Shri Ramadevara suladi – Sutta virajanadi

Composer : Shri Vijaya dasaru

ಶ್ರೀವಿಜಯದಾಸಾರ್ಯ ವಿರಚಿತ
ಶ್ರೀರಾಮದೇವರ ಸುಳಾದಿ
(ತಾತ್ಪರ್ಯ ನಿರ್ಣಯದ ಆಕರಕ್ಕೆ ಅನುವಾದ
ರಾಮಾಯಣದ ಸಂಗ್ರಹ ರೂಪವನ್ನು
ಈ ಸುಳಾದಿಯಲ್ಲಿ ಕಾಣುತ್ತೇವೆ.)
ರಾಗ: ಮಧ್ಯಮಾವತಿ
ಧ್ರುವತಾಳ

ಸುತ್ತ ವಿರಜಾನದಿ ರತ್ನಮಯದ ಏಳು
ಸುತ್ತಿನ ಕೋಟಿ ಪಚ್ಚ ಮುತ್ತು ವೈಢೂರ್ಯದಿಂದ
ಕೆತ್ತಿದ ಪಲಿಗೆ ಕಾಳಗತ್ತಲೆ ಹರಿಸುವ
ಎತ್ತಿದ ಸೂರ್ಯಪಾನ ಪತಾಕಿಗಳ ಗಲಭೆ
ಎತ್ತ ನೋಡಿದರತ್ತ ನೃತ್ಯ ಗೀತ ವಾದ್ಯ
ಇತ್ತಂಡದಲಿ ನಿಂದಾ ಬೆತ್ತದವರ ಸೊಲ್ಲು
ಹತ್ತು ದಿಕ್ಕುಗಳಂಜಿಸುತಲಿಪ್ಪ ತೆರದಿ
ಚತುರ ದಿಕ್ಕಿನಲ್ಲಿ ಉತ್ತರಾದಿ ನಾಲ್ಕು
ತತ್ಥಳಿಸುವ ದ್ವಾರಾ ಉತ್ತಮ ಸರೋವರ
ಮತ್ತೆ ಆನಂದವನ ಅತ್ತಲತ್ತಲಾಡುವ
ಸತ್ವ ಶರೀರಗಳು ಉತ್ತಮಾಂಗಗಳೆ ತೂ –
ಗುತ್ತ ಸ್ವ ಇಚ್ಛೆಯಲ್ಲಿಯಿಂದಾ
ನಿತ್ಯ ಕ್ರೀಡೆಯಲ್ಲಿ ಭರಿತವಾಗಿಪ್ಪರು
ಸತ್ಯವಲ್ಲದೆ ಪುಶಿ ಉತ್ತರವೆಂಬೋದಿಲ್ಲ
ಹೊತ್ತು ಹೊತ್ತಿಗೆ ಎಲ್ಲ ಚಿತ್ತ ಚಂಚಲರಿಲ್ಲ
ತೆತ್ತಿಸಕೋಟಿ ದೇವತೆಗಳು ತಲೆಬಾಗಿ
ತೆತ್ತಿಗರಾಗಿ ನಿಂದು ತುತಿಪರನುಗಾಲಾ
ಸತ್ಯಲೋಕದ ಮ್ಯಾಲತ್ತುಳ್ಳ ವೈಕುಂಠ
ಹತ್ತಿಲಿ ವೋಲ್ಗೈಸುತ್ತ ಇಂದಿರೆ ಇರೆ
ಎತ್ತಣದದು ತಾ ಧೊರೆತನವೋ ನಿನ್ನದು
ಶ್ರುತ್ಯರ್ಥಗಳಿಗೆ ದೂರತ್ತನೆನಿಸುವನೇ
ಚಿತ್ತಜಪಿತ ರಾಮ ವಿಜಯವಿಟ್ಠಲ ನೀ
ಮರ್ತ್ಯಲೋಕಕ್ಕೆ ನರಕೃತ್ಯ ತೋರಿದದೇನೋ || ೧ ||

