ರಾಗ: ಕಾಪಿ
ಧ್ರುವತಾಳ
ಇಂದು ಎನಗೆ ನಿನ್ನ ಸಂದರುಶನ ಸುಖ –
ವೊಂದು ತೋರೆನಗರವಿಂದನಯನ
ಮಂದಾಕಿನಿಯ ಪಡೆದ ಮುದ್ದು ಚರಣ
ಸುಂದರಾಂಗ ತೋರೆನಗೆ ಸುರೇಂದ್ರನಾಥ
ಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆ
ಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊ
ಇಂದಿರೆ ಕರಕಮಲದಿಂದ ಪೂಜಿತನಾದ
ಚಂದ್ರವದನ ನಿನ್ನ ಚೆಲುವ ಪಾದ
ಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ –
ವಂದ್ಯ ನಿನಗೆ ಕೋಟಿ ನಮೋ ನಮೋ
ಎಂದು ಬೇಡುವೆ ದಯಾಸಿಂಧು ಎನಿಸಿದಾತ
ಕಂದನಂದದಿ ನೋಡಿ ಸಲಹೋ ಎನ್ನ
ಮಂದಬುದ್ಧಿಯ ಮಹಾಮದಡ ಪಾಮರ ಭವ –
ಬಂಧನದೊಳು ಸಿಲುಕಿ ನೊಂದೆನಯ್ಯ
ಸಂದೇಹ ಮಾಡದೆ ಸಲಹದಿದ್ದರೆ ನಿನ್ನ
ಹೊಂದಿ ಬಾಳುವುದೆಂತೊ ಮುಂದರಿಯೆ
ಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣ
ತಂದು ನೀಡೆನಿಗೆ ಇಂದೀವರಾಕ್ಷ || ೧ ||
ಮಠ್ಯತಾಳ
ಯುಗಳ ಪಾದಕೆ ಕೈಯ ಮುಗಿದು ಬೇಡುವೆನಯ್ಯ
ಜಗದುದರನೆ ನಿನ್ನ ಜಾಣತನವ ಬಿಟ್ಟು
ಅಗಣಿತಗುಣಮಹಿಮ ಅಂತರಾತ್ಮಕ ದೇವ
ಬಗೆಬಗೆಯಲಿ ಸಲಹೋ ಭಕ್ತವತ್ಸಲ ನಿನ್ನ
ಮಗುವೆಂದೆನ್ನ ಕಾಯೊ ಮಂದರೋದ್ಧರ ದೇವ
ನಿಗಮಗೋಚರ ಸ್ವಾಮಿ ನಿಂತು ನೋಡುತ ಎನ್ನ
ಚಿಗುರುದೋಷದ ಕುಡಿಯ ಚಿವುಟಿ ಹಾಕುತ ನಿನ್ನ
ಸುಗುಣಗಳನೆ ಬಿಟ್ಟೆನ್ನವಗುಣವೆಣಿಸಿದರೆ
ಇಗೋ ನಿನಗಪಕೀರ್ತಿ ಈಗ ಒಪ್ಪಿಸುವೆನು
ಬಿಗಿದ ಭವಪಾಶ ಬಿಚ್ಚಿ ಭೀಮೇಶಕೃಷ್ಣ
ತೆಗೆಯದೆ ನಿನ್ಹೊರತೀ ಜಗದೊಳಗುಂಟೇನಯ್ಯ|| ೨ ||
ತ್ರಿವಿಡಿತಾಳ (ವಚನ)
ಸಕಲ ಸ್ನಾನವು ನೇಮ ಹೋಮ ಜಪಂಗಳು
ಸಕಲ ಪುಣ್ಯಕ್ಷೇತ್ರ ಮೂರ್ತಿನಾಮಂಗಳು
ಸಕಲ ಪುರಾಣ ವೇದಾದಿಗ್ರಂಥಗಳು
ಸಕಲ ಕಾರ್ಯವು ಸರ್ವೇಷ್ಟ ಫಲಂಗಳು
ಸಕಲ ಸೌಭಾಗ್ಯ ಸಾಯುಜ್ಯ ಪದವಿಗಳು
ಲಕುಮೀಶ ಇವು ನಿನ್ನ ನಖಶಿಖ ಪರಿಯಂತ್ರ
ಸಕಲ ಪೊಂದಿದ್ದವು ಸಖನ ಸಾರಥಿ ಸಮದೃಷ್ಟಿಲಿ ನೋಡಲು
ಸಕಲ ಸಿದ್ಧಿಯು ಸರಿಯಾಗಿ ಕೈಗೂಡೋದು
ಶಕಟಸುರಾಂತಕ ಕಕುಲಾತಿ ಮಾಡದೆ
ಬಕನ್ವೈರಿ ಯೆನ್ನ ಭಾರವ ನೀ ವಹಿಸಲಿ ಬೇಕೊ
ಇಕೋ ನಿನ್ನ ಚರಣಕ್ಕೆ ಈ ದೇಹ ಅರ್ಪಿಸುವೆ
ಗೋಕುಲಾವಾಸ ನಿನ್ನ ಪಾದಕೆ ನಮಸ್ಕರಿಸುವೆ
ಮುಕುತಿದಾಯಕ ಮುದ್ದು ಭೀಮೇಶಕೃಷ್ಣನೆ
ಭಕುತಿಜ್ಞಾನದಲಿಡೊ ಭಯಹಾರಿ ಎನ್ನ || ೩ ||
ಅಟ್ಟತಾಳ
ಗೋಪಸುತನೆ ನಿನ್ನ ಗುರುವಿನ್ವಲ್ಲಭೆ ಮಹ –
ದಪರಾಧವೆಣಿಸದೆ ನೀ ಕರುಣದಲೆ ಸಾಂ –
ದೀಪಗೆ ಸುತರನಿಟ್ಟ ಪಯಾಂಬುಧಿವಾಸ
ಕೋಪದಿ ಬಯ್ದಾ ಶಿಶುಪಾಲಗೊಲಿದೆಯೊ
ಶ್ರೀಪತಿ ಶರಣೆಂದಾ ದ್ರೌಪದಿ ಕಾಯ್ದಂತೆ
ಕಾಪಾಡೊ ಈ ಭವಕೂಪದೊಳಗೆ ಬಿದ್ದೆ
ನೀ ಪಿಡಿಕೈಯ ದಯಾಪರಮೂರುತಿ
ಆಪತ್ತು ಬಾಂಧವ ಈ ದೇಹವೃಕ್ಷದಲಿ ದ್ವಾ-
ಸೂಪರಣನಂತೆ ದೂರೇನೋ ಎನ್ನ ಸ –
ಮೀಪದಲ್ಲಿದ್ದು ಸ್ವರೂಪ ತೋರದಲೆ ಸಂ –
ತಾಪ ಬಡಿಸದಿರೆಂದಾಪನಿತು ಪೇಳ್ವೆ
ಭೂಪಾಲ ಭೀಮೇಶಕೃಷ್ಣ ನಿನ್ನ ಪಾದ
ನಾ ಪೊಂದಿದೆನೊ ದೊರೆ ನೀ ಪೊರೆಯೆಂದು || ೪ ||
ಜತೆ
ಏಸೇಸು ಕಾಲಕೆ ಬ್ಯಾಸರದೆ ಭೀಮೇಶಕೃಷ್ಣ
ಲೇಸು ನೀಡೆನಗೆ ಸದಾ ಸುಮಂಗಳವ ||
rAga: kApi
dhruvatALa
iMdu enage ninna saMdaruSana suKa –
voMdu tOrenagaraviMdanayana
maMdAkiniya paDeda muddu caraNa
