Uddhara madida

Composer : Shri Pranesha dasaru

By Smt.Shubhalakshmi Rao

ಉದ್ಧಾರಮಾಡಿದ ಶ್ರೀರಾಮ, ಅಹಲ್ಯಾ !
ಉದ್ಧಾರ ಮಾಡಿದ ಶ್ರೀರಾಮ ||
ಪದ್ಮ ಜಾಂಡದೊಳು | ಪ್ರಸಿದ್ಧವಾದ ಮಾತಿದು || ಪ ||

ಮುನಿಶಾಪದಿಂದಲಿ ವನದಿ ಕಲ್ಲಾಗಿ
ಬಲು ದಿನ ಚಿಂತಿಸುತಲಿಹ |
ವನಿತೆಯ ದಯೆಯಿಂದ || ೧ ||

ಮಂದಮತಿ ಮಾಟಕೀ ಇಂದುಮುಖಿಗೆ ಇಂಥ
ಕುಂದು ಬಂತಲ್ಲಾ ಎಂದು
ಇಂದ್ರ ಪ್ರಾರ್ಥಿಸುತಿರೆ || ೨ ||

ಮೌನಿ ಮಾತಿಗೆ ಪಾದರೇಣು
ಸ್ಪರ್ಶವಿತ್ತು ! ಮಾನಿನಿಯ ಮಾಡಿದಾ
ಪ್ರಾಣೇಶವಿಠ್ಠಲನು || ೩ ||


uddhAramADida SrIrAma, ahalyA !
uddhAra mADida SrIrAma ||
padma jAMDadoLu | prasiddhavAda mAtidu || pa ||

muniSApadiMdali vanadi kallAgi
balu dina ciMtisutaliha |
vaniteya dayeyiMda || 1 ||

maMdamati mATakI iMdumuKige iMtha
kuMdu baMtallA eMdu
iMdra prArthisutire || 2 ||

mauni mAtige pAdarENu
sparSavittu ! mAniniya mADidA
prANESaviThThalanu || 3 ||

Leave a Reply

Your email address will not be published. Required fields are marked *

You might also like

error: Content is protected !!