ಮಟ್ಟತಾಳ

ವನಜಭವಾದ್ಯರು ತನುಜರಾಗಿರೆ ನಿನಗೆ
ಜನಪ ದಶರಥಗೆ ತನುಭವನೆನಿಸುವರೇ
ಎಣೆಗಾಣೆನೊ ನಿನ್ನ ಗುಣ ಕರ್ಮಾವಳಿಗೆ
ಮನೋವಾಕ್ಕಾಯಾ ನೆನೆ ನೆನೆದು ನಿತ್ಯ
ದಣಿ ದಣಿ ಪಾಡಿದರು ದಣಿಯಬಲ್ಲದೆ ಜಿಹ್ವೆ –
ಯನು ಸಾಲದು ಎನಗೆ ಅನಿಮಿಷ ಮಿಕ್ಕಾದ
ಜನರ ಸಮಾಧಿಗೆ ಗಣನೆ ಮಾಡುತಲಿಪ್ಪಾ
ಚಿನುಮಯ ಮೂರುತಿ
ಮನುಜೋತ್ತಮ ರಾಮಾ ವಿಜಯವಿಟ್ಠಲ ನಿನಗೆ
ಮಣಿದು ನಮೋ ಎಂದವನೇ ಬಲು ಧನ್ಯ ಧನ್ಯಾ || ೨ ||

ರೂಪಕತಾಳ

ಅನಂತ ಯಾಗದ ಕರ್ತಾ ಭೋಕ್ತನೆ ನಿನಗೆ
ಮೌನಿಯ ಮಖ ವಂದು ಕಾಯ್ದದ್ದು ಸೋಜಿಗವೆ
ಏನೆಂಬೆ ಜಡದಿಂದ ಚೇತನ ಈಯಪನೇನೋ
ಮಾನಿನಿ ಜಡಚೇತನವನ್ನು ಕಳದದ್ದು ಸೋಜಿಗವೆ
ದಾನವ ಬಲವಾಗೆ ನಿತ್ರಾಣ ಗೈಸಿದವನೆ
ದೀನ ಉಮೇಶನ ಧನುವ ಮುರಿದದ್ದೇನೊ
ರಾಣಿವಾಸವು ನಿತ್ಯ ಶ್ರೀನಾರಿ ಅವಿಯೋಗಿ
ಜಾನಕಿ ಮದುವೆಯಾದನು ಎನಿಸುವದೇನೋ
ನೀನೆ ನಿನ್ನೊಳು ಕಾದಿ ಮಾನವಾಧಮರಿಗೆ
ಹೀನ ಗತಿಗೆ ಮಾರ್ಗವನು ತೋರಿದ ದೈವಾ
ಭಾನು ಕುಲೋತ್ತಮಾ ವಿಜಯವಿಟ್ಠಲ ರಾಮಾ
ನೀನಾಡಿದ ಲೀಲೆ ಆರಿಗೆ ವಶವಲ್ಲ || ೩ ||

ಝಂಪಿತಾಳ

ಬಲು ಜೀವಿಗಳ ಭವದ ವಲಯದೊಳಗಿಟ್ಟು
ತೊಳಲುವಂತೆ ಮಾಡಿ ಅಳಲಿಸುವ ಮಹದೈವ
ಇಳಿಯೊಳಗೆ ವನವಾಸದಲಿ ತೊಳಲಿದನೆಂದು
ತಿಳಿಸಿ ನರರಿಗೆ ಮಾಯ ಕಲ್ಪಿಸಿ ಬಿಡುವದೇನೋ
ಸುಲಭದಿಂದಲಿ ಸಕಲರಿಗೆ ಉಣಿಸುವನೆ
ಫಲಗಳಿಂದಲಿ ದಿನವ ಕಳೆದನೆನಿಸುವದೇನೋ
ನಳಿನಜಾದ್ಯರು ನಿನ್ನೆಂಜಲ ಬಯಸುತಿಪ್ಪರು
ಒಲಿದು ಶಬರಿ ಸವಿದ ಫಲ ಮೆಲುವದೇನೈಯ್ಯ
ಜಲಜ ಭವಾಂಡಕ್ಕೆ ಸಲೆ ನೀನು ಆಶ್ರಯವೋ
ಮಲೆ ವಿಂಧ್ಯದೊಳಗೊಂದು ಸ್ಥಳವ ಮಾಡಿದದೇನೋ
ನೆಲೆ ಯಾವುದೊ ನಿನ್ನ ಬಲವ ಪೊಗಳುವದಕ್ಕೆ
ಸುಳಿದ ಮೃಗವಟ್ಟಿ ಬೆಂಬಲ ಪೋದನೆನಿಸಿದೆ
ಚೆಲುವ ಸೀತೆಯ ನಿನ್ನ ಬಳಿಲಿಟ್ಟುಕೊಂಡು
ಹಲುಬಿದೆ ಹೆಂಡತಿಯ ಕಳಕೊಂಡವನಂತೆ
ಭಳಿರೆ ನಿನ್ನವತಾರ ಹಲಬರಿಗೆ ಸಾಧ್ಯವೇ
ಹಲವು ಬಗೆಯಲಿಂದ ಪೊಗಳಲಿ ಕೂಡದು
ಮಲತವರ ಮಸ್ತಕಾಂಕುಶ ರಾಮ ವಿಜಯವಿಟ್ಠಲ ನಿನ್ನ ಚರಣದಾ
ಸುಳವು ಕಂಡವನಾರೋ ಸುರರು ಬೆರಗಾಗುವರು || ೪ ||

