Composer: Shri Purandara dasaru
ಶ್ರೀ ಪುರಂದರದಾಸರ ಕೃತಿ
ರಾಗ: ತೋಡಿ ಆದಿತಾಳ
ನೀನೇ ದಯಾಸಂಪನ್ನನೋ , ಕಾವೇರಿರಂಗ ।
ನೀನೇ ಬ್ರಹ್ಮಾದಿ ವಂದ್ಯನೋ ॥ ಪ ॥
ಬಂಧುಗಳೆಲ್ಲರ ಮುಂದಾ ದ್ರುಪದನ ।
ನಂದನೆಯೆಳೆ ತಂದು ಸೀರೆಯ ಸೆಳೆವಾಗ ॥
ಬಂಧು ಕೃಷ್ಣ ಸಲಹೆಂದರೆ ಅಕ್ಷಯ – ।
ವೆಂದು ಕಾಯ್ದ ಗೋವಿಂದನು ನೀನೇ ॥ 1 ॥
ನಿಂದಿತ ಕರ್ಮವನೊಂದುಳಿಯದೆ ಬೇ – ।
ಕೆಂದು ಮಾಡಿದನಂದಜಮಿಳನು ॥
ಕಂದ ನಾರಗ ಎಂದರೆ ಮುಕುತಿಯ ।
ಕುಂದದೆಯಿತ್ತ ಮುಕುಂದನು ನೀನೇ ॥ 2 ॥
ಮತ್ತಗಜವ ನೆಗಳೊತ್ತಿ ಪಿಡಿದು, ಬಲು ।
ಒತ್ಯಧರೋಷ್ಠವ ಮೃತ್ಯುವಿನಂತಿರೆ ॥
ಭಕ್ತರ ಸಲಹುವ ಪುರಂದರವಿಟ್ಠಲ ।
ಹಸ್ತಿಗೊಲಿದ ಪರವಸ್ತುವು ನೀನೇ ॥ 3 ॥
SrI puraMdaradAsara kRuti
rAga: tODi AditALa
nInE dayAsaMpannanO , kAvEriraMga |
nInE brahmAdi vaMdyanO || pa ||
baMdhugaLellara muMdA drupadana |
naMdaneyeLe taMdu sIreya seLevAga ||
baMdhu kRuShNa salaheMdare akShaya – |
veMdu kAyda gOviMdanu nInE || 1 ||
niMdita karmavanoMduLiyade bE – |
keMdu mADidanaMdajamiLanu ||
kaMda nAraga eMdare mukutiya |
kuMdadeyitta mukuMdanu nInE || 2 ||
mattagajava negaLotti piDidu, balu |
otyadharOShThava mRutyuvinaMtire ||
Baktara salahuva puraMdaraviTThala |
hastigolida paravastuvu nInE || 3 ||
Leave a Reply