu kapila paramAtmanna
gelavuMTu ninagelavO saMsAradiMda vEga
kaliyugadoLagide koMDADidavarige
KaLara aMjikeyilla niMdalli SuBayOga
balavairinuta namma vijayaviTThalarEya
iLiyoLage kapilAvatAranAgi namma BAravahisuvA || 5 ||

jate

tamaparicCEda Itana smaraNe, nODu hRu –
tkamaladoLage vijayaviTThalanna caraNAbjA ||

Leave a Reply

You might also like

error: Content is protected !!