ತ್ರಿವಿಡಿತಾಳ

ಗುಣನಿಧಿಯೆ ನಿನ್ನ ನೆನವರೆಲ್ಲರಿಗೆ ಬಲ
ನಿನಗೆ ಸಹಾಯವೇನೋ ಇನನಂದನಾ
ಕ್ಷಣ ಮೀರದಲೆ ಬೊಮ್ಮನ ಪದವಿಗೆ ಋಜುಗಣವೇ
ಹನುಮಗೆ ನೂತನ ಪಟ್ಟ ಇನ್ನುಂಟೆ
ಅನುದಿನ ಸರ್ವರಂತರವನು ಬಲ್ಲ ವ್ಯಾಪ್ತನೆ
ವನಚರಾದಿಯ ಸುದ್ದಿಯನು ತರಲಟ್ಟಿದೆ
ಮುನಿದಾಕ್ಷಣ ಏಳು ವನಧಿ ನುಂಗುವನೆ
ಮಣಿಯ ಸಾಗರನೆಂದು ಧನುವ ಎಸದದೇನೊ
ತೃಣವಂದಿಡದೆ ಕಟ್ಟೆಯನು ಕಟ್ಟಿದ ಧೀರಾ
ಘನ ಪರ್ವತಗಳಿಂದ ವನಧಿ ಬಿಗಿಪದೇನೋ
ಮಿನಗುವ ರತ್ನ ಭೂಷಣಕೆ ಕೊರತೆಯಿಲ್ಲ
ತನುವಿಗೆ ನಾರು ವಸನ ಉಟ್ಟ ಜಡಿಯೇನೋ
ಶಣಿಸಿದವರ ಗಂಡ ವಿಜಯವಿಟ್ಠಲ ನಿನಗೆ
ಅನುವಾರಾವೇನೊ ಜನನ ಮರಣ ರಹಿತಾ || ೫ ||

ಅಟ್ಟತಾಳ

ಇಂದ್ರಂಗೆ ಪುರುಷಾರ್ಥ ತಂದು ಕೊಡುವನಿಗೆ
ಇಂದ್ರನು ನಿನಗೊಂದು ಶಂದನಟ್ಟಿದನೇನೋ
ನೊಂದವರು ನೋಟದಿಂದಲೇಳುವರು
ಗಂಧವಹನ ಕರದಿಂದದ್ರಿ ತರಿಸಿದೆ
ಕುಂದದೆ ಲೋಕವ ಕೊಂದು ಹಾಕುವ ದೇವಾ
ಅಂದು ದುರುಳ ದಶಕಂಧರನ ನಳಿದದಾ –
ನಂದಾ ಪಟ್ಟವಗಟ್ಟಿ ವೃಂದಾರಕರ ಪೊರೆದೆ
ಬಂದಾ ವಿಭೀಷಣಗೊಂದು ಪಟ್ಟ ಕಟ್ಟಿದ ಬಗೇ –
ನೆಂದು ಪೇಳಲಿ ನಿನ್ನಾನಂದಾವಾದಾಟಕ್ಕೆ
ವಂದಿಸಿ ನಮೊ ನಮೊ ಎಂದು ಕೊಂಡಾಡುವೆ
ಇಂದಿರಾಪತಿ ರಾಮ ವಿಜಯವಿಟ್ಠಲ ಶ್ಯಾಮ –
ಸುಂದರ ಸುಧಾಕಾಯಾ ಕಂದರ್ಪನಯ್ಯಾ || ೬ ||

