-
Kapila Suladi – Vijayadasaru
ಶ್ರೀ ಕಪಿಲದೇವರ ಸ್ತೋತ್ರ ಸುಳಾದಿರಾಗ: ತೋಡಿಧ್ರುವತಾಳಸಿದ್ದಿದಾಯಕ ಶಿಷ್ಯಜನ ಪರಿಪಾಲ ಪರಮ –ಶುದ್ಧಾತ್ಮ ಸುಗುಣಸಾಂದ್ರ ಸುಖವಾರಿಧಿನಿದ್ರಾರಹಿತ ನಿದ್ರಾರಮಣ ನಿರ್ವಿಕಾರಚಿದ್ದೇಹ ಸರ್ವಕಾಲ ಸುಂದರ ಸಾರ –ಪದ್ಮಸಂಭವ ಬಲಿಪ್ರಕ್ಷಾಲಿತ ಪಾದ , ಮಹ –ಹೃದ್ರೋಗನಾಶ , ವೈಕುಂಠವಾಸವಿದ್ಯಾತೀತ ವಿಶ್ವನಾಟಕ ನಾರಾಯಣವಿದ್ಯ ಉದ್ದಾರಕ ಉದಧಿ ಸದನಾಸಿದ್ಧಾದಿ ವಿನುತ ಸಂತತ ಪಾತಾಳವಾಸಿಬುದ್ಧಿವಿಶಾಲ ಮಹಿಮ ಪಾಪಹಾರಿಖದ್ಯೋತವರ್ಣ ಸಕಲವ್ಯಾಪ್ತ ಆಕಾಶ ಅಮಿತಬದ್ಧ ವಿಚ್ಛೇದ ನಾನಾ ರೂಪಾತ್ಮಕಅದ್ವೈತ ಕಾಯಾ ಮಾಯಾ ರಮಣ ರಾಜೀವನೇತ್ರಅದ್ವಯ ಅನಾದಿ ಪುರುಷ ಚಿತ್ರಕರ್ದಮ ಮುನಿಸೂನು ವಿಜಯವಿಟ್ಠಲ ಕಪಿಲನಿರ್ದೋಷ ಕರುಣಾಬ್ದಿ ಸರ್ವರಾಧಾರಿ || ೧ ||…
