Composer: Shri Purandara dasaru
ನೀರೆ ನೀ ಕರೆತಾರೆ |
ಮಾರಸುಂದರನ ಸುಕುಮಾರ ಶರೀರನ ||ಪ||
ಗೊಲ್ಲರ ಮನೆಯೊಳಗಿದ್ದ ಪಾಲ್ಮೊಸರ
ಮೆಲ್ಲನೆ ಮೆಲ್ಲುವ ವಲ್ಲಭ ಶ್ರೀ ಹರಿಯ |೧|
ಯಾದವರೆಲ್ಲ ಆದರಿಸಿದನ
ವೇದವೇದಾಂತನ ಯಾದವಪ್ರಿಯನ |೨|
ವರ ಗೌರಿ ಪುರದಲ್ಲಿ ವಾಸವಾಗಿಹನ
ವರದ ಪುರಂದರವಿಟ್ಠಲರಾಯನ |೩|
nIre nI karetAre |
mArasuMdarana sukumAra sharIrana ||pa||
gollara maneyoLagidda pAlmosara
mellane melluva vallaBa SrI hariya |1|
yAdavarella Adarisidana
vEdavEdAMtana yAdavapriyana |2|
vara gauri puradalli vAsavAgihana
varada puraMdaraviTThalarAyana |3|
Leave a Reply