ಆದಿತಾಳ

ಏಸೇಸು ಬೊಮ್ಮಾಂಡ ನಾಶನ ಗೈಸುವಂಗೆ
ದೋಷಕಾರಿಗಳನ್ನು ಘಾಸಿ ಮಾಡಿದ ಹತ್ಯ –
ವು ಸೇರಿದರಿಂದ ಈಶನ ಭಜನಿ ಲೇಸಾಗಿ ಮಾಡಿ ನಿ –
ರ್ದೋಷನಾದನೆಂದು ಹೇಸಿ ನರಕ ನಿತ್ಯ –
ವಾಸಿಗಳು ನುಡಿದು ಕ್ಲೇಶವ ಬಡುವರು
ಏಸೇಸು ಜನ್ಮದಲ್ಲಿ ದೋಷವೆತ್ತಣದೊ ಅ –
ಶೇಷ ದೋಷದೂರನೆ ದೇಶಾದೊಳಗೆ ನಿನ್ನ
ದಾಸನಾದವನಿಗೆ ಲೇಶ ದೋಷಗಳಿಲ್ಲಾ
ದೋಷ ನಿನಗೆ ಉಂಟೆ
ದಾಶರಥೇ ನಮ್ಮ ವಿಜಯವಿಟ್ಠಲ ಸ್ವಪ್ರ –
ಕಾಶನೆ ನಿನಗೆಣಿಸಲು ಕಾಣೆ || ೭ ||

ಜತೆ

ನಿನ್ನ ಮಾಯಾ ಮೋಹ ಖಳರಿಗೆ ತಮಸ್ಸು ಆ –
ಪನ್ನರಿಗೆ ಮೋಕ್ಷ ವಿಜಯವಿಟ್ಠಲ ಧೊರಿಯೇ ||


SrIvijayadAsArya viracita
SrIrAmadEvara suLAdi
(tAtparya nirNayada Akarakke anuvAda
rAmAyaNada saMgraha rUpavannu
I suLAdiyalli kANuttEve.)
rAga: madhyamAvati
dhruvatALa

sutta virajAnadi ratnamayada ELu
suttina kOTi pacca muttu vaiDhUryadiMda
kettida palige kALagattale harisuva
ettida sUryapAna patAkigaLa galaBe
etta nODidaratta nRutya gIta vAdya
ittaMDadali niMdA bettadavara sollu
hattu dikkugaLaMjisutalippa teradi
catura dikkinalli uttarAdi nAlku
tatthaLisuva dvArA uttama sarOvara
matte AnaMdavana attalattalADuva
satva SarIragaLu uttamAMgagaLe tU –
gutta sva icCeyalliyiMdA
nitya krIDeyalli BaritavAgipparu
satyavallade puSi uttaraveMbOdilla
hottu hottige ella citta caMcalarilla
tettisakOTi dEvategaLu talebAgi
tettigarAgi niMdu tutiparanugAlA
satyalOkada myAlattuLLa vaikuMTha
hattili vOlgaisutta iMdire ire
ettaNadadu tA dhoretanavO ninnadu
SrutyarthagaLige dUrattanenisuvanE
cittajapita rAma vijayaviTThala nI
martyalOkakke narakRutya tOridadEnO || 1 ||

maTTatALa

vanajaBavAdyaru tanujarAgire ninage
janapa daSarathage tanuBavanenisuvarE
eNegANeno ninna guNa karmAvaLige
manOvAkkAyA nene nenedu nitya
daNi daNi pADidaru daNiyaballade jihve –
yanu sAladu enage animiSha mikkAda
janara samAdhige gaNane mADutalippA
cinumaya mUruti
manujOttama rAmA vijayaviTThala ninage
maNidu namO eMdavanE balu dhanya dhanyA || 2 ||

