Shobhana Shobhanave

Composer: Shri Purandara dasaru

ಶೋಭಾನ ಶೋಭಾನವೆ ||ಪ||

ಭೂದೇವಿಯರಸ ವೆಂಕಟರಾಯಗೆ
ಶೋಭಾನ ಶೋಭಾನವೆ |ಅ.ಪ|

ಅಂದು ಕ್ಷೀರಾಂಬುನಿಧಿ ಮೊದಲಾಗಿ
ಇಂದಿರೆ ಹರುಷದಿಂದುದಿಸಿ ಬಂದು
ಕಂದರ್ಪ ಕೋಟಿ ಲಾವಣ್ಯ ಮೂರುತಿಯಾದ
ಮಂದಾರ ಮಾಲೆಯ ಹಾಕಿದ ದೇವಗೆ |೧|

ಜನಕನ ಮನೆಯಲ್ಲಿ ರಾಜಾಧಿ ರಾಜರು
ಎಣಿಕೆಯಿಲ್ಲದಲೆ ಬರುತಿರಲು
ಸನಕಾದಿ ವಂದ್ಯನ ಕಂಡು ಸಂತೋಷದಿ
ಜಾನಕಿ ಮಾಲೆಯ ಹಾಕಿದ ರಾಮಗೆ |೨|

ರುಕುಮನು ಶಿಶುಪಾಲಗನುಜೆಯೀಯುವನೆಂದು
ಸಕಲರಾಯರಲ್ಲಿ ಬಂದಿರಲಾಗಿ
ಭಕುತವತ್ಸಲನನ್ನು ಕಂಡು ಸಂತೋಷದಿ
ರುಕುಮಿಣಿ ಮಾಲೆಯ ಹಾಕಿದ ಕೃಷ್ಣಗೆ |೩|

ಸತ್ಯಭಾಮೆಯು ನೀಲೆ ಭದ್ರೆ ಕಾಳಿಂದಿಯು
ಮಿತ್ರವಿಂದೆಯು ಲಕ್ಷಣೆಯು ಜಾಂಬವತಿ
ಮತ್ತೆ ಆ ಸೋಳ ಸಾಹಸ್ರ ಕನ್ನಿಕೆಯರ
ಪ್ರತ್ಯಕ್ಷವಾಳಿದ ಕಲ್ಯಾಣನಿಗೆ |೪|

ಪದುಮದೇಶದಲೊಬ್ಬ ದೇವಾಂಗನೆಯ
ಪದುಮಮುಖಿ ಶ್ರುತಿ ಹೃತಿಯ
ಪದುಮನಾಭ ಪುರಂದರವಿಠಲಗೆ
ಪದುಮಾವತಿಪ್ರಿಯ ಶ್ರೀನಿವಾಸಗೆ |೫|


SOBAna SOBAnave ||pa||

BUdEviyarasa veMkaTarAyage
SOBAna SOBAnave |a.pa|

aMdu kShIrAMbunidhi modalAgi
iMdire haruShadiMdudisi baMdu
kaMdarpa kOTi lAvaNya mUrutiyAda
maMdAra mAleya hAkida dEvage |1|

janakana maneyalli rAjAdhi rAjaru
eNikeyilladale barutiralu
sanakAdi vaMdyana kaMDu saMtOShadi
jAnaki mAleya hAkida rAmage |2|

rukumanu SiSupAlaganujeyIyuvaneMdu
sakalarAyaralli baMdiralAgi
Bakutavatsalanannu kaMDu saMtOShadi
rukumiNi mAleya hAkida kRuShNage |3|

satyaBAmeyu nIle Badre kALiMdiyu
mitraviMdeyu lakShaNeyu jAMbavati
matte A sOLa sAhasra kannikeyara
pratyakShavALida kalyANanige |4|

padumadESadalobba dEvAMganeya
padumamuKi Sruti hRutiya
padumanABa puraMdaraviThalage
padumAvatipriya SrInivAsage |5|

Leave a Reply

Your email address will not be published. Required fields are marked *

You might also like

error: Content is protected !!