Naanena Madideno rangayya

Composer: Shri Purandara dasaru

By Smt.Shubhalakshmi Rao

ನಾನೇನ ಮಾಡಿದೆನೋ ರಂಗಯ್ಯ
ನಾನೇನ ಮಾಡಿದೆನೋ ರಂಗಯ್ಯ ರಂಗ
ನೀ ಎನ್ನ ಕಾಯಬೇಕೋ ||ಪ||

ಮಾನಾಭಿಮಾನವು ನಿನ್ನದು ಎನಗೇನು
ದೀನರಕ್ಷಕ ತಿರುಪತಿಯ ವೆಂಕಟರಮಣ ||ಅ.ಪ||

ರಕ್ಕಸ ಸೂದನನೇ ಕೇಳು ಧ್ರುವರಾಯ ಚಿಕ್ಕವನಲ್ಲವೇನೋ
ಉಕ್ಕಿ ಈಬರುವ ಕರ್ಮ ಮಾಡಿದ ಅಜಮಿಳ
ನಿಮ್ಮಕ್ಕನ ಮಗನೇನೋ ||೧||

ಕರೀರಾಜ ಕರೆಸಿದನೇ ದ್ರೌಪದಿ ದೇವಿ
ಬರೆದೋಲೆ ಕಳುಹಿದಳೇ
ಹರುಷದಿಂದಲಿ ಋಷಿಪತ್ನಿಯ ಶಾಪವ
ಪರಿಹರಿಸಿದೆಯಲ್ಲೋ ||೨||

ಮುಪ್ಪಿಡಿ ಅವಲಕ್ಕಿಯ ತಂದವನಿಗೆ
ಒಪ್ಪುವಂತೆ ಕೊಡಲಿಲ್ಲವೇ
ಸರ್ಪಶಯನ ಶ್ರೀಪುರಂದರ ವಿಠ್ಠಲ
ಅಪ್ರಮೇಯ ಕಾಯೋ ||೩||


nAnEna mADidenO raMgayya
nAnEna mADidenO raMgayya raMga
nI enna kAyabEkO ||pa||

mAnABimAnavu ninnadu enagEnu
dInarakShaka tirupatiya veMkaTaramaNa ||a.pa||

rakkasa sUdananE kELu dhruvarAya cikkavanallavEnO
ukki eebaruva karma mADida ajamiLa
nimmakkana maganEnO ||1||

karIrAja karesidanE draupadi dEvi
baredOle kaLuhidaLE
haruShadiMdali RuShipatniya SApava
pariharisideyallO ||2||

muppiDi avalakkiya taMdavanige
oppuvaMte koDalillavE
sarpaSayana SrIpuraMdara viThThala
apramEya kAyO ||3||

Leave a Reply

Your email address will not be published. Required fields are marked *

You might also like

error: Content is protected !!