rUpakatALa

anaMta yAgada kartA BOktane ninage
mauniya maKa vaMdu kAydaddu sOjigave
EneMbe jaDadiMda cEtana IyapanEnO
mAnini jaDacEtanavannu kaLadaddu sOjigave
dAnava balavAge nitrANa gaisidavane
dIna umESana dhanuva muridaddEno
rANivAsavu nitya SrInAri aviyOgi
jAnaki maduveyAdanu enisuvadEnO
nIne ninnoLu kAdi mAnavAdhamarige
hIna gatige mArgavanu tOrida daivA
BAnu kulOttamA vijayaviTThala rAmA
nInADida lIle Arige vaSavalla || 3 ||

JaMpitALa

balu jIvigaLa Bavada valayadoLagiTTu
toLaluvaMte mADi aLalisuva mahadaiva
iLiyoLage vanavAsadali toLalidaneMdu
tiLisi nararige mAya kalpisi biDuvadEnO
sulaBadiMdali sakalarige uNisuvane
PalagaLiMdali dinava kaLedanenisuvadEnO
naLinajAdyaru ninneMjala bayasutipparu
olidu Sabari savida Pala meluvadEnaiyya
jalaja BavAMDakke sale nInu ASrayavO
male viMdhyadoLagoMdu sthaLava mADidadEnO
nele yAvudo ninna balava pogaLuvadakke
suLida mRugavaTTi beMbala pOdaneniside
celuva sIteya ninna baLiliTTukoMDu
halubide heMDatiya kaLakoMDavanaMte
BaLire ninnavatAra halabarige sAdhyavE
halavu bageyaliMda pogaLali kUDadu
malatavara mastakAMkuSa rAma vijayaviTThala ninna caraNadA
suLavu kaMDavanArO suraru beragAguvaru || 4 ||

triviDitALa

guNanidhiye ninna nenavarellarige bala
ninage sahAyavEnO inanaMdanA
kShaNa mIradale bommana padavige RujugaNavE
hanumage nUtana paTTa innuMTe
anudina sarvaraMtaravanu balla vyAptane
vanacarAdiya suddiyanu taralaTTide
munidAkShaNa ELu vanadhi nuMguvane
maNiya sAgaraneMdu dhanuva esadadEno
tRuNavaMdiDade kaTTeyanu kaTTida dhIrA
Gana parvatagaLiMda vanadhi bigipadEnO
minaguva ratna BUShaNake korateyilla
tanuvige nAru vasana uTTa jaDiyEnO
SaNisidavara gaMDa vijayaviTThala ninage
anuvArAvEno janana maraNa rahitA || 5 ||

aTTatALa

iMdraMge puruShArtha taMdu koDuvanige
iMdranu ninagoMdu SaMdanaTTidanEnO
noMdavaru nOTadiMdalELuvaru
gaMdhavahana karadiMdadri tariside
kuMdade lOkava koMdu hAkuva dEvA
aMdu duruLa daSakaMdharana naLidadA –
naMdA paTTavagaTTi vRuMdArakara porede
baMdA viBIShaNagoMdu paTTa kaTTida bagE –
neMdu pELali ninnAnaMdAvAdATakke
vaMdisi namo namo eMdu koMDADuve
iMdirApati rAma vijayaviTThala SyAma –
suMdara sudhAkAyA kaMdarpanayyA || 6 ||

AditALa

EsEsu bommAMDa nASana gaisuvaMge
dOShakArigaLannu GAsi mADida hatya –
vu sEridariMda ISana Bajani lEsAgi mADi ni –
rdOShanAdaneMdu hEsi naraka nitya –
vAsigaLu nuDidu klESava baDuvaru
EsEsu janmadalli dOShavettaNado a –
SESha dOShadUrane dESAdoLage ninna
dAsanAdavanige lESa dOShagaLillA
dOSha ninage uMTe
dASarathE namma vijayaviTThala svapra –
kASane ninageNisalu kANe || 7 ||

jate

ninna mAyA mOha KaLarige tamassu A –
pannarige mOkSha vijayaviTThala dhoriyE ||

Leave a Reply

Your email address will not be published. Required fields are marked *

You might also like

error: Content is protected !!