suMdarAMga tOrenage surEMdranAtha
kaMdarpapitana kAlaMdige ruLi gejje
ceMduLLa padmarEKeyiMdoppuvo
iMdire karakamaladiMda pUjitanAda
caMdravadana ninna celuva pAda
iMdrAdi hara nAraMda surabrahmAdi –
vaMdya ninage kOTi namO namO
eMdu bEDuve dayAsiMdhu enisidAta
kaMdanaMdadi nODi salahO enna
maMdabuddhiya mahAmadaDa pAmara Bava –
baMdhanadoLu siluki noMdenayya
saMdEha mADade salahadiddare ninna
hoMdi bALuvudeMto muMdariye
biMdu mAtradi nAmAmRutava BImESakRuShNa
taMdu nIDenige iMdIvarAkSha || 1 ||
maThyatALa
yugaLa pAdake kaiya mugidu bEDuvenayya
jagadudarane ninna jANatanava biTTu
agaNitaguNamahima aMtarAtmaka dEva
bagebageyali salahO Baktavatsala ninna
maguveMdenna kAyo maMdarOddhara dEva
nigamagOcara svAmi niMtu nODuta enna
cigurudOShada kuDiya civuTi hAkuta ninna
suguNagaLane biTTennavaguNaveNisidare
igO ninagapakIrti Iga oppisuvenu
bigida BavapASa bicci BImESakRuShNa
tegeyade ninhoratI jagadoLaguMTEnayya|| 2 ||
triviDitALa (vacana)
sakala snAnavu nEma hOma japaMgaLu
sakala puNyakShEtra mUrtinAmaMgaLu
sakala purANa vEdAdigraMthagaLu
sakala kAryavu sarvEShTa PalaMgaLu
sakala sauBAgya sAyujya padavigaLu
lakumISa ivu ninna naKaSiKa pariyaMtra
sakala poMdiddavu saKana sArathi samadRuShTili nODalu
sakala siddhiyu sariyAgi kaigUDOdu
SakaTasurAMtaka kakulAti mADade
bakanvairi yenna BArava nI vahisali bEko
ikO ninna caraNakke I dEha arpisuve
gOkulAvAsa ninna pAdake namaskarisuve
mukutidAyaka muddu BImESakRuShNane
Bakutij~jAnadaliDo BayahAri enna || 3 ||
aTTatALa
gOpasutane ninna guruvinvallaBe maha –
daparAdhaveNisade nI karuNadale sAM –
dIpage sutaraniTTa payAMbudhivAsa
kOpadi baydA SiSupAlagolideyo
SrIpati SaraNeMdA draupadi kAydaMte
kApADo I BavakUpadoLage bidde
nI piDikaiya dayAparamUruti
Apattu bAMdhava I dEhavRukShadali dvA-
sUparaNanaMte dUrEnO enna sa –
mIpadalliddu svarUpa tOradale saM –
tApa baDisadireMdApanitu pELve
BUpAla BImESakRuShNa ninna pAda
nA poMdideno dore nI poreyeMdu || 4 ||
jate
EsEsu kAlake byAsarade BImESakRuShNa
lEsu nIDenage sadA sumaMgaLava ||
Leave a Reply