Composer: Shri Purandara dasaru
ಹರಿ ಹರಿ ಎನ್ನಲಿಕ್ಕೆ ಹೊತಿಲ್ಲ,
ನರ ಜನ್ಮ ವ್ಯರ್ಥವಾಗಿ ಹೋಗುತದಲ್ಲ |ಪ|
ಹರಿ ಜಾಗರಣೆಯಲ್ಲಿ ಪಾರಣೆ ಚಿಂತೆ,
ನಿರುತ ಯಾತ್ರೆಯಲಿ ಶಾಕದ ಚಿಂತೆ,
ಸರ್ವ ಸತ್ಕಾರ್ಯದಿ ಧನದ ಮೇಲಿನ ಚಿಂತೆ,
ಪುರಾಣ ಕೇಳ್ವಾಗ ಗೃಹದ ಚಿಂತೆ ||೧||
ಕರ್ಮದಿ ಒಂದು ಚಿಂತೆ,
ಧರ್ಮದಿ ಒಂದು ಚಿಂತೆ,
ಪೇರ್ಮನೆ ಮಾಡಲು ಬಲು ಚಿಂತೆ,
ವರ್ಮ ವೈರದಿ ಚಿಂತೆ,
ಈರ್ಮನಸಾಗೆ ಚಿಂತೆ,
ದುರ್ಮದದಿ ನಡೆಯೇ ಪ್ರಾಣದ ಚಿಂತೆ ||೨||
ಗಂಗೆಯಲ್ಲಿ ಮುಳುಗುವಾಗ
ಚೊಂಬು ಮೇಲಿನ ಚಿಂತೆ,
ಸಂಗಡದವರು ಹೋಗುವ ಚಿಂತೆ,
ತಂದೆ ಶ್ರೀಪುರಂದರ ವಿಠ್ಠಲ ರಾಯನ
ಹಿಂಗದೆ ಭಜಿಸಲು ಚಿಂತೆ ನಿಸ್ಚಿಂತೆ ||೩||
hari hari ennalikke hotilla,
nara janma vyarthavAgi hOgutadalla |pa|
hari jAgaraNeyalli pAraNe chiMte,
niruta yAtreyali shAkada chiMte,
sarva satkAryadi dhanada mElina chiMte,
purANa kELvAga gRuhada chiMte ||1||
karmadi oMdu chiMte,
dharmadi oMdu chiMte,
pErmane mADalu balu chiMte,
varma vairadi chiMte,
eermanasAge chiMte,
durmadadi naDeyE prANada chiMte ||2||
gaMgeyalli muLuguvAga
choMbu mElina chiMte,
saMgaDadavaru hOguva chiMte,
taMde shrIpuraMdara viThThala rAyana
hiMgade bhajisalu chiMte nischiMte ||3||
Leave a Reply