Hanumana maneyavaru

Composer: Shri Vidyaprasanna Teertharu

By Smt.Shubhalakshmi Rao

ಹನುಮನ ಮನೆಯವರು ನಾವೆಲ್ಲರೂ |
ಹನುಮನ ಮನೆಯವರು || ಪ ||

ಅನುಮಾನ ಪಡೆದೆಲೆ ಸ್ಥಳವ
ಕೊಡಿರಿ ಎಮಗೆ ||ಅ .ಪ ||

ಊರ್ಧ್ವಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ |
ಹೃದ್ಗಕ್ತವಾದೆಮ್ಮ ತತ್ತ್ವಗಳನೆ ನೋಡಿ ||
ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲಾ |
ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ ||೧||

ಸತ್ಯ ಮಿಥ್ಯಗಳಿಗೆ ಅಂತರ ಬಲ್ಲೆವು |
ಉತ್ತಮ ನೀಚರೆಂಬುವ ಭೇದ ಬಲ್ಲೆವು ||
ಸುತ್ತಲು ಕಂಡು ಕಾಣದ ಇಹ ಎಲ್ಲಕ್ಕೂ |
ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು ||೨||

ಹಲವು ಲೋಕಗಳುಂಟೆಂಬುದ ಬಲ್ಲೆವು |
ಹಲವು ಯೋನಿಗಳಲ್ಲಿ ಜನ್ಮಗಳೊಲ್ಲವು ||
ಅಳವ ಭೋಧರು ನಮ್ಮ ಕಳುಹಿದರಿಲ್ಲಿಗೆ |
ತಿಳಿಸಿ ಪ್ರಸನ್ನ ಶ್ರೀ ಹರಿಗೆ ವಿಚಾರವ || ೩||


hanumana maneyavaru nAvellarU |
hanumana maneyavaru || pa ||

anumAna paDedele sthaLava
koDiri emage ||a .pa ||

UrdhvapuMDrava nODi Sraddhe Bakuti nODi |
hRudgaktavAdemma tattvagaLane nODi ||
iddudanilleMba abaddha nuDivarallA |
madhvamuniyu namma tiddiruvuda nODi ||1||

satya mithyagaLige aMtara ballevu |
uttama nIcareMbuva BEda ballevu ||
suttalu kaMDu kANada iha ellakkU |
uttamanobbanE hariyeMdu ballevu ||2||

halavu lOkagaLuMTeMbuda ballevu |
halavu yOnigaLalli janmagaLollavu ||
aLava BOdharu namma kaLuhidarillige |
tiLisi prasanna SrI harige vicArava || 3||

Leave a Reply

Your email address will not be published. Required fields are marked *

You might also like

error: Content is protected !!