-
Hari Hari yennalikke
Composer: Shri Purandara dasaru ಹರಿ ಹರಿ ಎನ್ನಲಿಕ್ಕೆ ಹೊತಿಲ್ಲ,ನರ ಜನ್ಮ ವ್ಯರ್ಥವಾಗಿ ಹೋಗುತದಲ್ಲ |ಪ| ಹರಿ ಜಾಗರಣೆಯಲ್ಲಿ ಪಾರಣೆ ಚಿಂತೆ,ನಿರುತ ಯಾತ್ರೆಯಲಿ ಶಾಕದ ಚಿಂತೆ,ಸರ್ವ ಸತ್ಕಾರ್ಯದಿ ಧನದ ಮೇಲಿನ ಚಿಂತೆ,ಪುರಾಣ ಕೇಳ್ವಾಗ ಗೃಹದ ಚಿಂತೆ ||೧|| ಕರ್ಮದಿ ಒಂದು ಚಿಂತೆ,ಧರ್ಮದಿ ಒಂದು ಚಿಂತೆ,ಪೇರ್ಮನೆ ಮಾಡಲು ಬಲು ಚಿಂತೆ,ವರ್ಮ ವೈರದಿ ಚಿಂತೆ,ಈರ್ಮನಸಾಗೆ ಚಿಂತೆ,ದುರ್ಮದದಿ ನಡೆಯೇ ಪ್ರಾಣದ ಚಿಂತೆ ||೨|| ಗಂಗೆಯಲ್ಲಿ ಮುಳುಗುವಾಗಚೊಂಬು ಮೇಲಿನ ಚಿಂತೆ,ಸಂಗಡದವರು ಹೋಗುವ ಚಿಂತೆ,ತಂದೆ ಶ್ರೀಪುರಂದರ ವಿಠ್ಠಲ ರಾಯನಹಿಂಗದೆ ಭಜಿಸಲು ಚಿಂತೆ ನಿಸ್ಚಿಂತೆ ||೩||…
