-
Neela lohita
Composer: Shri Jagannatha dasaru ನೀಲ ಲೋಹಿತ ಡಮರುಗ ತ್ರಿಶೂಲ ಶೋಭಿತ ||ಪ|| ಫಾಲನಯನ ಶುಂಡಾಲ ಚರ್ಮ ಸುದುಕೂಲ ಮೃಡ ಸತತ ಪಾಲಿಸು ಕರುಣದಿ ||ಅ.ಪ|| ನಂದಿವಾಹನ ನಮಿಪೆ ಖಳವೃಂದ ಮೋಹನ |ಅಂಧಕರಿಪು ಶಿಖಿ ಸ್ಯಂದನ ಜನಕ ಸನಂದನಾದಿ ಮುನಿ ವಂದಿತ ಪದಯುಗ ||೧|| ಸೋಮಶೇಖರ ಗಿರಿಜಾಸುತ್ರಾಮ ಲೇಖರಾ |ಸ್ತೋಮವಿನುತ ಭವ ಭೀಮ ಭಯಾಂತಕಕಾಮರಹಿತ ಗುಣಧಾಮ ದಯಾನಿಧೆ ||೨|| ನಾಗಭೂಷಣ ವಿಮಲ ಸದ್ರಾಗ ಭಾಷಣ |ಭೋಗಿ ಶಯನ ಜಗನ್ನಾಥ ವಿಠಲನಯೋಗದಿ ಒಲಿಸುವ ಭಾಗವತರೊಳಿಡು ||೩|| nIla lOhita…
