Vandipenamma muddu sharade

Composer: Shri Jagannatha dasaru

ವಂದಿಪೆನಮ್ಮಾ ಮುದ್ದು ಶಾರದೆ ಶರ-
ಚ್ಚಂದಿರವದನೆ ಶಾರದೆ ||ಪ||

ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ
ಕುಂದು ನೋಡದೆ ಶ್ರುತಿವಂದ್ಯೆ ಜ್ಞಾನವ ನೀಡೆ ||ಅ.ಪ||

ಸಿತಾಬ್ಜಾಸನೆ ಸುಖದಾಯಕಿ, ಸುರ
ನಾಥಾರಾಧಿತೆ ವಿಶ್ವನಾಯಕೀ
ವೀತದುರಿತೆ ಶಿವಮಾತೆ ಸದ್ಗುಣಮಣಿ
ವ್ರಾತೆ ವೇದೋಪನಿಷದ್ಗೀತೆ ವಾಗ್ದೇವಿ ಮಾತೆ ||೧||

ಕೋಕಿಲವಾಣಿ ಕವಿಸೇವಿತೆ ಎನ್ನ
ವಾಕು ಲಾಲಿಸೆ ಮುನಿವಂದಿತೆ
ತೋಕನೆಂದು ಸುವಿವೇಕ ಬುದ್ಧಿಯನಿತ್ತು
ಸಾಕು ಸಜ್ಜನರನ್ನು ವಾಕು ಮನ್ನಿಸೆ ತಾಯೆ ||೨||

ಪಾತಕಿಗಳೊಡನಾಡಿ ನಾ ನಿನ್ನ
ಪೂತಾಬ್ಜ ಪದ ಭಜಿಸದ್- ಹೋದೆ ನಾ
ಪಾತಕವೆಣಿಸದೆ ಸೀತಾರಮಣ ಜಗ-
ನಾಥವಿಟ್ಠಲನಂಘ್ರಿ ಗೀತಾಮೃತವನುಣಿಸು ||೩||


vaMdipenammA muddu SArade Sara-
ccaMdiravadane SArade ||pa||

iMdIvarAkShi SatAnaMdana priye dEvi
kuMdu nODade SrutivaMdye j~jAnava nIDe ||a.pa||

sitAbjAsane suKadAyaki, sura
nAthArAdhite viSvanAyakI
vItadurite SivamAte sadguNamaNi
vrAte vEdOpaniShadgIte vAgdEvi mAte ||1||

kOkilavANi kavisEvite enna
vAku lAlise munivaMdite
tOkaneMdu suvivEka buddhiyanittu
sAku sajjanarannu vAku mannise tAye ||2||

pAtakigaLoDanADi nA ninna
pUtAbja pada Bajisad- hOde nA
pAtakaveNisade sItAramaNa jaga-
nAthaviTThalanaMGri gItAmRutavanuNisu ||3||

Leave a Reply

You might also like

error: Content is protected !!