Neela lohita

Composer: Shri Jagannatha dasaru

ನೀಲ ಲೋಹಿತ ಡಮರುಗ ತ್ರಿಶೂಲ ಶೋಭಿತ ||ಪ||

ಫಾಲನಯನ ಶುಂಡಾಲ ಚರ್ಮ ಸುದು
ಕೂಲ ಮೃಡ ಸತತ ಪಾಲಿಸು ಕರುಣದಿ ||ಅ.ಪ||

ನಂದಿವಾಹನ ನಮಿಪೆ ಖಳ
ವೃಂದ ಮೋಹನ |
ಅಂಧಕರಿಪು ಶಿಖಿ ಸ್ಯಂದನ ಜನಕ ಸ
ನಂದನಾದಿ ಮುನಿ ವಂದಿತ ಪದಯುಗ ||೧||

ಸೋಮಶೇಖರ ಗಿರಿಜಾಸು
ತ್ರಾಮ ಲೇಖರಾ |
ಸ್ತೋಮವಿನುತ ಭವ ಭೀಮ ಭಯಾಂತಕ
ಕಾಮರಹಿತ ಗುಣಧಾಮ ದಯಾನಿಧೆ ||೨||

ನಾಗಭೂಷಣ ವಿಮಲ ಸದ್
ರಾಗ ಭಾಷಣ |
ಭೋಗಿ ಶಯನ ಜಗನ್ನಾಥ ವಿಠಲನ
ಯೋಗದಿ ಒಲಿಸುವ ಭಾಗವತರೊಳಿಡು ||೩||


nIla lOhita Damaruga triSUla SOBita ||pa||

PAlanayana SuMDAla carma sudu
kUla mRuDa satata pAlisu karuNadi ||a.pa||

naMdivAhana namipe KaLa
vRuMda mOhana |
aMdhakaripu SiKi syaMdana janaka sa
naMdanAdi muni vaMdita padayuga ||1||

sOmaSEKara girijAsu
trAma lEKarA |
stOmavinuta Bava BIma BayAMtaka
kAmarahita guNadhAma dayAnidhe ||2||

nAgaBUShaNa vimala sad
rAga BAShaNa |
BOgi Sayana jagannAtha viThalana
yOgadi olisuva BAgavataroLiDu ||3||

Leave a Reply

You might also like

error: Content is protected !!